ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಸ್ವಾಗತ

0

ಉಪ್ಪಿನಂಗಡಿ: ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಶುಕ್ರವಾರ ರಾತ್ರಿ ಉಪ್ಪಿನಂಗಡಿ ಆಗಮಿಸಿದ್ದು, ಇಲ್ಲಿನ ಕಾಂಗ್ರೆಸ್ ವತಿಯಿಂದ ಅವರನ್ನು ಬಸ್‌ನಿಲ್ದಾಣದ ವೃತ್ತದ ಬಳಿ ಸ್ವಾಗತಿಸಲಾಯಿತು.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಪುತ್ತೂರಿಗೆ ತೆರಳುವಾಗ ಅವರಿಗೆ ಉಪ್ಪಿನಂಗಡಿಯಲ್ಲಿ ಸ್ವಾಗತ ನೀಡಲಾಗಿದ್ದು, ಅವರು ಮಾ.೧೮18 ಮತ್ತು ಮಾ.19ರಂದು ನಡೆಯಲಿರುವ ಉಬಾರ್ ಕಪ್ ಕ್ರಿಕೆಟ್ ಪಂದ್ಯಾಟದ ಪೋಸ್ಟರ್ ಬಿಡುಗಡೆಗೊಳಿಸಿದರು.

ಈ ಸಂದರ್ಭ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಯುವ ಬ್ರಿಗೇಡ್ ಸೇವಾದಳದ ರಾಜ್ಯಾಧ್ಯಕ್ಷ ಜುನೈದ್ ಪಿ.ಕೆ., ದ.ಕ. ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಪೆರ್ನೆ, ಮುಖಂಡರಾದ ಚಂದ್ರಹಾಸ ಶೆಟ್ಟಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ರೋಶನ್ ರೈ ಬನ್ನೂರು, ಯು.ಟಿ. ತೌಸೀಫ್, ವಿಕ್ರಮ್ ಶೆಟ್ಟಿ ಅಂತರ, ಅಭಿಷೇಕ್ ಬೆಳ್ಳಿಪ್ಪಾಡಿ, ಕೃಷ್ಣಪ್ರಸಾದ್ ಆಳ್ವ, ಕಲಂದರ್ ಶಾಫಿ, ಫಾರೂಕ್ ಪೆರ್ನೆ, ನವಾಝ್ ಕರ್ವೇಲು, ಜಯಪ್ರಕಾಶ್ ಬದಿನಾರು, ನಝೀರ್ ಮಠ, ಮುಹಮ್ಮದ್ ಕೊಪ್ಪಳ, ರಂಜಿತ್ ಬಂಗೇರ, ಶೌಕತ್ ಅಲಿ ಕೆಮ್ಮಾರ, ಆಚಿ ಕೆಂಪಿ, ಶರೀಫ್ ಬಲ್ನಾಡು, ರಿಯಾಝ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here