





ಪುತ್ತೂರು: ಮಾ.11 ರಂದು ನಡೆಯಲಿರುವ ಕಾರ್ಜಾಲು ಶ್ರೀ ಧೂಮಾವತಿ ದೈವದ ವಾರ್ಷಿಕ ದೊಂಪದ ಬಲಿ ಜಾತ್ರೋತ್ಸವದ ಅಂಗವಾಗಿ ಮಾ.8 ರಂದು ಪುತ್ತೂರು ಪೇಟೆಯಲ್ಲಿ ಆಮಂತ್ರಣ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.



ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಬಳಿಯಿಂದ ಆರಂಭಗೊಂಡ ಆಮಂತ್ರಣ ಪತ್ರ ವಿತರಣಾ ಮೆರವಣಿಗೆಗೆ ನಗರಸಭಾ ಅಧ್ಯಕ್ಷ ಕೆ ಜೀವಂಧರ್ ಜೈನ್ ಅವರು ಚಾಲನೆ ನೀಡಿದರು.






ಈ ಸಂದರ್ಭದಲ್ಲಿ ದೊಂಪದ ಬಲಿ ನೇಮೋತ್ಸವ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ಕಲ್ಲೇಗ ರೂರಲ್ ಡೆವೆಲಪ್ ಮೆಂಟ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ಕಲ್ಲೇಗ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿಕಿರಣ್ ನೆಲಪ್ಪಾಲು, ನಗರಸಭಾ ಸದಸ್ಯ ಶಿವರಾಮ ಸಪಲ್ಯ, ಪ್ರಶಾಂತ್ ಮುರ, ದಿವಾಕರ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.








