ಪುತ್ತೂರು:ಹೋರಿಯೊಂದನ್ನು ನಡೆಸಿಕೊಂಡು ಹೋಗುತ್ತಿದ್ದ ಹಿಂದು ಮತ್ತು ಮುಸ್ಲಿಂ ವ್ಯಕ್ತಿಗಳಿಬ್ಬರನ್ನು ಹಿಂದು ಸಂಘಟನೆ ಕಾರ್ಯಕರ್ತರು ವಿಚಾರಿಸಿದ ಘಟನೆ ಮಾ.2ರಂದು ರಾತ್ರಿ ಕೃಷ್ಣನಗರದಲ್ಲಿ ನಡೆದಿದ್ದು ಮಾಹಿತಿ ತಿಳಿದು ಪೊಲೀಸರು ಆಗಮಿಸಿ ಅಹಿತಕರ ಘಟನೆಗಳಾಗದಂತೆ ನೋಡಿಕೊಂಡಿದ್ದಾರೆ.
ಕೆರೆಮೂಲೆ ನಿವಾಸಿ ಮುಸ್ಲಿಂ ಮತ್ತು ಕೆಮ್ಮಾಯಿಯ ಹಿಂದು ಓರ್ವರು ಸೇರಿಕೊಂಡು ಹೋರಿಯೊಂದನ್ನು ನಡೆಸಿಕೊಂಡು ಹೋಗುತ್ತಿದ್ದರು.ಅವರ ವರ್ತನೆ ಕಂಡು ಅನುಮಾನಗೊಂಡ ಹಿಂದು ಸಂಘಟನೆ ಕೆಲ ಕಾರ್ಯಕರ್ತರು ಅವರನ್ನು ವಿಚಾರಿಸಿದ್ದಾರೆ.
ಕಳೆದೆರಡು ದಿನಗಳಿಂದ ಮನೆಯ ಹಟ್ಟಿಯಿಂದ ತಪ್ಪಿಸಿದ್ದ ಹೋರಿಯನ್ನು ಕರೆದೊಯ್ಯುತ್ತಿದ್ದೇವೆ ಎಂದು ಅವರೀರ್ವರೂ ಮಾಹಿತಿ ನೀಡಿದ್ದರು.ಆದರೆ ಇದಕ್ಕೊಪ್ಪದ ಹಿಂದು ಸಂಘಟನೆಯವರು ಪೊಲೀಸರಿಗೆ ಮಾಹಿತಿ ನೀಡಿದರು.ಸ್ಥಳಕ್ಕಾಗಮಿಸಿದ ಪೊಲೀಸರು, ಹೋರಿಯನ್ನು ನಡೆಸಿಕೊಂಡು ಹೋಗುತ್ತಿದ್ದ ಈರ್ವರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಕಸಾಯಿಖಾನೆಗಾಗಿಯೇ ಹೋರಿ ಕರುಗಳ ಸಾಕಣೆ:
ಕೆರೆಮೂಲೆ ಸಮೀಪ ವ್ಯಕ್ತಿಯೊಬ್ಬರು ಹೋರಿ ಕರುಗಳನ್ನು ಸಾಕುತ್ತಿದ್ದು ಅವುಗಳು ದಷ್ಟಪುಷ್ಟವಾಗಿ ಬೆಳೆದ ಬಳಿಕ ಕಸಾಯಿಖಾನೆಗೆ ಕೊಂಡೊಯ್ಯಲಾಗುತ್ತಿದೆ.ಈ ಕುರಿತು ಪೊಲೀಸರು ತನಿಖೆ ನಡೆಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅವರು ಆಗ್ರಹಿಸಿದ್ದಾರೆ.