ಪುತ್ತೂರು: ಮನುಷ್ಯರಂತೆ ಮನೆಯಲ್ಲಿರುವ ಸಾಕು ಪ್ರಾಣಿಗಳನ್ನು ಸ್ವಚ್ಚ, ಸುಂದರಗೊಳಿಸುವ ಪುತ್ತೂರಿನ ಪ್ರಥಮ ಮಳಿಗೆ ಗ್ರೂಮ್ರೂಂ ಮಾ.10ರಂದು ಮಾರ್ಕೆಟ್ ರಸ್ತೆಯ ಟೌನ್ಬ್ಯಾಂಕ್ ಮುಂಭಾಗದಲ್ಲಿರುವ ಯೂನಿಯನ್ ಕ್ಲಬ್ ಕಟ್ಟಡದಲ್ಲಿ ಶುಭಾರಂಭಗೊಂಡಿತು.
ಸಾಕು ಪ್ರಾಣಿಗಳ ಆಹಾರ, ಔಷಧಿ ಹಾಗೂ ಪರಿಕರಗಳ ಮಾರಾಟ ಮಳಿಗೆಗಳ ಮೂಲಕ ಚಿರಪರಿಚಿತರಾಗಿ ಮಂಗಳೂರಿನ ಬಜ್ಪೆ, ವಾಮಂಜೂರು, ಬಿಸಿರೋಡ್, ಸುಳ್ಯ ಹಾಗೂ ಪುತ್ತೂರಿನ ದರ್ಬೆ ಹಾಗೂ ಮಾರ್ಕೆಟ್ ರಸ್ತೆ ಬಳಿ ಮಳಿಗೆಗಳನ್ನು ಹೊಂದಿರುವ ಪೆಟ್ ಪ್ಲಾನೆಟ್ನವರ 8ನೇ ಮಳಿಗೆ ಸಾಕುಪ್ರಾಣಿಗಳನ್ನು ಅಂದಗೊಳಿಸುವ ಗ್ರೂಮ್ರೂಂ ಪ್ರಾರಂಭಗೊಂಡಿದೆ. ಮಳಿಗೆಯಲ್ಲಿ ಮಳಿಗೆಯಲ್ಲಿ ಸಾಕು ಪ್ರಾಣಿಗಳಾದ ನಾಯಿ ಹಾಗೂ ಬೆಕ್ಕುಗಳಿಗೆ ಸ್ನಾನ, ಹಲ್ಲು ಶುಚಿಗೊಳಿಸುವುದು, ಅಂದವಾಗಿ ಕಾಣುವಂತೆ ಕೂದಲು ತೆಗೆಯುವುದು, ಉಗುರು ಕತ್ತರಿಸುವುದು, ಫುಲ್ ಗ್ರೂಮಿಂಗ್, ಶೋ ಗ್ರೂಮಿಂಗ್, ಡಿ-ಶೆಡ್ ಟ್ರೀಟ್ಮೆಂಟ್, ಟೀತ್ ಕ್ಲೀನಿಂಗ್, ಪೆಡಿಕ್ಯೂರ್, ಸ್ಪಾ ಪ್ಯಾಕೇಜ್, ವಿಂಗ್ ಕ್ಲಪಿಪಿಂಗ್ ಬೀಕ್& ನೈಲ್ ಟ್ರಿಮ್ಮಿಂಗ್ ಮೊದಲಾದ ಸೇವೆಗಳು ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ನೂತನ ಮಳಿಗೆಯನ್ನು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇಂದು ಸಾಕುಪ್ರಾಣಿ ಉದ್ಯಮವು ಬಹಳ ವೇಗವಾಗಿ ಬೆಳೆಯುತ್ತಿದೆ. ಪೆಟ್ ಪ್ಲಾನೆಟ್ ಎಂಬ ಸಂಸ್ಥೆಯ ಮೂಲಕ ಜನರಿಗೆ ಉತ್ತಮ ಸೇವೆ ನೀಡುತ್ತಿದ್ದ ಮಳಿಗೆಯು ಇದೀಗ ಅದರಲ್ಲಿಯೇ ಇನ್ನೊಂದು ಭಾಗವಾಗಿ ಗ್ರೂಮ್ ರೂಂನ್ನು ಪುತ್ತೂರಿನ ಜನತೆಗ ಅರ್ಪಿಸುತ್ತಿದ್ದಾರೆ. ಮನುಷ್ಯರಿಗೆ ಕಡಿಮೆಯಿಲ್ಲದ ರೀತಿಯಲ್ಲಿ ಸಾಕುಪ್ರಾಣಿಗಳಿಗೂ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯುತ್ತಿದೆ. ಪುತ್ತೂರಿನಲ್ಲಿ ಪ್ರಥಮವಾಗಿ ಜನರ ಬೇಡಿಕೆಗೆ ಪೂರಕವಾಗಿ ಮಳಿಗೆ ಪ್ರಾರಂಭಗೊಂಡಿದೆ. ಸಂಸ್ಥೆಯ ಮೂಲಕ ಜನತೆಗೆ ಉತ್ತಮ ಪ್ರಯೋಜನ ಪಡೆಯುವಂತಾಗಲಿ ಎಂದರು.
ಅತಿಥಿಗಳನ್ನು ಸ್ವಾಗತಿಸಿದ ಸಂಸ್ಥೆಯ ಮ್ಹಾಲಕ ಪ್ರವೀಣ್ರಾಜ್ ಮಾತನಾಡಿ, ಪೆಟ್ ಉದ್ಯಮವು ಪುತ್ತೂರಿನಲ್ಲಿ ವೇಗವಾಗಿ ಬೆಳೆಯುತ್ತಿದ್ದೆ. ಅದಕ್ಕೆ ಪೂರಕವಾಗಿ ಮಳಿಯನ್ನು ಪ್ರಾಂಭಿಸಲಾಗಿದೆ. ಪ್ರಾಣಿಗಳ ಗ್ರೂಮಿಂಗ್ಗಾಗಿ ದೂರದ ಮಂಗಳೂರಿಗೆ ತೆರಳಬೇಕಾಗಿತ್ತು. ಜನರ ಆವಶ್ಯಕತೆಗೆ ತಕ್ಕಂತೆ ಪುತ್ತೂರಿನಲ್ಲಿ ಗ್ರೂಮ್ರೂಂನ್ನು ಪ್ರಾರಂಭಿಸಲಾಗಿದೆ. ಜನರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ವಿನಂತಿಸಿದರು.
ಮ್ಹಾಲಕರ ಪತ್ನಿ ರಶ್ಮಿಲ ಪ್ರವೀಣ್ ರಾಜ್, ನವೀನ್ ಗಾನದಮನೆ, ದೇವಪ್ಪ ಬಂಗೇರ ಕಾಡುಮಠ ಸೇರಿದಂತೆ ಹಲವು ಮಂದಿ ಆಗಮಿಸಿ ಶುಭಹಾರೈಸಿದರು.