ಮಜಲುಮಾರು ಉಮಾಮಹೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳದಿಂದ ರೂ.5 ಲಕ್ಷ ದೇಣಿಗೆ

0

ಪುತ್ತೂರು:ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ ವೀರೇಂದ್ರ ಹೆಗ್ಗಡೆಯವರು ರೂ.5 ಲಕ್ಷ ಮೊತ್ತದ ದೇಣಿಗೆಯ ಚೆಕ್‌ನ್ನು ಮಾ.11ರಂದು ದೇವಸ್ಥಾನದ ಟ್ರಸ್ಟ್‌ಗೆ ಹಸ್ತಾಂತರಿಸಿದರು.

ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷರಾದ ಕೆ.ಯಂ. ಬೆಳಿಯಪ್ಪ ಗೌಡ ಕೆದ್ಕಾರ್, ಸದಸ್ಯರಾದ ಗಣೇಶ್ ಭಟ್, ಯಂ. ರವಿ ಮಣಿಯ, ಕೆ. ಗಿರೀಶ್ ರೈ ಮಣಿಯ ಹಾಗೂ ಗ್ರಾಮಾಭಿವೃದ್ದಿ ಯೋಜನೆಯ ಕೆಮ್ಮಿಂಜೆ ವಲಯದ ವಲಯಧ್ಯಕ್ಷ ಸುಂದರ ಬಲ್ಯಾಯ ಉಪಸ್ಥಿತರಿದರು.

LEAVE A REPLY

Please enter your comment!
Please enter your name here