ನಾಳೆ(ಮಾ.4) ಪುರುಷರಕಟ್ಟೆ ಪೊಸಮೆನ್ಪಡವು ಮುಗೇರಡ್ಕ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ನೇಮೋತ್ಸವ

0

ಪುತ್ತೂರು; ನರಿಮೊಗರು ಗ್ರಾಮದ ಪುರುಷರಕಟ್ಟೆ ಪೊಸಮೆನ್ಪದವು ಮುಗೇರಡ್ಕ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ಶ್ರೀ ಕಲ್ಕುಡ-ಕಲ್ಲುರ್ಟಿ ಹಾಗೂ ಪಂಜುರ್ಲಿ ಗುಳಿಗ ದೈವಗಳ ವರ್ಷಾವಧಿ ನೇಮೋತ್ಸವವು ಮಾ.4ರಂದು ನಡೆಯಲಿದೆ.

ಬೆಳಿಗ್ಗೆ ಗಣಹೋಮ, ನಗರ ತಂಬಿಲ, ಪರಿವಾರ ದೈವಗಳಿಗೆ ತಂಬಿಲ, ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡದು ಸಂಜೆ ದೈವಗಳ ಭಂಡಾರ ತೆಗೆದು ಕಲ್ಕುಡ, ಕಲ್ಲುರ್ಟಿ ದೈವಗಳ ನೇಮ, ಪ್ರಸಾದ ವಿತರಣೆ, ಅನ್ನಸಂರ್ತಣೆಯ ಬಳಿಕ ಗಯಾಪದ ಕಲಾವಿದೆರ್ ಉಪ್ಪಿನಂಗಡಿಯವರಿಂದ ‘ಏತ್ ಪಂಡಲ ಆತೆ’ ತು ಹಾಸ್ಯಮಯ ನಾಟಕ ನಡೆಯಲಿದೆ.

ನಂತರ ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here