ಕಂಬಳಕ್ಕೆ ಆಕರ್ಷಣಾ ಗುಣವಿದೆ: ಲಕ್ಷ್ಮಣ ಮಣಿಯಾಣಿ

0

ಉಪ್ಪಿನಂಗಡಿ: ಕರಾವಳಿಯ ಜಾನಪದ ಆಚರಣೆ, ಕ್ರೀಡೆಗಳಿಗೆ ಮನುಷ್ಯರನ್ನು ಸೆಳೆಯುವ ಗುಣವಿದೆ. ನಮ್ಮ ನೆಲದ ಮಣ್ಣಿನಲ್ಲಿ ಬೆಸೆದಿರುವ ಕಂಬಳದಂತಹ ಕ್ರೀಡೆಗಳಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವುದೇ ಇದಕ್ಕೆ ಸಾಕ್ಷಿ. ಇಂತಹ ಸಮೃದ್ಧ ಕಲೆ, ಸಂಸ್ಕೃತಿಯನ್ನು ಇನ್ನಷ್ಟು ಬೆಳೆಸುವ ಪ್ರಯತ್ನವಾಗಬೇಕು ಎಂದು ಉದ್ಯಮಿ ಲಕ್ಷಣ ಮಣಿಯಾಣಿ ಅಭಿಪ್ರಾಯಿಸಿದರು.
ಭಾನುವಾರ ಮಧ್ಯಾಹ್ನ ಸಂಪನ್ನಗೊಂಡ 37ನೇ ವಿಜಯ- ವಿಕ್ರಮ ಜೋಡುಕರೆ ಕಂಬಳದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಲ್ಲಿಯವನೇ ಆದರೂ, ದೂರದ ಮುಂಬೈಯಲ್ಲಿ ಬದುಕು ಕಟ್ಟಿಕೊಂಡಿರುವ ನನ್ನನ್ನು ಇಲ್ಲಿಗೆ ಬರುವಂತೆ ಮಾಡಿದ್ದು ಕಂಬಳಕ್ಕಿರುವ ಆಕರ್ಷಣಾ ಗುಣ. ನಾವೆಲ್ಲಾ ಒಗ್ಗೂಡಿ ಕಂಬಳವನ್ನು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತೆ ಮಾಡಬೇಕಿದೆ ಎಂದರು.


ವಿಜಯ- ವಿಕ್ರಮ ಜೋಡುಕರೆ ಕಂಬಳದ ಸಾರಥ್ಯ ವಹಿಸಿರುವ, ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಕೃತಿ, ಆಚಾರ- ವಿಚಾರಗಳ ಉಳಿವಿಗಾಗಿ ನಾವೆಲ್ಲಾ ಒಂದೇ ಎಂಬ ಮನೋಭಾವದಿಂದ ಒಗ್ಗೂಡಿದಾಗ ಮಾತ್ರ ಕಂಬಳದಂತಹ ಕ್ರೀಡೆಗಳು ಯಶಸ್ವಿಯಾಗಿ ನಡೆಯಲು ಸಾಧ್ಯ. ಕಂಬಳ ಕೋಣಗಳ ಯಜಮಾನರ ಕಂಬಳಾಭಿಮಾನಿಗಳು, ಕಂಬಳ ಸಮಿತಿಯವರ ಸಹಕಾರದಿಂದ ಉಪ್ಪಿನಂಗಡಿಯ ವಿಜಯ- ವಿಕ್ರಮ ಕಂಬಳ ವರ್ಷಂಪ್ರತಿ ಇನ್ನಷ್ಟು ವೈಭವದಿಂದ ನೆರವೇರುತ್ತಿದೆ. ಇಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವ ಕೋಣಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿವೆ. ಇದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರಲ್ಲದೆ, ಯುವ ಜನತೆ ಇನ್ನಷ್ಟು ಕಂಬಳದಲ್ಲಿ ತೊಡಗಿಸಿಕೊಳ್ಳಬೇಕಿದೆ. ಈ ಮೂಲಕ ನಮ್ಮ ನೆಲದ ಸಂಸ್ಕೃತಿಯನ್ನು ದೇಶ- ವಿದೇಶದಲ್ಲೂ ಪಸರಿಸುವ ಕೆಲಸವಾಗಬೇಕಿದೆ ಎಂದರು.


ಕಾರ್ಯಕ್ರಮದಲ್ಲಿ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಪ್ರಧಾನ ತೀರ್ಪುಗಾರರಾದ ಎಂ. ರಾಜೀವ ಶೆಟ್ಟಿ ಎಡ್ತೂರು, ಉದ್ಯಮಿ ಪ್ರಸನ್ನ ಶೆಟ್ಟಿ, ಪ್ರಮುಖರಾದ ಸದಾಶಿವ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಯತೀಶ್ ಶೆಟ್ಟಿ ಕೋಡಿಂಬಾಡಿ, ಗೋಪಾಲ ಶೆಟ್ಟಿ, ಸುದರ್ಶನ್ ನಾಯಕ್, ಸುಧಾಕರ ಶೆಟ್ಟಿ ಮೊಗರೋಡಿ, ರೆಂಜಾಳ ಕಾರ್ಯ ಸುರೇಶ್ ಕೆ. ಪೂಜಾರಿ, ರವೀಂದ್ರ ಕುಮಾರ್ ಕುಕ್ಕುಂದೂರು, ವಿಜಯಕುಮಾರ್ ಜೈನ್ ಕಂಗಿನಮನೆ, ವಿದ್ಯಾಧರ ಜೈನ್ ರೆಂಜಾಳ, ಸತೀಶ್ ಕುಮಾರ್ ಹೊಸ್ಮಾರು, ವಲೇರಿಯನ್ ಡೇಸಾ ಅಲ್ಲಿಪಾದೆ, ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ, ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಪಾಧ್ಯಕ್ಷರಾದ ನಟೇಶ್ ಪೂಜಾರಿ, ರಾಮಚಂದ್ರ ಮಣಿಯಾಣಿ, ವಿಠಲ ಶೆಟ್ಟಿ ಕೊಲ್ಲೊಟ್ಟು, ವಿದ್ಯಾಧರ ಜೈನ್, ಶಿವಪ್ರಸಾದ್ ರೈ ಮಠಂತಬೆಟ್ಟು, ಕಾರ್ಯದರ್ಶಿ ಚಂದ್ರಶೇಖರ ಮಡಿವಾಳ, ಜೊತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಕಂಗ್ವೆ ಉಪಸ್ಥಿತರಿದ್ದರು.


ಮಾಜಿ ಸಚಿವ ಬಿ. ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಕೃಪಾ ಅಮರ್ ಆಳ್ವ, ಕಾಂಗ್ರೆಸ್ ಮುಖಂಡ ಚಂದ್ರಹಾಸ ಶೆಟ್ಟಿ ಆಗಮಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ನಮ್ಮೂರು- ನೆಕ್ಕಿಲಾಡಿ ಅಧ್ಯಕ್ಷ ಜತೀಂದ್ರ ಶೆಟ್ಟಿ, ಕಯ್ಯಾರುಪಾದೆ ತರವಾಡು ಟ್ರಸ್ಟ್‌ನ ಹಾಗೂ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಕೊಲ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ರೈ ಬಡಗನ್ನೂರು, ಕಂಬಳ ಸಮಿತಿಯ ಸಂಘಟನಾ ಕಾರ್ಯದರ್ಶಿಗಳಾದ ಯೊಗೀಶ್ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಕೃಷ್ಣಪ್ರಸಾದ್ ಬೊಳ್ಳಾವು, ವಿಜಯ ಪೂಜಾರಿ ಚೀಮುಳ್ಳು, ದಿಲೀಪ್ ಶೆಟ್ಟಿ ಕರಾಯ, ಸಹ ಸಂಚಾಲಕರಾದ ಜಯಪ್ರಕಾಶ್ ಬದಿನಾರು, ಶಿವರಾಮ ಶೆಟ್ಟಿ ಗೋಳ್ತಮಜಲು, ಸಮಿತಿಯ ನಿಹಾಲ್ ಪಿ. ಶೆಟ್ಟಿ, ಸತೀಶ್ ಶೆಟ್ಟಿ ಹೆನ್ನಾಳ, ರಾಕೇಶ್ ಶೆಟ್ಟಿ ಕೆಮ್ಮಾರ, ಜಗದೀಶ್ ಕುಮಾರ್ ಪರಕಜೆ, ಜಯಾನಂದ ಗೌಡ, ಕೃಷ್ಣಪ್ಪ ಪೂಜಾರಿ, ಜಗನ್ನಾಥ ರೈ ನಡುಮನೆ, ರಾಕೇಶ್ ಶೆಟ್ಟಿ, ಪದ್ಮನಾಭ ಪಕಳ ಕುಂಡಾಪು ಮತ್ತಿತರರು ಉಪಸ್ಥಿತರಿದ್ದರು.


ಕಂಬಳ ಸಮಿತಿಯ ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.


37 ನೇ ವಿಜಯ ವಿಕ್ರಮ ಕಂಬಳದ ಫಲಿತಾಂಶ
ಈ ಕಂಬಳ ಕೂಟದಲ್ಲಿ ಈ ಬಾರಿ ಒಟ್ಟು 134 ಜೊತೆ ಕೋಣಗಳು ಭಾಗವಹಿಸಿದ್ದು, ಕನೆ ಹಲಗೆ ವಿಭಾಗದಲ್ಲಿ 3 ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 14 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 16 ಜೊತೆ, ಅಡ್ಡ ಹಲಗೆ ವಿಭಾಗದಲ್ಲಿ 7 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 26 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 68 ಜೊತೆ ಕೋಣಗಳು ಭಾಗವಹಿಸಿದವು.


ಕನಹಲಗೆ:
ಬೋಳಾರ ತ್ರಿಶಾಲ್ ಕೆ. ಪೂಜಾರಿ (ಕೋಣಗಳನ್ನು ಓಡಿಸಿದವರು: ಬೈಂದೂರು ಮಹೇಶ್ ಪೂಜಾರಿ) ಪ್ರಥಮ (ನೀರು ನೋಡಿ ಬಹುಮಾನ). ವಾಮಂಜೂರು ತಿರುವೈಲುಗುತ್ತು ನವೀನ್‌ಚಂದ್ರ ಆಳ್ವ (ಕೋಣಗಳನ್ನು ಓಡಿಸಿದವರು ಬೈಂದೂರು ಭಾಸ್ಕರ ದೇವಾಡಿಗ) ದ್ವಿತೀಯ.

ಹಗ್ಗ ಹಿರಿಯ ವಿಭಾಗ:
ಎರ್ಮಾಳ್ ರೋಹಿತ್ ಹೆಗ್ಡೆ – (ಕೋಣಗಳನ್ನು ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ) ಪ್ರಥಮ, ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ (ಬಿ) ( ಕೋಣಗಳನ್ನು ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ ) ದ್ವಿತೀಯ.

ಹಗ್ಗ ಕಿರಿಯ ವಿಭಾಗ:
ಕೊಳಕ್ಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ (ಕೋಣಗಳನ್ನು ಓಡಿಸಿದವರು: ಕೊಳಕ್ಕೆ ಇರ್ವತ್ತೂರು ಆನಂದ) ಪ್ರಥಮ, ಶ್ರೀ ವಿಷ್ಣುಮೂರ್ತಿ ದೇವತ ಬಿಳಿಯೂರು ಮೇಗಿನಮನೆ ಐತಪ್ಪ ಗಣಪ ಭಂಡಾರಿ (ಕೋಣಗಳನ್ನು ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ) ದ್ವಿತೀಯ.


ಅಡ್ಡ ಹಲಗೆ:
ಬೋಳಾರ್ ತ್ರಿಶಾಲ್ ಕೆ. ಪೂಜಾರಿ (ಕೋಣಗಳನ್ನು ಓಡಿಸಿದವರು: ಸಾವ್ಯ ಗಂಗಯ್ಯ ಪೂಜಾರಿ) ಪ್ರಥಮ. ಮೂಡಬಿದ್ರೆ ಅಲಂಗಾರು ಕಾನ ಫ್ರಾನ್ಸಿಸ್ ಐವನ್ ಡಿಸೋಜ (ಕೋಣಗಳನ್ನು ಓಡಿಸಿದವರು: ಉಲ್ಲೂರು ಕಂದಾವರ ಗಣೇಶ್) ದ್ವಿತೀಯ

ನೇಗಿಲು ಹಿರಿಯ:
ಬೆಳುವಾಯಿ ಖಂಡಿಗ ರತ್ನಾಕರ ಶೆಟ್ಟಿ (ಬಿ) (ಕೋಣಗಳನ್ನು ಓಡಿಸಿದವರು: ಬೈಂದೂರು ಮಂಜುನಾಥ ಗೌಡ) ಪ್ರಥಮ., ಬೋಳದಗುತ್ತು ಸತೀಶ್ ಶೆಟ್ಟಿ (ಬಿ) (ಕೋಣಗಳನ್ನು ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ) ದ್ವಿತೀಯ.


ನೇಗಿಲು ಕಿರಿಯ:
ಅಲ್ಲಿಪಾದೆ ದೇವಶ್ಯ ಪಡೂರು ವಿಜಯ ವಿ. ಕೋಟ್ಯಾನ್ (ಕೋಣಗಳನ್ನು ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ), ಮರೋಡಿ ಕೆಳಗಿನ ಮನೆ ಕೃತೀಶ್ ಅಣ್ಣು ಪೂಜಾರಿ (ಕೋಣಗಳನ್ನು ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ) ದ್ವಿತೀಯ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here