ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಾಗಪ್ರತಿಷ್ಠಾ ಕಾರ್ಯಕ್ರಮ ಸಂಪನ್ನ

0

ನರಿಮೊಗರು: ಮುಂಡೂರು ಶ್ರೀಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಮೂಲನಾಗ ಸಾನಿಧ್ಯದ ಸ್ಥಳದಲ್ಲಿಯೇ ನಾಗನಕಟ್ಟೆ ನಿರ್ಮಿಸಿ ನಾಗಪ್ರತಿಷ್ಠೆ ಮಾಡಬೇಕೆಂದು ಕಂಡು ಬಂದ ಪ್ರಕಾರ ನೂತನ ಚಿತ್ರಕೂಟ ಕಟ್ಟೆಯಲ್ಲಿ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಾಗಪ್ರತಿಷ್ಠಾ ಕಲಶ ಕಾರ್ಯಕ್ರಮ ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ಮಾ.8ರಂದು ನಡೆಯಿತು.

ಬೆಳಿಗ್ಗೆ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಸಂಸ್ಕಾರ ಮಂಗಲ ಹೋಮ, ಆಶ್ಲೇಷಾ ಬಲಿ, ಅಷ್ಠವಟು ಆರಾಧನೆ, ಪಂಚವಿಂಶತಿ ಕಲಶಪೂಜೆ, ನಾಗಪ್ರತಿಷ್ಠೆ, ಪಂಚಾಮೃತ ಅಭಿಷೇಕ, ತಂಬಿಲ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಶಾಸಕ ಸಂಜೀವ ಮಠಂದೂರು, ಪುತ್ತೂರು ನಗರಸಭಾಧ್ಯಕ್ಷ ಜೀವಂಧರ್ ಜೈನ್, ಆದರ್ಶ ಆಸ್ಪತ್ರೆಯ ಡಾ.ಎಂ.ಕೆ.ಪ್ರಸಾದ್, ಭಾರತ್ ಎಂಟರ್‌ಪ್ರೈಸಸ್‌ನ ತಮ್ಮಪ್ಪ ಗೌಡರವರು ಭೇಟಿ ನೀಡಿದ್ದರು.

ಮಹಾಲಸ ಮೆಡಿಕಲ್ಸ್‌ನ ನಾಗೇಶ್ ಪೈ ಮತ್ತು ಮನೆಯರು, ಸ್ಥಳ ದಾನಿಗಳಾದ ವಾರಿಜ ಆಚಾರ್ಯ, ಪ್ರವೀಣ ಆಚಾರ್ಯ, ಸೇವಾದಾರರಾದ ನಳಿನಿ ಲೋಕಪ್ಪ ಗೌಡ ಕರೆಮನೆ ಮತ್ತು ಮನೆಯವರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಕರೆಮನೆ, ಸದಸ್ಯರುಗಳಾದ ಜನಾರ್ದನ ಜೋಯಿಸ ಕುತ್ತಿಗದ್ದೆ, ನಾಗೇಶ್ ನಾಯ್ಕ್, ಸಂಧ್ಯಾ ಕೈಪಂಗಳ ದೋಳ, ವೇದಾವತಿ ಕೆದ್ಕಾರು, ಮಾಜಿ ಅಧ್ಯಕ್ಷ ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್, ನರಿಮೊಗರು ಗ್ರಾ.ಪಂ.ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಶೆಣೈ ಬಜಪ್ಪಳ, ಮುಂಡೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಕುರೆಮಜಲು, ಪ್ರಮುಖರಾದ ಕಳುವಾಜೆ ವೆಂಕಟ್ರಮಣ ಗೌಡ, ಮಹಾಲಿಂಗ ನಾಯ್ಕ, ವಸಂತ ಗೌಡ ಸೇರಾಜೆ, ಮಾಧವ ಸಾಲ್ಯಾನ್ ಕುರೆಮಜಲು, ಬಾಲಚಂದ್ರ ಸೊರಕೆ, ಸುರೇಶ್ ಕಣ್ಣಾರಾಯ, ಗಣೇಶ್ ಸಾಲ್ಯಾನ್ ಪಜಿಮಣ್ಣು, ಗಣೇಶ್ ಸಾಲ್ಯಾನ್ ಕೈಪಂಗಳ, ಬಾಲಪ್ಪ ಗೌಡ ಕೆದ್ಕಾರು, ಪೆರೆಸ್ಕಾ ಡಿಸೋಜ, ವೇದನಾಥ ಸುವರ್ಣ, ವಾಸುದೇವ ಸಾಲ್ಯಾನ್ ಪಜಿಮಣ್ಣು, ಪ್ರಕಾಶ್ ಪುರುಷರಕಟ್ಟೆ, ತಾ.ಪಂ.ಮಾಜಿ ಸದಸ್ಯೆ ಯಶೋಧಾ ಕೆ.ಗೌಡ, ನರಿಮೊಗರು ಗ್ರಾ.ಪಂ.ಸದಸ್ಯ ಉಮೇಶ್ ಇಂದಿರಾನಗರ, ಸರ್ವೆ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಶ್ರೀರಾಮ ಕಲ್ಲೂರಾಯ, ವಿ.ವಿ.ನಾರಾಯಣ ಭಟ್, ಕೃಷ್ಣಪ್ರಸಾದ್ ಶರ್ಮ, ಪ್ರಭಾಕರ ಭಟ್ ಕಾಳಿಂಗಹಿತ್ಲು, ಕೇಪು ಕಾಳಿಂಗಹಿತ್ಲು, ತಿಮ್ಮಪ್ಪ ಗೌಡ ನಡುಬೈಲು, ಗುರುರಾಜ ಪುತ್ತೂರಾಯ, ರಾಮಣ್ಣ ಶೆಟ್ಟಿ ಮರ್ತಡ್ಕ, ಅಣ್ಣಿ ಪೂಜಾರಿ ಹಿಂದಾರು, ಮೋಹನ ನಾಯ್ಕ ಕೇದಗೆದಡಿ ಸೇರಿದಂತೆ ಹಲವು ಭಕ್ತಾದಿಗಳು ಉಪಸ್ಥಿತರಿದ್ದರು. ಪ್ರದಾನ ಅರ್ಚಕ ರಮೇಶ ಬೈಪಾಡಿತ್ತಾಯ ಮಹಾಪೂಜೆ ನಡೆಸಿಕೊಟ್ಟರು. ಸಹಾಯಕ ಅರ್ಚಕ ಶಂಕರನಾರಾಯಣ ಭಟ್, ಶಿವಪ್ರಸಾದ್ ಶಾಂತಿಗೋಡು, ಸಿಬ್ಬಂದಿ ವಿಜಿತ್ ಸಹಕರಿಸಿದರು.

LEAVE A REPLY

Please enter your comment!
Please enter your name here