ಕಬಕದಲ್ಲಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ೨೧ನೇ ಶಾಖೆ ಉದ್ಘಾಟನೆ

0

ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಸಂಸ್ಥೆ ಬೆಳೆದು ನಿಂತಿದೆ: ಶಶಿಕುಮಾರ್ ರೈ ಬಾಲ್ಯೊಟ್ಟು

ಜನರ ಭಾವನೆಗೆ ಸ್ಪಂಧಿಸುವ ಕೆಲಸ ನಿರಂತರ ಸಂಸ್ಥೆಯಿಂದಾಗಲಿ: ವಿನಯ್ ಕುಮಾರ್

ಪ್ರೀತಿ ವಿಶ್ವಾಸದ ಸೇವೆ ಸಂಸ್ಥೆಯ ಏಳಿಗೆಗೆ ಪೂರಕ: ಪಂಜಿಗುಡ್ಡೆ ಈಶ್ವರ ಭಟ್

ರಾಜ್ಯದಲ್ಲಿ ಗುರುತಿಸುವ ಸಂಸ್ಥೆಯಾಗಿ ಬೆಳಗಲಿ: ಸತೀಶ್ ಕುಮಾರ್ ಕೆಡೆಂಜಿ

ತೀ ಕಡಿಮೆ ಅವಧಿಯಲ್ಲಿ ಸಂಸ್ಥೆ ಈ ಮಟ್ಟಕ್ಕೆ ಬೆಳೆದಿರುವುದು ಸಂತಸದ ವಿಚಾರ: ಜಯಂತ ನಡುಬೈಲ್

ಪಾರದರ್ಶಕ ವ್ಯವಹಾರದ ಮೂಲಕ ಸಂಸ್ಥೆಗೆ ಯಶಸ್ಸಾಗಿದೆ: ಭಗೀರಥ ಜಿ.

ಗ್ರಾಹಕರ ಇಚ್ಚೆಗನುಸಾರ ಸಹಕಾರ ನೀಡುವಲ್ಲಿ ಸಂಸ್ಥೆ ಭದ್ಧವಾಗಿದೆ: ಯಂ.ಮೋನಪ್ಪ ಪೂಜಾರಿ

ಪುತ್ತೂರು: ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ ಪುರಸ್ಕೃತ ಬೆಳ್ತಂಗಡಿಯಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ೨೧ನೇ ಕಬಕ ಶಾಖೆ ಮಾ.೫ರಂದು ಪುತ್ತೂರು – ಮಂಗಳೂರು‌ ರಸ್ತೆಯ ಕಬಕದ ವಿನಾಯಕ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿ ಉದ್ಘಾಟನೆಗೊಂಡಿತು‌.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟುರವರು
ಶಾಖೆಯ ಕಚೇರಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಗುರುದೇವ ಸಹಕಾರಿ ಬೆಳೆದು ನಿಂತಿದೆ. ಬೆಳ್ತಂಗಡಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಸಂಸ್ಥೆಯ ಶಾಖೆ ಕಬಕದಲ್ಲಿ ಆರಂಭಗೊಂಡಿದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಆರ್ಥಿಕವಾಗಿ ಹಿಂದುಳಿದವರನ್ನು ಮೇಲಕ್ಕೆತ್ತುವ ಕೆಲಸ ನಿರಂತರವಾಗಿ ಈ ಸಂಸ್ಥೆಯಿಂದ ಆಗುತ್ತಿದೆ. ಉತ್ತಮ ಸೇವೆ ನೀಡಿದಲ್ಲಿ ಸಂಸ್ಥೆ ಯಶಸ್ಸಾಗುತ್ತದೆ ಎನ್ನುವುದಕ್ಕೆ ಈ ಸಂಸ್ಥೆಯೆ ಸ್ಪಷ್ಟ ಉದಾಹರಣೆಯಾಗಿದೆ‌. ಸಂಸ್ಥೆ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದರು.

ಕಬಕ ಗ್ರಾ.ಪಂ.ಅಧ್ಯಕ್ಷರಾದ ವಿನಯ್ ಕುಮಾರ್ ಕೆ.ರವರು ಭದ್ರತೆ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗವಾಗಿರುವ ನಮ್ಮ ಗ್ರಾಮಕ್ಕೆ ಇಂತಹ ಸಂಸ್ಥೆಯ ಅಗತ್ಯ ಬಹಳಷ್ಟಿದೆ. ಜನರ ಭಾವನೆಗೆ ಸ್ಪಂಧಿಸುವ ಕೆಲಸ ನಿರಂತರ ಸಂಸ್ಥೆಯಿಂದಾಗಲಿ ಎಂದು ಅವರು ಶುಭಹಾರೈಸಿದರು‌.

ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಈಶ್ವರ್ ಭಟ್ ಪಂಜಿಗುಡ್ಡೆರವರು ಭದ್ರತಾ ಕೋಶವನ್ನು ಉದ್ಘಾಟಿಸಿ ಮಾತನಾಡಿ ಸರಿಯಾದ ಆಡಳಿತ ಮಂಡಳಿ ಇದ್ದರೆ ಸಂಸ್ಥೆ ಯಶಸ್ಸು ಸಾಧಿಸಲು ಸಾಧ್ಯ ಎನ್ನುವುದಕ್ಕೆ ಶ್ರೀ ಗುರುದೇವ ವಿವಿದೋದ್ಧೇಶ ಸಹಕಾರ ಸಂಘ ಪ್ರತ್ಯಕ್ಷ ಸಾಕ್ಷಿಯಾಗಿದೆ‌. ಸಮಾಜ ಮುಖಿಯಾಗಿರುವ ಕೆಲಸ ಕಾರ್ಯಗಳಲ್ಲಿ ನಿರಂತರವಾಗಿ ಸಂಸ್ಥೆ ತೊಡಗಿಕೊಂಡಿರುವುದು ಅಭಿನಂದನೀಯ. ಪ್ರೀತಿ ವಿಶ್ವಾಸದ ಸೇವೆ ಸಂಸ್ಥೆಯ ಏಳಿಗೆಗೆ ಪೂರಕ. ನಾವು ಆದಷ್ಟು ಇಂತಹ ಸಹಕಾರ ಸಂಘಗಳಲ್ಲಿ ವ್ಯವಹಾರವನ್ನು ನಡೆಸುವುದನ್ನು ಅಭ್ಯಾಸ ಮಾಡಿಕೊಡಬೇಕಾಗಿದೆ. ಇದರಿಂದಾಗಿ ನಮಗೆ ಒಳಿತೇ ಆಗಿದೆ ಎಂದರು.

ಪುತ್ತೂರು ಬ್ರಹ್ಮಶ್ರೀ ನಾರಾಯಣಗುರು
ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿರವರು ಗಣಕಯಂತ್ರವನ್ನು ಉದ್ಘಾಟನೆ ಮಾಡಿ ಮಾತನಾಡಿ ಆಡಳಿತ ಮಂಡಳಿಯ ನಿಸ್ಪಕ್ಷಪಾತ ಪ್ರಯತ್ನದೊಂದಿಗೆ ಸಿಬ್ಬಂದಿಗಳ ನಗುಮುಖುದ ಸೇವೆಯಿಂದ ಸಂಸ್ಥೆ ಇಷ್ಟೆತ್ತರಕ್ಕೆ ಬೆಳಯಲು ಸಾಧ್ಯವಾಗಿದೆ. ಈ ಸಂಸ್ಥೆ ರಾಜ್ಯದಲ್ಲಿ ಗುರುತಿಸುವ ಸಂಸ್ಥೆಯಾಗಿ ಬೆಳಗಲಿ ಎಂದು ಶುಭಹಾರೈಸಿದರು.

ಪುತ್ತೂರು ಅಕ್ಷಯ ಕಾಲೇಜಿನ ಅಧ್ಯಕ್ಷರಾದ
ಜಯಂತ ನಡುಬೈಲುರವರು ಉಳಿತಾಯ ಖಾತೆ ಪುಸ್ತಕ ವಿತರಣೆ ಮಾಡಿ ಅತೀ ಕಡಿಮೆ ಅವಧಿಯಲ್ಲಿ ಇಷ್ಟೊಂದು ಬೆಳೆದಿರುವುದು ಸಂತಸದ ವಿಚಾರ. ಸಂಸ್ಥೆಯ ಹುಟ್ಟು ಕೇವಲ ವ್ಯವಹಾರಕ್ಕಾಗಿ ಆಗಿರದೆ ನಾರಾಯಣ ಗುರುಗಳ ತತ್ವ ಸಿದ್ದಾಂತವನ್ನು ಪಾಲನೆ ಮಾಡಿಕೊಂಡು ಮುಂದುವರೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಸಂಸ್ಥೆಗೆ ನಾನು ನನ್ನಿಂದಾಗುವ ಸಹಕಾರವನ್ನು ನೀಡಲು ಸದಾ ಸಿದ್ದನಿದ್ದೇನೆ.

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷರಾದ ಭಗೀರಥ ಜಿ.ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪಾರದರ್ಶಕ ವ್ಯವಹಾರದ ಮೂಲಕ ಸಂಸ್ಥೆಗೆ ಯಶಸ್ಸಾಗಿದೆ. ಸಹಕಾರ ಸಂಘದಲ್ಲೇ ವ್ಯವಹಾರ ಮಾಡಿ. ನಮ್ಮ ಸಂಸ್ಥೆಯ ಶಾಖೆಯನ್ನು ಕಬಕದಲ್ಲಿ ಆರಂಬಿಸಿದ್ದೇವೆ. ಅದನ್ನು ಪೋಷಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಉತ್ಯಮ ಸೇವೆ ನೀಡುವ ಭರವಸೆ ಯೊಂದಿಗೆ ನಾವೆಲ್ಲರು ಜೊತೆಯಾಗಿ ಮುಂದುವರೆಯೋಣ ಎಂದರು.

ಸಂಸ್ಥೆಯ ವಿಶೇಷಾಧಿಕಾರಿಯಾಗಿರುವ ಯಂ.ಮೋನಪ್ಪ ಪೂಜಾರಿ ಕಂಡೆತ್ಯಾರುರವರು ಪ್ರಾಸ್ತಾವಿಕ‌ ಮಾತುಗಳನ್ನಾಡಿ ಸಂಸ್ಥೆ ಗ್ರಾಹಕರ ಇಚ್ಚೆಗನುಸಾರ ಸಹಕಾರ ನೀಡುವಲ್ಲಿ ಭದ್ಧವಾಗಿದೆ. ಸಂಸ್ಥೆಯು ಹಲವಾರು ಸಾಮಾಜಿಕ ಕೆಲಸ ಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಲಾಭದ ಒಂದಂಶವನ್ನು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿದೆ. ಕೆಂದ್ರಕಚೇರಿಯ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದ್ದು ೨೦೨೪ರಲ್ಲಿ ಅದನ್ನು ಉದ್ಘಾಟನೆ ಗೊಳಿಸುವ ಇರಾದೆ ಇದೆ.
ಗ್ರಾಹಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆಯು ನಮ್ಮಲ್ಲಿದೆ. ಸಂಸ್ಥೆಯ ನಿರ್ದೇಶಕರ ಪಾರದರ್ಶಕ ಆಡಳಿತದೊಂದಿಗೆ ಸಿಬ್ಬಂದಿಗಳ ನಗುಮುಖದ ನಿಸ್ವಾರ್ಥ ಸೇವೆಯಿಂದಾಗಿ ಸಂಸ್ಥೆ ಇಷ್ಟು ಎತ್ತರಕ್ಕೆ ಏರಲು ಸಾಧ್ಯವಾಗಿದೆ. ಕಬಕ ಶಾಖೆ ಒಂದು ಕೋಟಿ ಠೇವಣಿಯನ್ನು ಸಂಗ್ರಹಮಾಡಿ ೩೫೦ ಮಂದಿ ಸದಸ್ಯರನ್ನು ಹೊಂದಿದೆ ಎಂದರು.


ಅಡ್ಯಾಲಯ ಪರಿವಾರ ದೈವಗಳ ಸೇವಾ ಸಮಿತಿಯ ಅಧ್ಯಕ್ಷರಾದ ಸತೀಶ್ ರೈ ಡಿಂಬ್ರಿಗುತ್ತುರವರು ನಿರಖು ಠೇವಣಿ ಸರ್ಟಿಫಿಕೇಟ್ ವಿತರಣೆ ಮಾಡಿದರು.
ಕಬಕ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷರಾದ ಜೆ.ಪಿ ಸಂತೋಷ್ ಮುರ, ಕಬಕ ಬಿಲ್ಲವ ಗ್ರಾಮ ಸಮಿತಿಯ ಸ್ಥಾಪಕಾಧ್ಯಕ್ಷರಾದ ಜಿನ್ನಪ್ಪ ಪೂಜಾರಿ, ಕಬಕ ಗೀತಾ ಬಾರ್ ನ ಮಾಲಕ ರಾಮಣ್ಣ ಪೂಜಾರಿ, ಪುತ್ತೂರು ಯುವವಾಹಿನಿಯ ಅಧ್ಯಕ್ಷರಾದ ಉಮೇಶ್ ಬಾಯರ್, ಕಬಕ ಗ್ರಾ.ಪಂ.ಸದಸ್ಯ ಶಾಬಾ ಕೆ, ಕಬಕ ವಿನಾಯಕ ಕಾಂಪ್ಲೆಕ್ಸ್ ನ ಮಾಲಕರಾದ ರಮೇಶ್ ಆಚಾರ್ಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಟ್ಟಡದ ಮಾಲಕರಾದ ರಮೇಶ್ ಆಚಾರ್ಯ ರವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ನಿರ್ದೇಶಕರಾದ ಸಂಜೀವ ಪೂಜಾರಿ, ಕೆ.ಪಿ. ದಿವಾಕರ, ತನುಜಾ ಶೇಖರ, ಶೇಖರ ಬಂಗೇರ, ಗಂಗಾಧರ ಮಿತ್ತಮಾರು, ಆನಂದ ಪೂಜಾರಿ, ಕಬಕ ಶಾಖಾ ವ್ಯವಸ್ಥಾಪಕರಾದ ಮನೋಹರ್ ಜೆ., ಸಹಾಯಕ ವ್ಯವಸ್ಥಾಪಕರಾದ ಭವಿತ್, ಸಂಸ್ಥೆಯ ಸಿಬ್ಬಂದಿಗಳಾದ ಕೀರ್ತನ್ ಕುಮಾರ್, ಪ್ರತೀಶ್ ಬಿ., ಉಮೇಶ್ ಅತಿಥಿಗಳನ್ನು ಶಾಲುಹೊದಿಸಿ ಸ್ವಾಗತಿಸಿದರು.
ಕಬಕ ಶಾಖೆಯ ನಿರ್ಮಾಣದ ಹಂತದಲ್ಲಿ ಸಹಕರಿಸಿದ ಮೋಹನ ಗುರ್ಜಿನಡ್ಕ, ಕೃಷ್ಣಪ್ಪ ಕಲಾವಿದ, ನಾಗೇಶ್ ಪಿ, ಕೇಶವ, ನಾರಾಯಣ ಪೂಜಾರಿ ಕಟ್ನಾಜೆ, ರಾಜೇಶ್ ಕಾರ್ಯಾಡಿ, ಸತೀಶ್ ಕೊಪ್ಪರಿಗೆ, ವಾಸುಪೂಜಾರಿ ಕೊಡಂಗೆ ಗುತ್ತು, ರಮೇಶ್ ಸೂರ್ಯ ಮೊದಲಾದವರನ್ನು ಗೌರವಿಸಲಾಯಿತು.

ನಿರ್ದೇಶಕರಾದ ರಾಜಾರಾಮ್ ಕೆ.ಬಿ ಸ್ವಾಗತಿಸಿದರು‌.
ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ರವರು ಕಾರ್ಯಕ್ರಮ ನಿರೂಪಿಸಿದರು‌. ಸಂಘದ ನಿರ್ದೇಶಕರಾದ ಸಂಜೀವ ಪೂಜಾರಿಯವರು ವಂದಿಸಿದರು.

LEAVE A REPLY

Please enter your comment!
Please enter your name here