





ಕಾಣಿಯೂರು: ಕೋಡಿಂಬಾಳ ನಮ್ಮ ಕ್ಲಿನಿಕ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕಾಲ್ನಡಿಗೆ ಜಾಥಾವು ಕೋಡಿಂಬಾಳದಲ್ಲಿ ಮಾ.5ರಂದು ನಡೆಯಿತು.


ಆಡಳಿತ ವೈದ್ಯಾಧಿಕಾರಿಗಳಾದ ಡಾ ಸುಚಿತ್ರಾ ರಾವ್ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋಡಿಂಬಾಳದ ವೈದ್ಯಾಧಿಕಾರಿಗಳು ಡಾ. ವಿದ್ಯಾರವರು ಸ್ವಾಗತಿಸಿ, ವಂದಿಸಿದರು.





ಕಾರ್ಯಕ್ರಮದಲ್ಲಿ ಊರಿನ ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಸಂಘ ಸಂಸ್ಥೆಗಳ ಮಹಿಳೆಯರು ಭಾಗವಹಿಸಿದ್ದರು.









