ಮಾಂಡೋವಿ ಮೋಟಾರ್‍ಸ್ ಉಪ್ಪಿನಂಗಡಿ ಶಾಖೆಯಿಂದ ಯುಗಾದಿ ಸಂಭ್ರಮ

0

ಮಾ.10-11: ತಿಂಗಳಾಡಿ ಮತ್ತು ಕಕ್ಕೆಪದವಿನಲ್ಲಿ ಮೆಗಾ ಎಕ್ಸ್‌ಚೇಂಜ್, ಲೋನ್‌ಮೇಳ

ಪುತ್ತೂರು: ಮಾರುತಿ ಸುಜುಕಿ ವಾಹನಗಳ ಅಧಿಕೃತ ವಿತರಕರಾಗಿರುವ ಮಾಂಡೋವಿ ಮೋಟಾರ್‍ಸ್‌ನ ಉಪ್ಪಿನಂಗಡಿ ಶಾಖೆಯ ವತಿಯಿಂದ ಯುಗಾದಿ ಸಂಭ್ರಮ ಮತ್ತು ಮೆಗಾ ಎಕ್ಸ್‌ಚೇಂಜ್ ಮೇಳ ಮತ್ತು ಲೋನ್ ಮೇಳ ಮಾ.10 ಮತ್ತು 11 ರಂದು ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಿಂಗಳಾಡಿ ಮತ್ತು ಕಕ್ಕೆಪದವು ಗರೋಡಿ ಮೈದಾನದ ಎದುರಿನಲ್ಲಿ ನಡೆಯಲಿದೆ.


ಯುಗಾದಿ ಸಂಭ್ರಮದ ಪ್ರಯುಕ್ತ ಯುಗಾದಿ ವಿಶೇಷ ಕೊಡುಗೆ ಆಯೋಜಿಸಿದೆ. ಕೃಷಿಕರಿಗೆ ಗ್ರಾಮೀಣ ಸಹಕಾರಿ ಸೊಸೈಟಿ ಸದಸ್ಯರಿಗೆ ಗ್ರಾಮೀಣ ಸಣ್ಣ ಉದ್ದಿಮೆದಾರರಿಗೆ, ಗ್ರಾಮೀಣ ಶಿಕ್ಷಕರಿಗೆ, ಬ್ಯಾಂಕ್, ಸರಕಾರಿ ಹಾಗೂ ಇನ್ನಿತರ ಕಾರ್ಪೋರೇಟ್ ನೌಕರರು ಯುಗಾದಿ ವಿಶೇಷ ಕೊಡುಗೆ ಸೌಲಭ್ಯ ಪಡೆಯಬಹುದು. ಹೊಸ ಕಾರುಗಳ ಖರೀದಿಯಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಸಮರ್ಪಿಸುತ್ತಿದ್ದು ಮೆಗಾ ಎಕ್ಸ್‌ಚೇಂಜ್ ಮೇಳ ಮತ್ತು ಲೋನ್ ಮೇಳ ಆಯೋಜಿಸಿದೆ.

ಎಕ್ಸ್‌ಚೇಂಜ್ ಮೇಳದಲ್ಲಿ ಹಳೆಯ ಕಾರುಗಳಿಗೆ ಅತ್ಯುತ್ತಮ ಮೌಲ್ಯ ಮಾಪನದೊಂದಿಗೆ ಹೊಸ ಮಾರುತಿ ಕಾರುಗಳೊಂದಿಗೆ ವಿನಿಮಯ ಮಾಡಿಕೊಳ್ಳುವ ಸುವರ್ಣಾವಕಾಶವನ್ನು ನೀಡುತ್ತಿದೆ. ಹೊಸ ಕಾರುಗಳ ಖರೀದಿಗೆ ವಿಶೇಷ ಹಣ ಉಳಿತಾಯದ ಅವಕಾಶವನ್ನು ನೀಡುತ್ತಿದೆ. ವ್ಯಾಗನರ್ ಕಾರಿಗೆ ರೂ.5,5೦,೦೦೦, ಆಲ್ಟೋ ಕೆ10 ಗೆ ರೂ.3,99,೦೦೦, ಸೆಲೆರಿಯೋ ಕಾರಿಗೆ ರೂ.5,35 ,೦೦೦, ಎಸ್.ಪ್ರೆಸ್ಸೋಗೆ ರೂ.4,25,೦೦೦ದ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಜೊತೆಗೆ ಶೇ.100ರಷ್ಟು ಆನ್‌ರೋಡ್ ಫಂಡಿಂಗ್ ಸೌಲಭ್ಯ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಶೋರೂಂ ಅಥವಾ 9845506596 ನಂಬರ್ ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here