ಶಿಕ್ಷಣವೆಂದರೆ ಜೀವನನ್ನು ರೂಪಿಸುವ ಕಲೆ : ರಘುನಾಥ ರೈ ನುಳಿಯಾಲು

0

ಪುತ್ತೂರು: ಶಿಕ್ಷಣವೆಂದರೆ ಜೀವನನ್ನು ರೂಪಿಸುವ ಕಲೆ. ಅದನ್ನು ಕೇವಲ ತರಗತಿಯ ನಾಲ್ಕು ಗೋಡೆಗಳ ನಡುವೆ ಮಾತ್ರ ಸೀಮಿತವಾಗಿ ಇರಿಸದೆ ಜೀವನದ ಪ್ರತಿ ಕ್ಷಣಗಳಲ್ಲೂ ಜ್ಞಾನಾರ್ಜನೆಯ ಹಸಿವನ್ನು ಇಟ್ಟುಕೊಳ್ಳಬೇಕು ಎಂದು ನಿವೃತ್ತ ಮುಖ್ಯ ಗುರು ರಘುನಾಥ ರೈ ನುಳಿಯಾಲು ಹೇಳಿದರು. ಹೀಗಾದಲ್ಲಿ ಮಾತ್ರ ಯಶಸ್ವಿ ಜೀವನವನ್ನು ನಡೆಸಿ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬದುಕಬಹುದು. ಈಗಿನ ಶಿಕ್ಷಣ ಪದ್ಧತಿ ಮತ್ತು ಹಿಂದಿನ ಶಿಕ್ಷಣ ಪದ್ಧತಿಯನ್ನು ಹೋಲಿಸಬಾರದು, ಏಕೆಂದರೆ ಶಿಕ್ಷಣ ಪದ್ಧತಿಯಲ್ಲಿ ಕಾಲಕಾಲಕ್ಕೆ ತಿದ್ದುಪಡಿಗಳು ಅಗತ್ಯ. ಇಲ್ಲದಿದ್ದರೆ, ಕಾಲಕಾಲದ ಅಗತ್ಯಗಳಿಗೆ ಅನುಗುಣವಾಗಿ ಪ್ರತಿಭೆಗಳನ್ನು ಸೃಷ್ಟಿಸಲು ಅಸಾಧ್ಯ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವತಿಯಿಂದ ದ ಕ ಜಿ ಪಂ ಸ ಹಿ ಪ್ರಾ ಶಾಲೆ,ಮುಂಡೂರು 1 ಇಲ್ಲಿ ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಮುಖ್ಯ ಅತಿಥಿ ನಿಡ್ಪಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ನಂದಿನಿ ಆರ್ ರೈ ಯುವಜನತೆಯು ಒಂದು ದೇಶದ ಭವಿಷ್ಯವನ್ನು ನಿರ್ಧರಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಯುವಜನತೆ ದೇಶದ ಬೆನ್ನೆಲುಬು. ದೇಶದ ಅಭಿವೃದ್ಧಿಯಲ್ಲಿ ತನ್ನನ್ನು ತಾನು ಸವಿಸುವ ಯುವಕ ಯುವತಿಯರನ್ನು ಸೃಷ್ಟಿಸುವ ಪುಣ್ಯ ಕಾರ್ಯದಲ್ಲಿ ಎನ್ ಎಸ್ ಎಸ್ ನಿರತವಾಗಿದೆ. ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸಹಬಾಳ್ವೆಯ ಗುಣವನ್ನು ತರುವಲ್ಲಿ ಪರಿಣಾಮಕಾರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ನುಡಿಗಳನ್ನಾಡಿದ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ಮುಖ್ಯ ಗುರು ಮಾಲತಿ ಭಟ್ ಶ್ರಮದಾನ ಮಂತಾದ ಕಾರ್ಯಗಳು ಸ್ವಯಂಸೇವಕರಲ್ಲಿ ಸೇವಾ ಮನೋಭಾವ ರೂಪಿಸಿಕೊಳ್ಳಲು ಸಹಕಾರಿಯಾಗಿದೆ. ಜೀವನ ಪಾಠವನ್ನು ಎನ್ಎಸ್ಎಸ್ ಶಿಬಿರವು ಶಿಬಿರಾರ್ಥಿಗಳಿಗೆ ಕಲ್ಪಿಸಿ ಕೊಡುತ್ತದೆ ಎಂದು ಹೇಳಿದರು.

ತದನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು.
ಶಾಲಾ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಸುಂದರ ಹಾಗೂ ಬಟ್ಯ ನಾಯ್ಕ ಹಾಗೂ ಕಾಲೇಜಿನ ಉಪನ್ಯಾಸಕ ವೃಂದದವರಾದ ರಜನಿ, ಶಿಬಿರಾಧಿಕಾರಿಗಳಾದ ಪ್ರೊ. ಹರಿಪ್ರಸಾದ್ ಎಸ್ ಮತ್ತು ಪ್ರೊ.ಶಶಿಕುಮಾರ ಹಾಗೂ ಊರವರು, ಶಾಲಾ ವಿದ್ಯಾರ್ಥಿಗಳು, ಘಟಕ ನಾಯಕರುಗಳು, ಶಿಬಿರಾರ್ಥಿಗಳು  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಬಿರಾರ್ಥಿ ಹರ್ಷಿತಾ ಎನ್ ಕೆ ಸ್ವಾಗತಿಸಿದರು. ದಯಾನಿಧಿ ಯನ್ ವಂದಿಸಿದರು. ಅನನ್ಯ ಎಸ್ ನಿರೂಪಿಸಿದರು.

LEAVE A REPLY

Please enter your comment!
Please enter your name here