ಪಾಣಾಜೆ ಸಿಎ ಬ್ಯಾಂಕಿನಲ್ಲಿ ಲಕ್ಷ್ಮಣ ನಾಯ್ಕ್‌ರವರಿಗೆ ಶ್ರದ್ಧಾಂಜಲಿ – ಪ್ರಭಾರ ಸಿಇಒ ಹರೀಶ್ ಕಡಂದೇಲು‌ ನೇಮಕ

0

ಪಾಣಾಜೆ: ರಸ್ತೆ ಅಪಘಾತದಲ್ಲಿ ಮೃತ್ಯುಗೀಡಾದ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ ನಾಯ್ಕ್ ರವರಿಗೆ ಮಾ. 6 ರಂದು ನಡೆದ ಸಹಕಾರಿ ಸಂಘದ ವಿಶೇಷ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲಕ್ಷ್ಮಣ ನಾಯ್ಕ್ ರವರ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿ, ಅವರ ನಿಷ್ಟೆ, ಪ್ರಾಮಾಣಿಕತೆ ಮತ್ತು ಕಾರ್ಯವೈಖರಿಯನ್ನು ನೆನಪಿಸಿ ನುಡಿನಮನ ಸಲ್ಲಿಸಲಾಯಿತು. 

ಪ್ರಭಾರ ಸಿಇಒ ನೇಮಕ

ಬ್ಯಾಂಕಿನ ದೈನಂದಿನ ವ್ಯವಹಾರಗಳು ಎಂದಿನಂತೆ ಸುಗಮವಾಗಿ ನಡೆಯುವಂತಾಗಲು ಬ್ಯಾಂಕಿನ ಹಿರಿಯ ಸಿಬಂದಿ ಹರೀಶ್ ಕಡಂದೇಲುರವರನ್ನು ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಆಡಳಿತ ಮಂಡಳಿಯ ಸರ್ವಾನುಮತದಿಂದ ಆಯ್ಕೆ ಮಾಡಿ ನೇಮಕಗೊಳಿಸಿ ಅಧಿಕಾರ ನೀಡಲಾಯಿತು. 

ಲಕ್ಷ್ಮಣ ನಾಯ್ಕರ ಪತ್ನಿಗೆ ಉದ್ಯೋಗ

ದುರ್ಮರಣಕ್ಕೀಡಾದ ಲಕ್ಷ್ಮಣ ನಾಯ್ಕ ರ ಪತ್ನಿ ಅನುರಾಧರವರಿಗೆ ಅನುಕಂಪದ ನೆಲೆಯಲ್ಲಿ ಬ್ಯಾಂಕಿನಲ್ಲಿ ಸೂಕ್ತ ಹುದ್ದೆಯನ್ನು ತಕ್ಷಣಕ್ಕೆ ನೀಡಿ ಉದ್ಯೋಗ ನೀಡುವ ಬಗ್ಗೆಯೂ ನಿರ್ಣಯ ಕೈಗೊಳ್ಳಲಾಯಿತು. 

ಮಾ. 6 ಬ್ಯಾಂಕ್ ವ್ಯವಹಾರ ಸ್ಥಗಿತ

ಮೃತರ ಸಂತಾಪ ಸೂಚಕವಾಗಿ ಮಾ. 6 ರಂದು ಬ್ಯಾಂಕಿನ ವ್ಯವಹಾರ ಸ್ಥಗಿತಗೊಳಿಸಿ ರಜೆ ಸಾರಲಾಯಿತು. ಮಾ. 7 ರಿಂದ ಎಂದಿನಂತೇ ವ್ಯವಹಾರಗಳು ನಡೆಯಲಿವೆ ಎಂದು ಅಧ್ಯಕ್ಷ ಪದ್ಮನಾಭ ಬೋರ್ಕರ್ ತಿಳಿಸಿದರು.

ಈ ವಿಶೇಷ ಸಭೆಯಲ್ಲಿ ಆಡಳಿತ ಮಂಡಳಿಯ ಆಹ್ವಾನದ ಮೇರೆಗೆ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ರವರು ಉಪಸ್ಥಿತರಿದ್ದು, ಸಲಹೆ ನೀಡಿದರು.

ಸಂಘದ ಉಪಾಧ್ಯಕ್ಷ ಡಾ.‌ ಅಖಿಲೇಶ್ ಪಾಣಾಜೆ, ನಿರ್ದೇಶಕರುಗಳಾದ ರವೀಂದ್ರ ಭಂಡಾರಿ ಬೈಂಕ್ರೋಡು, ತಿಮ್ಮಣ್ಣ ರೈ ಆನಾಜೆ, ರವಿಶಂಕರ ಶರ್ಮ, ರಾಮ ನಾಯ್ಕ, ಸಂಜೀವ ಕೀಲಂಪಾಡಿ, ಶ್ರೀಮತಿ ಗೀತಾ, ಶ್ರೀಮತಿ ಗುಣಶ್ರೀ  ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here