ರಾಮಕುಂಜ ಗ್ರಾ.ಪಂನಲ್ಲಿ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ

0

ಪುತ್ತೂರು: ಕಡಬ ತಾಲೂಕಿನ ರಾಮಕುಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ 6 ದಿನಗಳ ನಡೆಯಲಿರುವ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮವು ಫೆ.27 ರಂದು ಉದ್ಘಾಟನೆಗೊಂಡಿತು.

ರಾಮಕುಂಜ ಗ್ರಾ.ಪಂ ಅಧ್ಯಕ್ಷೆ ಮಾಲತಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಕಡಬ ತಾಲೂಕು ಕುಮಾರಧಾರ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಅಧ್ಯಕ್ಷಸುಜಾತ ಗಣೇಶ್, ಕಡಬ ತಾಲೂಕು ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ರಾಮಕುಂಜ ಗ್ರಾ. ಪಂ ಪಿಡಿಓ ಜೆರಾಲ್ಡ್ ಮಸ್ಕರೇನಸ್, ಕರ್ನಾಟಕ ಉದ್ಯಮಶೀಲತಾ ಅಭಿವೃದ್ದಿ ಕೇಂದ್ರದ ಜಂಟಿ ನಿರ್ದೇಶಕ ಅರವಿಂದ ಡಿ ಬಾಳೇರಿ, ತಾಲೂಕು ಅಭಿಯಾನ ನಿರ್ವಹಣಾ ಘಟಕದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಕೆ., ವಲಯ ಮೇಲ್ವಿಚಾರಕಿ ನಮಿತಾ, ಬಿ.ಆರ್‌ಪಿ -ಇಪಿಗಳಾದ ದೀಪಶ್ರೀ ಮತ್ತು ಅಂಕಿತಾ, ಮಂಗಳೂರು ಸಿಡಾಕ್ ತರಬೇತಿ ಸಂಸ್ಥೆ ತರಬೇತುದಾರರಾದ ವಿದ್ಯಾ ಮತ್ತು ಪ್ರವೀಷಾ ರಾಮಕುಂಜ ಸಂಜೀವಿನಿ ಒಕ್ಕೂಟದ ಸಮುದಾಯ ಸಂಪನ್ಮೂಲ ವ್ಯಕ್ತಿಗಳು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here