ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಸಭೆ:
ಪುತ್ತೂರಿನಲ್ಲಿ ಯಶಸ್ವಿನಿ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕರಿಗೆ ಮನವಿ ನೀಡಲು ನಿರ್ಧಾರ

0

ಪುತ್ತೂರು: ಬನ್ನೂರು ರೈತರ ಸೇವಾ ಸಹಕಾರಿ ಸಂಘ್ ಮಾಸಿಕ ಸಭೆಯು ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಹಿಂದೆ ಯಶಸ್ವಿನಿ ವಿಮಾ ಯೋಜನೆಯ ಸೌಲಭ್ಯವು ಪುತ್ತೂರಿನ ಎಲ್ಲಾ ಆಸ್ಪತ್ರೆಗಳಲ್ಲಿ ದೊರೆಯುತ್ತಿತ್ತು. ಪ್ರಸ್ತುತ ಸಾಲಿನಲ್ಲಿ ಯಶಸ್ವಿನಿ ಯೋಜನೆಯಡಿ ನೋಂದಾಯಿತ ಫಲಾನುಭಿಗಳಿಗೆ ಪುತ್ತೂರಿನ ಯಾವುದೇ ಆಸ್ಪತ್ರೆಗಳಲ್ಲಿ ಯಶಸ್ವಿನಿ ಸೌಲಭ್ಯ ದೊರೆಯದ ಕಾರಣ ಮಂಗಳೂರಿಗೆ ಅಲೆದಾಡುವಂತಾಗಿದೆ. ಈ ನಿಟ್ಟಿನಲ್ಲಿ ಯಶಸ್ವಿನಿ ವಿಮಾ ಸೌಲಭ್ಯವು ಪುತ್ತೂರಿನ ಎಲ್ಲಾ ಆಸ್ಪತ್ರೆಗಳಲ್ಲಿ ಸಿಗುವಂತೆ ಆಗಬೇಕು. ಮಾತ್ರವಲ್ಲದೆ ಪುತ್ತೂರಿನಲ್ಲಿ ನೂತನವಾಗಿ ಯಶಸ್ವಿನಿ ವಿಮಾ ಸೌಲಭ್ಯ ಆಸ್ಪತ್ರೆ ತೆರೆಯುವಂತೆ ಪುತ್ತೂರು ಶಾಸಕರಿಗೆ ಮನವಿ ನೀಡಲು ನಿರ್ಣಯಿಸಲಾಯಿತು.


ಸುಸ್ಥಿ ಸಾಲಗಾರರ ಮನೆಮನೆಗಳಿಗೆ ಭೇಟಿ ನೀಡಿ ಅವರ ಮನವೊಲಿಸಿ ಸಾಲ ವಸೂಲಾತಿಗಾಗಿ ಕ್ರಮ ಕೈಗೊಳ್ಳುವಂತೆ ನಿರ್ಣಯಿಸಲಾಯಿತು. ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಪದೋನ್ನತಿಗೊಂಡ ರಾಧಾ ಬಿ. ರೈ ಹಾಗೂ ಪ್ರಧಾನ ವ್ಯವಸ್ಥಾಪಕರಾದ ಪುರಂದರ ನಾಯ್ಕರವರನ್ನು ಅಭಿನಂದಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ರಾಜಶೇಖರ ಜೈನ್, ನಿರ್ದೇಶಕರಾದ ಸುಭಾಞ ನಾಯಕ್, ಮೋಹನ್ ಪಕ್ಕಳ, ದೇವಾನಂದ ಕೆ., ರಾಜು ಎಮ್., ಜಯಲಕ್ಷ್ಮಿ ಸುರೇಶ್, ಸುಂದರ ಪೂಜಾರಿ ಬಡಾವು, ಸ್ಮಿತಾ ಜೆ. ಭಂಡಾರಿ, ಸುಬ್ರಹ್ಮಣ್ಯ ಗೌಡ, ಅಶ್ರಫ್ ಕಲ್ಲೇಗ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here