





ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯದ 2022-23ನೇ ಸಾಲಿನ ಫ್ಯಾಶನ್ ಡಿಸೈನಿಂಗ್ ಪದವಿ ರ‍್ಯಾಂಕ್ ಪ್ರಕಟಗೊಂಡಿದ್ದು, ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನ ಫ್ಯಾಶನ್ ಡಿಸೈನ್ ಪದವಿಯ ಪ್ರಥಮ ಬ್ಯಾಚ್ ನಲ್ಲೇ ಪ್ರಥಮ ಹಾಗೂ ದ್ವಿತೀಯ ರ‍್ಯಾಂಕ್ ಪಡೆದುಕೊಂಡಿದೆ.



ಮಾತ್ರವಲ್ಲದೆ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 100 ಫಲಿತಾಂಶ ಪಡೆದಿದೆ. ಕಾಲೇಜಿನ ಸ್ವರ್ಣಜ್ಯೋತ್ಸ್ನಾ ಎಂ.(ಬಂಟ್ವಾಳ ತಾಲೂಕಿನ ಮಾಣಿ ಜನತಾ ಕಾಲನಿ ದಿ.ಅಶೋಕ್ ಪೂಜಾರಿ ಹಾಗೂ ರಮಾ ದಂಪತಿ ಪುತ್ರಿ)ರವರು ಪ್ರಥಮ ರ‍್ಯಾಂಕ್ ಹಾಗೂ ಜಸ್ಮಿತಾ ಎನ್.ಆರ್(ಸುಳ್ಯ ತಾಲೂಕಿನ ದೇವಚಳ್ಳ ನಿವಾಸಿ ರಾಮಯ್ಯ ಎನ್ ಹಾಗೂ ಗಿರಿಜಾ ದಂಪತಿ ಪುತ್ರಿ)ರವರು ದ್ವಿತೀಯ ರ‍್ಯಾಂಕ್ ಗಳಿಸಿಕೊಂಡಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.












