ವೀರಮಂಗಲ ಎಸ್‌ಡಿಎಂಸಿಗೆ ತಾ| ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ ಪ್ರದಾನ

0

ಪುತ್ತೂರು: ವೀರಮಂಗಲ ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿಗೆ ಪುತ್ತೂರು ತಾಲೂಕಿನ ಅತ್ಯತ್ತಮ ಶಾಲಾಭಿವೃದ್ಧಿ ಸಮಿತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಉತ್ತಮವಾಗಿ ಶಾಲಾಭಿವೃದ್ಧಿಗಾಗಿ ಶ್ರಮಿಸಿ ಮಾದರಿ ಕಾರ್ಯಕ್ರಮ ರೂಪಿಸಿದ ಕಾರಣಕ್ಕಾಗಿ ಈ ಪ್ರಶಸ್ತಿ ನೀಡಲಾಯಿತು.

ನೇರಳಕಟ್ಟೆಯಲ್ಲಿ ನಡೆದ ಜಿಲ್ಲಾ ಮಟ್ಡದ ಎಸ್‌ಡಿಎಂಸಿ ಸಮಾವೇಶದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಅನುಪಮ ಪ್ರಶಸ್ತಿ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ದಿನೇಶ್ ಶೆಟ್ಟಿ, ಉಪಾಧ್ಯಕ್ಷ ರಝಾಕ್, ಸದಸ್ಯರಾದ ಹಮೀದ್, ಪುಷ್ಪಾ ಉಪಸ್ಥಿತರಿದ್ದರು.

ಎಸ್‌ಡಿಎಂಸಿಯು ವೀರಮಂಗಲ ಶಾಲೆಗೆ ರೂ.20 ಲಕ್ಷ ವೆಚ್ಚದ ಸುಂದರವಾದ ಸಭಾಂಗಣ, ಶೌಚಾಲಯ ತರಕಾರಿ ತೋಟ ನಿರ್ಮಿಸಿ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಿತ್ತು. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯಿಂದ ಅತ್ಯುತ್ತಮ ಎಸ್‌ಡಿಎಂಸಿ ಎಂದು ಗುರುತಿಸಲಾಗಿತ್ತು.

LEAVE A REPLY

Please enter your comment!
Please enter your name here