ಗ್ರಾ. ಪಂ. ಬಿಲ್‌ಕಲೆಕ್ಟರ್, ಗುಮಾಸ್ತ/ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಪದೋನ್ನತಿ

0

ಬನ್ನೂರಿನ ನಾರಾಯಣ ನಾಯ್ಕ, ಕಬಕದ ಅಣ್ಣುರವರು ಗ್ರೇಡ್-2 ಕಾರ್ಯದರ್ಶಿಯಾಗಿ ಭಡ್ತಿ-ವರ್ಗ

ಪುತ್ತೂರು:ದ.ಕ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿಲ್‌ಕಲೆಕ್ಟರ್, ಗುಮಾಸ್ತ/ಕ್ಲಕ್ ಕಂ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಗ್ರಾ.ಪಂ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ(ಗ್ರೇಡ್-2) ಹುದ್ದೆಗೆ ಪದೋನ್ನತಿ ನೀಡಿ ಆದೇಶಿಸಿದ್ದು ಬನ್ನೂರು ಗ್ರಾ.ಪಂನ ಬಿಲ್ ಕಲೆಕ್ಟರ್ ನಾರಾಯಣ ನಾಯ್ಕ ಹಾಗೂ ಕಬಕ ಗ್ರಾ.ಪಂನ ಬಿಲ್ ಕಲೆಕ್ಟರ್ ಅಣ್ಣುರವರಿಗೆ ಮುಂಭಡ್ತಿಯಾಗಿ ವರ್ಗಾವಣೆಗೊಂಡಿದ್ದಾರೆ.

ಬನ್ನೂರು ಗ್ರಾ.ಪಂನಲ್ಲಿ ಕಳೆದ ಸುಮಾರು 28 ವರ್ಷಗಳಿಂದ ಬಿಲ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿರುವ ನಾರಾಯಣ ನಾಯ್ಕರವರು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2 ಕಾರ್ಯದರ್ಶಿಯಾಗಿ ಮುಂಭಡ್ತಿ ಪಡೆದು ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾ.ಪಂಗೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕಬಕ ಗ್ರಾ.ಪಂನಲ್ಲಿ 24 ವರ್ಷಗಳಿಂದ ಬಿಲ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿರುವ ಅಣ್ಣು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2 ಕಾರ್ಯದರ್ಶಿಯಾಗಿ ಮುಂಭಡ್ತಿ ಪಡೆದು ಕೋಡಿಂಬಾಡಿ ಗ್ರಾ.ಪಂಗೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

LEAVE A REPLY

Please enter your comment!
Please enter your name here