ನೆಲ್ಯಾಡಿ: ಈನಡ್ಕ, ಮಾದೇರಿಯಲ್ಲಿ ರಬ್ಬರ್ ತೋಟ, ಗೇರುತೋಪಿಗೆ ಬೆಂಕಿ

0

ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಈನಡ್ಕ, ಮಾದೇರಿ ಭಾಗದಲ್ಲಿ ರಬ್ಬರ್, ಗೇರುತೋಪಿಗೆ ಆಕಸ್ಮಿಕ ಬೆಂಕಿ ತಗುಲಿ 50 ಎಕ್ರೆಗೂ ಹೆಚ್ಚು ಜಾಗ ಬೆಂಕಿಗಾಹುತಿಯಾದ ಘಟನೆ ಮಾ.4ರಂದು ನಡೆದಿದೆ.

ಈನಡ್ಕ ಎಂಬಲ್ಲಿ ವಿದ್ಯುತ್ ಟ್ರಾನ್ಸ್‌ಫಾರ‍್ಮರ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಸಂಭವಿಸಿದೆ. ಬೆಂಕಿಯ ಕೆನ್ನಾಲಗೆಗೆ ಖಾಸಗಿ ವ್ಯಕ್ತಿಯೋರ್ವರ ರಬ್ಬರ್ ತೋಟ ಬೆಂಕಿಗಾಹುತಿಯಾಗಿದ್ದು ಸುಮಾರು 50ಕ್ಕೂ ಹೆಚ್ಚು ರಬ್ಬರ್ ಮರಗಳು ಸುಟ್ಟುಹೋಗಿವೆ. ಇನ್ನೊಂದೆಡೆ ಪಡಿಪಂಡದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ‍್ಮರ್‌ನಿಂದ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡು ಮಾದೇರಿ, ಪಡಿಪಂಡ, ಪಿಲವೂರು ಭಾಗದಲ್ಲಿನ ಗೇರುತೋಪು ಬೆಂಕಿಗಾಹುತಿಯಾಗಿದೆ.

ಫಾರೆಸ್ಟ್ ಸುನಿಲ್, ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಆನಂದ ಪಿಲವೂರು ಹಾಗೂ ಗ್ರಾಮಸ್ಥರು ಸೇರಿಕೊಂಡು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ಆಗದಂತೆ ಮುಂಜಾಗ್ರತೆ ವಹಿಸಿದರು.

LEAVE A REPLY

Please enter your comment!
Please enter your name here