ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಪುತ್ತೂರು ಶಾಖಾ ಕಚೇರಿಯಲ್ಲಿ ಮಹಿಳಾ ದಿನಾಚರಣೆ – ಮಹಿಳಾ ಸಾಧಕಿಯರಿಗೆ ಗೌರವಾರ್ಪಣೆ

0

ಪುತ್ತೂರು: ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಪುತ್ತೂರು ಶಾಖಾ ಕಚೇರಿಯಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು. ಅತಿಥಿ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಬ್ಯಾಂಕ್ ಆಫ್ ಬರೋಡಾದಲ್ಲಿ ಮಹಿಳೆಯರಿಗಾಗಿ ಇರುವ ವಿಶೇಷ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಪ್ರಸ್ತುತ ಸಮಾಜದ ಉನ್ನತಿಯಲ್ಲಿ ಮಹಿಳೆಯರ ಪಾತ್ರವನ್ನು ಶ್ಲಾಘಿಸಿದರು. ಮಂಗಳೂರಿನ ವಲಯ ವ್ಯವಸ್ಥಾಪಕಿ ಗಾಯತ್ರಿ. ಆರ್.ರವರ ಸಾಧನೆಯನ್ನು ಉಲ್ಲೇಖಿಸಿದರು.

ಉಪ ಶಾಖಾ ಪ್ರಬಂಧಕ ಕಿರಣ್ ಕುಮಾರ್ ವೈ ಮಾತನಾಡಿ ಬ್ಯಾಂಕ್ ಆಫ್ ಬರೋಡಾದಲ್ಲಿ ಮಹಿಳೆಯರಿಗಾಗಿ ಇರುವ ವಿಶೇಷ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಬ್ಯಾಂಕ್ ಆಫ್ ಬರೋಡಾದಲ್ಲಿ ಮಹಿಳಾ ಶಕ್ತಿ ಎನ್ನುವ ಉಳಿತಾಯ ಖಾತೆ ಇದ್ದು, ಇದರ ಖಾತೆದಾರರಿಗೆ, ದ್ವಿಚಕ್ರ ವಾಹನ ಸಾಲದ ಬಡ್ಡಿಯಲ್ಲಿ ಶೇ.೦.25ಗಳ ರಿಯಾಯಿತಿ ಇರುತ್ತದೆ, ಲಾಕರ್ ರೆಂಟ್‌ನ ಮೇಲೆ ಶೇ.25 ರಿಯಾಯಿತಿ ಇರುತ್ತದೆ. ವಾಹನ ಸಾಲ, ಶಿಕ್ಷಣ ಸಾಲ, ಅಡಮಾನ ಸಾಲಗಳ ಮೇಲೆ ಶೇ.25 ಶುಲ್ಕ ವಿನಾಯಿತಿ ಹಾಗೂ ವೈಯುಕ್ತಿಕ ಸಾಲಗಳ ಮೇಲೆ ಶೇ.100 ಶುಲ್ಕ ವಿನಾಯಿತಿ ಇರುತ್ತದೆ. ಉಚಿತ ಕ್ರೆಡಿಟ್ ಕಾರ್ಡ್ ಸೌಲಭ್ಯವಿದೆ. ಬ್ಯಾಂಕ್ ಆಫ್ ಬರೋಡಾದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ, ಅಟಲ್ ಪೆನ್ಸನ್ ಯೋಜನೆ, ಸವರಿನ್ ಗೋಲ್ಡ್ ಬಾಂಡ್, ಪಿ.ಎಂ. ಜೆ.ಜೆ.ಬಿ.ವೈ, ಪಿ.ಎಂ.ಎಸ್. ಬಿ.ವೈ, ಎಸ್.ಸಿ.ಎಸ್.ಎಸ್‌ಗಳಂತಹ ಎಲ್ಲಾ ಸರಕಾರಿ ಸೌಲಭ್ಯಗಳು ಇದೆ ಎಂದು ತಿಳಿಸಿದರು.

ಸಹಾಯಕ ವ್ಯವಸ್ಥಾಪಕಿ ಉಮಾ ಮಹೇಶ್ವರ್ ಮಾತನಾಡಿ ಬ್ಯಾಂಕ್ ಆಫ್ ಬರೋಡಾದಲ್ಲಿ ಲಭ್ಯವಿರುವ ಬರೋಡಾ ಅಡ್ವಾಂಟೇಜ್ ಗೃಹ ಸಾಲದ ಬಗ್ಗೆ ಮಾಹಿತಿ ನೀಡಿದರು. ಬರೋಡಾ ಅಡ್ವಾಂಟೇಜ್ ಗೃಹಸಾಲ ಸೌಲಭ್ಯದ ಫಲಾನುಭವಿಗಳು, ತಮ್ಮ ಉಳಿತಾಯ ಖಾತೆಯಲ್ಲಿ ಇರಿಸುವ ಮೊತ್ತಕ್ಕೆ ಸಮನಾಗಿ, ಅವರ ಗೃಹ ಸಾಲದಲ್ಲಿನ ಬಾಕಿ ಉಳಿಕೆಗೆ ಯಾವುದೇ ಬಡ್ಡಿಯನ್ನು ವಿಧಿಸಲಾಗುವುದಿಲ್ಲ. ಇದರ ಫಲಾನುಭವಿಗಳು, ಅವರ ಉಳಿತಾಯ ಖಾತೆಯಲ್ಲಿ, ಗೃಹ ಸಾಲದ ಬಡ್ಡಿಗೆ ಸಮನಾದ ಬಡ್ಡಿಯನ್ನು ಪಡೆಯುತ್ತಾರೆ. ಅಸ್ತಿತ್ವದಲ್ಲಿರುವ ಗೃಹ ಸಾಲ ಗ್ರಾಹಕರು, ರೂ.1೦೦೦+ ಜಿ.ಎಸ್.ಟಿ ಶುಲ್ಕ ಪಾವತಿಸಿ ಈ ಸೌಲಭ್ಯವನ್ನು ಪಡೆಯಬಹುದು ಎಂದು ತಿಳಿಸಿದರು. ಬ್ಯಾಂಕ್ ಆಫ್ ಬರೋಡಾದಲ್ಲಿ ಲಭ್ಯವಿರುವ, ಜೀವ ವಿಮೆ, ಆರೋಗ್ಯ ವಿಮೆಗಳ ಮಾಹಿತಿಯನ್ನು ನೀಡಲಾಯಿತು.

ಶಾಖಾ ಸಹಾಯಕ ವ್ಯವಸ್ಥಾಪಕಿ ಶಾಲಿನಿ ಓ.ಎಸ್. ಕಾರ್ಯಕ್ರಮ ಆಯೋಜಿಸಿದರು. ಬ್ಯಾಂಕ್ ಸಿಬಂದಿಗಳಾದ ಕುಸುಮಾವತಿ ಹಾಗೂ ಶ್ರೀಲತಾ ಪ್ರಾರ್ಥಿಸಿದರು. ಶಾಖಾ ಪ್ರಬಂಧಕಿ ಮಮತಾ ಕೆ. ಸ್ವಾಗತಿಸಿದರು. ಸಿಬಂದಿ ಕುಸುಮಾವತಿ ವಂದಿಸಿದರು.

ಮಹಿಳಾ ಸಾಧಕಿಯರಿಗೆ ಗೌರವಾರ್ಪಣೆ

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರನ್ನು ಗೌರವಿಸಲಾಯಿತು. ಪುತ್ತೂರು ಪ್ರಗತಿ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್‌ನ ಡಾ. ಸುಧಾ ರಾವ್, ಪುತ್ತೂರು ಪ್ರಸಾದ್ ಡೆಂಟಲ್ ಕ್ಲಿನಿಕ್‌ನ ಡಾ. ಅಮೃತಾ ಕೃಷ್ಣ ಪ್ರಸಾದ್, ಪುತ್ತೂರು ಶ್ರೀರಾಮಕೃಷ್ಣ ಪ್ರೌಢಶಾಲೆಯ ಮುಖ್ಯಗುರು ಜಯಲಕ್ಷ್ಮೀ, ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದ ಶುಭಾ ಕೆ., ಪುತ್ತೂರು ಸ್ವಾಭಿಮಾನಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಶಾಖಾ ಪ್ರಬಂಧಕಿ ತುಳಸಿ, ಸುದ್ದಿ ಬೆಳ್ತಂಗಡಿಯ ಸಿಂಚನಾ, ಶಿಲ್ಪಾ ಆಟೋ ಗ್ಯಾಸ್‌ನ ಜಾಹ್ನವಿ ಉಮಾನಾಥ್, ಕೋಟಕ್ಕಲ್ ಆರ್ಯವೈದ್ಯ ಶಾಲಾ ಡೀಲರ್ ಸೋನಾ ಪ್ರದೀಪ್ ಕುಮಾರ್, ಲಲಿತಾ ಕಲಾ ಆರ್ಟ್ ಹಾಗೂ ಎಮ್.ಎಮ್ ಟೂರ‍್ಸ್ ಆಂಡ್ ಟ್ರಾವೆಲ್ಸ್‌ನ ಮಮತಾ ಕುಮಾರಿ ಸಿ.ಎಚ್.ರವರನ್ನು ಪ್ರಾದೇಶಿಕ ವ್ಯವಸ್ಥಾಪಕ ದೇವಿಪ್ರಸಾದ್ ಶೆಟ್ಟಿ ಹಾಗೂ ಶಾಖಾ ಪ್ರಬಂಧಕಿ ಮಮತಾ ಕೆ.ರವರು ಮಹಿಳಾ ಸಾಧಕಿಯರನ್ನು ಗೌರವಿಸಿದರು.

LEAVE A REPLY

Please enter your comment!
Please enter your name here