ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೆ, ಮಖೆ ಜಾತ್ರೆ, ಉತ್ಸವಾದಿಗಳ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳ ‘ಸಂಗಮ ಉತ್ಸವ’ ಆಯೋಜಿಸಲಾಗಿದ್ದು, ಹೆಚ್ಚಿನ ಜನಾಕರ್ಷಣೆಗೆ ಒಳಗಾಗಿದೆ.
ಇದರೊಂದಿಗೆ ಹಿಂದೂ ಜಾಗರಣಾ ವೇದಿಕೆಯ ಉಪ್ಪಿನಂಗಡಿ ಘಟಕವು ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಸೋಮವಾರ ರಾತ್ರಿ ಹುಣ್ಣಿಮೆ 2ನೇ ಮಖೆಕೂಟಕ್ಕೆ ದೇವಾಲಯಕ್ಕೆ ಆಗಮಿಸಿದ ಹಿಂದೂ ಪರ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲರವರು, ಶಿವಾಜಿ ಮಹಾರಾಜರ ಪುತ್ಥಳಿಗೆ ಪುಷ್ಪಾರ್ಚನೆಗೈದರು.
ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಸಂದೀಪ್ ಕುಪ್ಪೆಟ್ಟಿ, ಕಾರ್ಯದರ್ಶಿ ಚಿದಾನಂದ ಪಂಚೇರು, ಕಾರ್ಯಕರ್ತರಾದ ಅನಿಲ್ ಬಂಡಾಡಿ, ಸುಜೀತ್ ಬೊಳ್ಳಾವು, ರಾಜೇಶ್ ಕೊಡಂಗೆ, ವಿಜೀತ್ ನೇಜಿಕಾರು, ನಿಶಾಂತ್ ಪೆರಿಯಡ್ಕ, ರಂಜಿತ್ ಅಡೆಕ್ಕಲ್, ರಮೇಶ್ ಬಂಡಾರಿ, ಅಶೋಕ್ ಶೆಟ್ಟಿ ಕಜೆಕ್ಕಾರು, ರಕ್ಷಿತ್ ಪೆರಿಯಡ್ಕ, ರೋಹಿತ್ ಪೆರಿಯಡ್ಕ ಮತ್ತಿತರಿದ್ದರು.