






ಪುತ್ತೂರು: ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷರನ್ನಾಗಿ ನನ್ನನ್ನು ಸಂಘದ ಸ್ಥಾಪಕ ಅಧ್ಯಕ್ಷರಾಗಿರುವ ಸೇಸಪ್ಪ ಬೆದ್ರಕಾಡು ಅವರು ಜಿಲ್ಲೆಯ ಪದಾಧಿಕಾರಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಿದ್ದಾರೆ. ಸಮುದಾಯದ ಸೇವೆಗೆ ಅವಕಾಶದ ಸಂದರ್ಭದಲ್ಲಿ ಸಂಘಟನೆಯಲ್ಲಿ ಹಲವು ಸಮಯಗಳಿಂದ ಹೊರಗಿರುವ ನನ್ನ ಸಮುದಾಯವು ನಮ್ಮೊಂದಿಗೆ ಕೈಜೋಡಿಸಿ ಬಲಿಷ್ಠ ಸಂಘಟನೆಯನ್ನು ಕಟ್ಟಲು ಅವಕಾಶ ನೀಡುವಂತೆ ನೂತನ ಅಧ್ಯಕ್ಷ ಕೆ.ಗೋಪಾಲ್ ನೇರಳಕಟ್ಟೆಯವರು ಪತ್ರಿಕಾಗೋಷ್ಟಿಯಲ್ಲಿ ವಿನಂತಿಸಿದ್ದಾರೆ.


ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಇದೀಗ 19ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಸಂಘಟನೆಯು ಜಿಲ್ಲೆಯ ಎಲ್ಲಾ ಪರಿಶಿಷ್ಟ ಜಾತಿ ಪಂಗಡದ ಜನರಿಗಾಗಿ ಹೋರಾಟ ಮತ್ತು ಸಮಾಜ ಸೇವೆಯೇ ನಮ್ಮ ಗುರಿಯಾಗಿದೆ. ಡಾ. ಬಿ.ಆರ್ ಅಂಬೇಡ್ಕರ್ ಅವರ ಇತಿಹಾಸವನ್ನು ನಮ್ಮ ಸಮುದಾಯಕ್ಕೆ ತಿಳಿಸಿರುವ ಕೆಲಸವನ್ನು ಅತ್ಯುತ್ತಮವಾಗಿ ಮಾಡುತ್ತೇವೆ ಎಂದರು.





ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ವಿಟ್ಲದ ಕಾಯಾದ್ಯಕ್ಷ ಚಂದ್ರಶೇಖರ್ ಯು, ಜಿಲ್ಲಾ ಉಪಾಧ್ಯಕ್ಷ ಲೋಕೇಶ್ ತೆಂಕಿಲ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲಲಿತಾ ಕಾರ್ಪಾಡಿ, ಸದಸ್ಯ ಲಕ್ಷ್ಮಣ ಪಾರೆ ಉಪಸ್ಥಿತರಿದ್ದರು.








