ನಿಡ್ಪಳ್ಳಿ ಕರ್ನಪ್ಪಾಡಿ ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ

0

ನಿಡ್ಪಳ್ಳಿ;  ಶ್ರೀ ಬ್ರಹ್ಮಬೈದರ್ಕಳ ಗರಡಿ ಕರ್ನಪ್ಪಾಡಿ ಇದರ ವಾರ್ಷಿಕ ನೇಮೋತ್ಸವ ಮಾ.5 ಮತ್ತು 6 ರಂದು ವಿಜೃಂಭಣೆಯಿಂದ  ಜರುಗಿತು.    

    ಮಾ.5 ರಂದು ಬೆಳಗ್ಗೆ ಗಣಪತಿ ಹೋಮ ಹಾಗೂ, ಬ್ರಹ್ಮರ ತಂಬಿಲ ಮತ್ತು ನಾಗ ತಂಬಿಲ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ  ಕೊಡಮಂತಾಯ ದೈವದ ಭಂಡಾರ ತೆಗೆದು ನೇಮ ನಡೆಯಿತು.

    ಮಾ.6 ರಂದು ಸಂಜೆ  ಗಣಪತಿ ಹೋಮ , ಬಳಿಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಪ್ರಸಾದ ವಿತರಣೆ , ಅನ್ನಸಂತರ್ಪಣೆ ನಡೆಯಿತು.. ರಾತ್ರಿ  ಬೈದರುಗಳ ಗರಡಿ ಇಳಿಯುವುದು., ರಾತ್ರಿ ಕಿನ್ನಿದಾರು ಗರಡಿ ಇಳಿಯುವುದು.ಪ್ರಾತಃ ಕಾಲ  ದರ್ಶನ ಪಾತ್ರಿಗಳ ಸೇಟ್,  ಬೈದರುಗಳ ಸೇಟ್ ನಡೆಯಿತು. ಮಾ.7 ಕ್ಕೆ ಬೆಳಗ್ಗೆ ಪ್ರಸಾದ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ  ಸೇವಾ ಸಮಿತಿ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು ,ಕರ್ನಪ್ಪಾಡಿ   ತರವಾಡು ಮನೆಯವರು ಹಾಗೂ ಸಮಿತಿ ಸದಸ್ಯರು ಮತ್ತು.   ಊರ ಪರವೂರ ಭಕ್ತಾಧಿಗಳು ಭಾಗವಹಿಸಿದ್ದರು..

  ಕಾರ್ಯಕ್ರಮದಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು  ಊರಪರವೂರ ಭಕ್ತಾಧಿಗಳು ಭಾಗವಹಿಸಿ  ಅನ್ನಪ್ರಸಾದ ಸ್ವೀಕರಿಸಿದರು.

ಎಲ್ಲವೂ ಬೈದೆರುಗಳ ಅನುಗ್ರಹ:-
ಅಜೀರ್ಣಾವಸ್ಥೆಯಲ್ಲಿದ್ದ  ಗರಡಿಯನ್ನು ಜೀರ್ಣೋದ್ಧಾರಗೊಳಿಸಿದ  ಆ ಬಳಿಕ ಇಂದಿನ ವರೆಗೆ ಸತತ 31 ವರ್ಷಗಳ ಕಾಲ ಅಧ್ಯಕ್ಷ ನೆಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯ ಮೂಲಕ  ಊರ ಪರವೂರ ಭಕ್ತಾಧಿಗಳ ಸಹಕಾರದಲ್ಲಿ  ಪ್ರತೀ ವರ್ಷ ವಿಜೃಂಭಣೆಯಿಂದ ನೇಮೋತ್ಸವ ನಡೆಯುತ್ತ ಬರುತ್ತಿದೆ.  ಎಲ್ಲವೂ ಆ ಬೈದೆರುಗಳ ಅನುಗ್ರಹ ನಾವು ನಿಮಿತ್ತ ಮಾತ್ರ . ಇನ್ನು ಮುಂದೆಯೂ ಭಕ್ತಾಧಿಗಳ ಪೂರ್ಣ ಸಹಕಾರವನ್ನು ಬಯಸುತ್ತೇವೆ.   
—-ಶಿವಪ್ಪ ಪೂಜಾರಿ ನುಳಿಯಾಲು, ಅಧ್ಯಕ್ಷರು ಗರಡಿ ಸೇವಾ ಸಮಿತಿ.

LEAVE A REPLY

Please enter your comment!
Please enter your name here