ಆಲಂಕಾರು ಜೇಸಿಐಯಿಂದ ’ಸೆಲ್ಯೂಟ್ ದಿ ಸೈಲಂಟ್’ ವರ್ಕರ್ ಪುರಸ್ಕಾರ

0

ಆಲಂಕಾರು: ಜೇಸಿಐ ಭಾರತದ ಪ್ರತಿಷ್ಠಿತ ಘಟಕವಾದ ಜೇಸಿಐ ಆಲಂಕಾರು ಇದರ ವತಿಯಿಂದ ಗ್ರಾಮೀಣ ಪ್ರದೇಶದಲ್ಲಿ ಎಲೆಮರೆ ಕಾಯಿಯಂತೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಮೆಸ್ಕಾಂ ಆಲಂಕಾರು ಶಾಖಾ ಪವರ್‌ಮ್ಯಾನ್ ಸಿದ್ದಪ್ಪ ಬಸಪ್ಪ ಕೆರುಟಗಿ ಅವರಿಗೆ ’ಸೆಲ್ಯೂಟ್ ದಿ ಸೈಲಂಟ್’ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಆಲಂಕಾರು ಜೇಸಿಐ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಜೇಸಿಐ ವಲಯ ತರಬೇತಿ ವಿಭಾಗದ ನಿರ್ದೇಶಕ ಪ್ರದೀಪ್ ಬಾಕಿಲ, ಜ್ಯೂನಿಯರ್ ಜೇಸಿ ನಿರ್ದೇಶಕಿ ಸ್ವಾತಿ ರೈ ಪುತ್ತೂರು, ಆಲಂಕಾರು ಘಟಕದ ಸ್ಥಾಪಕಾಧ್ಯಕ್ಷ ಜನಾರ್ದನ ಬಿ.ಎಲ್., ಪೂರ್ವಾಧ್ಯಕ್ಷರಾದ ಪ್ರಶಾಂತ್‌ಕುಮಾರ್ ರೈ, ಗುರುಕಿರಣ್ ಆಳ್ವ, ಕಾರ್ಯದರ್ಶಿ ಮಹೇಶ್ ಪಾಟಾಳಿ, ಸದಸ್ಯರಾದ ರಾಮಣ್ಣ ಗೌಡ, ಮಮತಾ ಅಂಬರಾಜೆ, ಪ್ರೇಮ್‌ಕುಮಾರ್, ಪವನ್‌ಕುಮಾರ್, ಮನೋಜ್, ಸದಾನಂದ ಕುಂಟ್ಯಾನ, ಶೈಲಜಾ ರಾಜೇಶ್, ಮೆಸ್ಕಾಂ ಆಲಂಕಾರು ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here