ಮಾಡನ್ನೂರು ನೂರುಲ್ ಹುದಾ ವಾರ್ಷಿಕ ಮಹಾ ಸಮ್ಮೇಳನ, ಮಜ್ಲಿಸುನ್ನೂರ್

0

ದಾನ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ-ಸಿಂಸಾರುಲ್ ಹಕ್ ಹುದವಿ

ಪುತ್ತೂರು: ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ವಾರ್ಷಿಕ ಮಹಾ ಸಮ್ಮೇಳನ ಹಾಗೂ ಮಜ್ಲಿಸುನ್ನೂರ್ ಕಾರ್ಯಕ್ರಮ ಮಾ.4ರಂದು ನೂರುಲ್ ಹುದಾ ಕ್ಯಾಂಪಸ್ ಬಳಿ ನಡೆಯಿತು. ನೂರುಲ್ ಹುದಾದ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಪ್ರಭಾಷಣ ನಡೆಸಿದ ಅಂತರ್ರಾಷ್ಟ್ರೀಯ ಪ್ರಭಾಷಣಗಾರ ಸಿಂಸಾರುಲ್ ಹಕ್ ಹುದವಿಯವರು ದಾನ ಧರ್ಮಕ್ಕೆ ಇಸ್ಲಾಂ ವಿಶೇಷ ಪ್ರಾಧಾನ್ಯತೆ ನೀಡಿದ್ದು ದಾನ ಮಾಡುವ ಪ್ರವೃತ್ತಿಯನ್ನು ನಾವು ಬೆಳೆಸಿಕೊಳ್ಳಬೇಕಿದೆ, ನಮ್ಮ ಪೂರ್ವಿಕ ಪಂಡಿತರೂ ಕೂಡಾ ದಾನ ಧರ್ಮದ ಮೂಲಕ ಬಡವರ ಕಣ್ಣೀರೊರೆಸುವ ಕಾರ್ಯವನ್ನು ಮಾಡಿದ್ದರು ಎಂದು ಹೇಳಿದರು. ಪ್ರವಾದಿ ಮುಹಮ್ಮದ್(ಸ.ಅ) ಅವರ ಜೀವನ ವಿಧಾನದ ಬಗ್ಗೆ ನಾವೆಷ್ಟು ಅನುಸರಣೆ ಮಾಡುತ್ತಿದ್ದೇವೆ ಎನ್ನುವುದನ್ನು ಆತ್ಮಾವಲೋಕನ ಮಾಡಬೇಕಾಗಿದ್ದು ಪುಣ್ಯ ಪ್ರವಾದಿಯವರ ಪ್ರೀತಿ ಸಂಪಾದಿಸದ ಹೊರತು ರಕ್ಷೆ ಹೊಂದಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ನೂರುಲ್ ಹುದಾಗೆ ಸಹಕಾರ ನೀಡಿ-ಅಲೀ ತಂಙಳ್
ಉದ್ಘಾಟಿಸಿದ ಕೆ.ಎಸ್ ಅಲೀ ತಂಙಳ್ ಕುಂಬೋಳ್ ಮಾತನಾಡಿ ನೂರುಲ್ ಹುದಾ ಶಿಕ್ಷಣ ಸಂಸ್ಥೆ ಉತ್ತಮವಾಗಿ ಮುನ್ನಡೆಯುತ್ತಿದ್ದು ಇದರ ಇನ್ನಷ್ಟು ಅಭಿವೃದ್ಧಿಗೆ ಸಾಧ್ಯವಾಗುವ ಎಲ್ಲರೂ ಸಹಕಾರ ನೀಡಬೇಕು, ಇಂತಹ ಸಂಸ್ಥೆಗಳಿಗೆ ನೀಡುವ ಸಹಕಾರ, ದಾನ ಯಾವತ್ತೂ ವ್ಯರ್ಥವಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ದಾನಿಗಳ ಸಹಕಾರವೇ ಸಂಸ್ಥೆಯ ಯಶಸ್ಸಿಗೆ ಕಾರಣ-ಹನೀಫ್ ಹುದವಿ
ನೂರುಲ್ ಹುದಾದ ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ ದೇಲಂಪಾಡಿ ಮಾತನಾಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸುತ್ತಿರುವ ನೂರುಲ್ ದುದಾ ವಿದ್ಯಾಸಂಸ್ಥೆಯು ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿದ್ದು ಇದರ ಯಶಸ್ಸಿನ ಹಿಂದಿನ ಕಾರಣಕರ್ತರು ಈ ವೇದಿಕೆಯಲ್ಲಿರುವವರು ಮತ್ತು ವೇದಿಕೆಯ ಮುಂಭಾಗದಲ್ಲಿರುವ ಸಂಸ್ಥೆಯ ಹಿತೈಷಿಗಳಾಗಿದ್ದಾರೆ. ಸಂಸ್ಥೆಯ ಮೇಲೆ ನಿಮಗಿರುವ ಅಭಿಮಾನವೇ ಸಂಸ್ಥೆ ಯಶಸ್ಸಿನ ಪಥದಲ್ಲಿ ಸಾಗುತ್ತಿರಲು ಕಾರಣ ಎಂದು ವರು ಹೇಳಿದರು.

ದಾನಿಗಳೇ ಸಂಸ್ಥೆಗೆ ಆದಾಯದ ಮೂಲ-ಖಲೀಲುರ್ರಹ್ಮಾನ್
ಪ್ರಾಸ್ತಾವಿಕವಾಗಿ ನೂರುಲ್ ಹುದಾದ ಮ್ಯಾನೇಜರ್ ಕೆ.ಯು ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ ಮಾತನಾಡಿ ನಮ್ಮ ವಿದ್ಯಾ ಸಂಸ್ಥೆಗೆ ಪ್ರತೀ ತಿಂಗಳು 12 ಲಕ್ಷಕ್ಕಿಂತಲೂ ಅಧಿಕ ಖರ್ಚು ವೆಚ್ಚ ತಗಲುತ್ತಿದ್ದು ದಾನಿಗಳ ಸಹಕಾರದಿಂದ ಅದನ್ನು ನಿರ್ವಹಿಸುತ್ತಿದ್ದೇವೆ. ದಾನಿಗಳ ಸಹಕಾರವೇ ಸಂಸ್ಥೆಯ ಆದಾಯದ ಮೂಲವಾಗಿದ್ದು ಮುಂದಕ್ಕೂ ದಾನಿಗಳು ಸಂಸ್ಥೆಯೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಶೈಖುನಾ ಯು.ಎಂ ಉಸ್ತಾದ್, ಸಮಸ್ತ ಮುಶಾವರ ಸದಸ್ಯ ಬಂಬ್ರಾಣ ಉಸ್ತಾದ್, ಇರ್ಶಾದ್ ದಾರಿಮಿ ಮಿತ್ತಬೈಲು ಸಮಯೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ನೂರುಲ್ ಹುದಾದ ಉಪ ಪ್ರಾಂಶುಪಾಲ ಸಯ್ಯದ್ ಬುರ್ಹಾನ್ ಅಲಿ ತಂಙಳ್, ಹಬೀಬುರ್ರಹ್ಮಾನ್ ತಂಙಳ್ ಮುಕ್ವೆ, ಸಯ್ಯದ್ ಬಾಅಲವಿ ತಂಙಳ್, ಮಾಡನ್ನೂರು ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ ನೆಕ್ಕರೆ, ಮಾಡನ್ನೂರು ಖತೀಬ್ ಸಿರಾಜುದ್ದೀನ್ ಫೈಝಿ, ಕೆ.ಎಸ್ ಹೈದರ್ ದಾರಿಮಿ, ಮುಸ್ತಫಾ ಹಾಜಿ ಕೆಂಪಿ, ಉಮರ್ ದಾರಿಮಿ ಸಾಲ್ಮರ, ಎಂ.ಎಚ್ ಮೊಯ್ದೀನಬ್ಬ ಹಾಜಿ, ನೂರುಲ್ ಹುದಾ ಪ್ರಧಾನ ಕಾರ್ಯದರ್ಶಿ ಮಂಗಳ ಅಬೂಬಕ್ಕರ್ ಹಾಜಿ, ಕೋಶಾಧಿಕಾರಿ ಎನ್.ಎಸ್ ಅಬ್ದುಲ್ಲ ಹಾಜಿ, ಸ್ವಾಗತ ಸಮಿತಿ ಸಂಚಾಲಕ ಸಿ.ಎಚ್ ಅಬ್ದುಲ್ ಅಝೀಝ್ ಹಾಜಿ, ಹೈತಮಿ ಉಸ್ತಾದ್, ಖಾದರ್ ಮಾಸ್ಟರ್ ಬಂಟ್ವಾಳ, ಅಲೀ ಉಸ್ತಾದ್, ನಾಸಿರ್ ಬೆಳ್ಳಾರೆ, ಶರೀಫ್ ಪರ್ಪುಂಜ, ರಶೀದ್ ಹಾಜಿ ಪರ್ಲಡ್ಕ, ಎಲ್.ಟಿ ಅಬ್ದುಲ್ ರಝಾಕ್ ಹಾಜಿ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

ಸಾವಿರಾರು ಮಂದಿ ಭಾಗಿ:

ಕಾರ್ಯಕ್ರಮದಲ್ಲಿ ಕೇರಳ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here