ಬಡಗನ್ನೂರು: ಐತಿಹಾಸಿಕ ಕ್ಷೇತ್ರ ಪಡುಮಲೆ ಶ್ರೀ ಕೂವೆಶಾಸ್ತಾರ ವಿಷ್ಣುಮೂರ್ತಿ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಮಧ್ಯಾಹ್ನ ಗಂ 1.04 ರಿಂದ 3.1ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವರ ಪ್ರತಿಷ್ಠೆ ಸಾವಿರಾರು ಮಂದಿ ಭಕ್ತರ ಉಪಸ್ಥಿತಿಯೊಂದಿಗೆ ಸಾಂಪ್ರದಾಯಿಕವಾಗಿ ವೈಭವದಿಂದ ನಡೆಯಿತು.
ಕ್ಷೇತ್ರದ ತಂತ್ರಿ ವೇ. ಮೂ. ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ವೇ. ಮೂ. ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಪೂರ್ವಾಹ್ನ 108 ತೆಂಗಿನಕಾಯಿ ಗಣಪತಿ ಹೋಮ, ಪ್ರತಿಷ್ಠ ಪಾಣಿ, ಪ್ರತಿಷ್ಠೆಯ ಅನಂತರ ಪ್ರತಿಷ್ಠಾ ಬಲಿ, ಅಂಕುರಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು.
ಆರಂಭದಲ್ಲಿ ಕೇಂದ್ರ ಸಾನಿಧ್ಯ ವಿಷ್ಣುಮೂರ್ತಿ ದೇವರ ಮೂರ್ತಿ ಪ್ರತಿಷ್ಠಾಪಿಸಿ ಅಭಿಷೇಕ ನೆರವೇರಿಸಲಾಯಿತು. ಅನಂತರ ಶಾಸ್ತಾರ ದೇವರು, ಗಣಪತಿ, ಮೂಲ ಸ್ಥಾನ ಮದಕದಲ್ಲಿ ದೇವಿ ರಾಜರಾಜೇಶ್ವರಿ, ನಾಗನ ಸಾನಿಧ್ಯದಲ್ಲಿ ಪ್ರತಿಷ್ಠೆ, ಅಭಿಷೇಕ, ಪೂಜೆ ನಡೆಯಿತು. ಕುಂಟಾರು ವೇ. ಮೂ. ಶ್ರೀಧರ ತಂತ್ರಿಯವರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಸಂಜೆ ನಿತ್ಯ ನೈಮಿತ್ಯಗಳ ನಿರ್ಣಯ, ಭದ್ರದೀಪವಿಟ್ಟು ಕವಾಟ ಬಂಧನ, ಅಂಕುರ ಪೂಜೆ, ಸೋಪಾನ ಪೂಜೆ, ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು, ದೇವಸ್ಥಾನದ ಪವಿತ್ರ ಪಾಣಿ ಕೇಶವ ಭಟ್ ಕೂವೆತೋಟ, ಬ್ರಹ್ಮಕಲಶೋತ್ವವ ಸಮಿತಿ ಗೌರವಾಧ್ಯಕ್ಷ ಬಲರಾಜ್ ಶೆಟ್ಟಿ ನಿಟ್ಟೆಗುತ್ತು, ಪೇರಾಲು, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮನೋಹರ, ಪ್ರಧಾನ ಕಾರ್ಯದರ್ಶಿ ವಿಷ್ಣು ಭಟ್ ಪಡ್ಪು, ಆರ್ಥಿಕ ಸಮಿತಿ ಅಧ್ಯಕ್ಷ ನಾರಾಯಣ ಭಟ್ ಬಿ., ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಚಂದ್ರಶೇಖರ ಆಳ್ವ ಗಿರಿಮನೆ, ಪ್ರಭಾಕರ ಗೌಡ ಕನ್ನಯ, ಅಪ್ಪಯ್ಯ ನಾಯ್ಕ, ತಿಲೋತ್ತಮ ರೈ, ಸುಮಿತ್ರಾ ಯು.ಕೆ, ಅರ್ಚಕ ಮಹಾಲಿಂಗ ಭಟ್, ಉತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಾರಾಯಣ ನಾಯ್ಕ, ಸಮಿತಿಗಳ ಪ್ರಮುಖರಾದ ಜಯಂತ್ ರೈ ಕುದ್ಕಾಡಿ, ಸತೀಶ್ ರೈ ಕಟ್ಟಾವು, ಶ್ರೀನಿವಾಸ ಗೌಡ ಕನ್ನಯ, , ಪದ್ಮನಾಭ ರೈ ಅರೆಪ್ಪಾಡಿ, ಅಚ್ಯುತ ಭಟ್ ಪೈರುಪುಣಿ, , ರಾಜೇಶ್ ರೈ ಮೇಗಿನಮನೆ, ಸುಬ್ಬಪ್ಪ ಪಾಟಾಳಿ ಪಟ್ಟೆ, ಬಡಗನ್ನೂರು ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಕೆ., ಉಪಾಧ್ಯಕ್ಷ ಸಂತೋಷ್ ಅಳ್ವ, ,ಅಶಿತ್ ರೈ ಪೇರಾಲು, ರವಿರಾಜ ರೈ ಸಜಂಕಾಡಿ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.