ಯಕ್ಷಗಾನದ ಹಿರಿಯ ಕಲಾವಿದ ಪಾತಾಳ ವೆಂಕಟರಮಣ ಭಟ್‌ರಿಗೆ ಉಪ್ಪಿನಂಗಡಿ ಚರ್ಚ್‌ನಿಂದ ಹಾರೈಕೆ

0

ಪುತ್ತೂರು: ಉಪ್ಪಿನಂಗಡಿ ನಿವಾಸಿ, ನಿನ್ನಿಕಲ್ಲು ಪಾತಾಳ ಕ್ರೈಸ್ತರ ದಫನ ಭೂಮಿಗೆ ತುಂಬಾ ಸಹಕಾರ ನೀಡಿದ 80 ವರ್ಷ ಪ್ರಾಯದ ಯಕ್ಷಗಾನದ ಹಿರಿಯ ಕಲಾವಿದ ಪಾತಾಳ ವೆಂಕಟರಮಣ ಭಟ್ ರವರ ಮನೆಗೆ ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯ ಚರ್ಚಿನ ಧರ್ಮಗುರುಗಳಾದ ವಂ| ಅಬೆಲ್ ಲೋಬೊರವರ ನೇತೃತ್ವದಲ್ಲಿ ಧರ್ಮಭಗಿನಿಯರು ಚರ್ಚಿನ ನಾಯಕರುಗಳು ಭೇಟಿ ನೀಡಿ

ಅವರಿಗೆ ಫಲ ಪುಷ್ಪವನ್ನು ನೀಡಿ ಅವರೊಂದಿಗೆ ಸ್ವಲ್ಪ ಸಮಯ ಸಂತೋಷವನ್ನು ಹಂಚಿಕೊಂಡು ವೆಂಕಟರಮಣ ಭಟ್ ರವರಿಗೆ ದೇವರು ಸಕಲ ಸೌಕರ್ಯವನ್ನು, ಆರೋಗ್ಯವನ್ನು ಸುಖ ಸಂತೋಷವನ್ನು ನೀಡಿ ಹಾರೈಸಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಧರ್ಮಭಗಿನಿಯರಾದ ಸಿಸ್ಟರ್ ಸೆಲೆಸ್ತಿನ್, ಸಿಸ್ಟರ್ ವೆಲೆಂಟೀನ್, ಉಪ್ಪಿನಂಗಡಿ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮ್ಯಾಕ್ಸಿಂ ಲೋಬೊ, ಪ್ರಮುಖರಾದ ರೋಬರ್ಟ್ ಡಿ’ಸೋಜ, ಇನಾಸ್ ರೊಡ್ರಿಗಸ್, ಮ್ಯಾಕ್ಸಿಂ ಪಿಂಟೋ, ಲೂವಿಸ್ ಮಸ್ಕರೇನ್ಹಸ್, ಡೆನ್ನಿಸ್ ಮಸ್ಕರೇನ್ಹಸ್, ಶ್ರೀಮತಿ ಐರಿನ್ ಲೋಬೊರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here