ಪುತ್ತೂರು: ಕುಂಬ್ರಜನನ ಧರ್ಮದೈವಗಳ ಸೇವಾ ಸಮಿತಿ ಇದರ ಆಶ್ರಯದಲ್ಲಿ ಕುಂಬ್ರ ತರವಾಡು ಮನೆಯಲ್ಲಿ ಕುಂಬ್ರಜನನದ ಶ್ರೀ ನಾಗದೇವರು, ಶ್ರೀ ರಕ್ತೇಶ್ವರಿ ದೈವದ ಪುನಃ ಪ್ರತಿಷ್ಠೆ, ಹರಿಸೇವೆ, ಧರ್ಮದೈವಗಳ ನೇಮೋತ್ಸವವು ಮಾ. 13 ಮತ್ತು 14 ರಂದು ಕುಂಬ್ರಜನನದ ತರವಾಡು ಮನೆಯಲ್ಲಿ ನಡೆಯಲಿದೆ.
ಮಾ. 13 ರಂದು ಬೆಳಗ್ಗೆ ಮಹಾಗಣಪತಿ ಹೋಮ, ಕಲಶ ಪೂಜೆ, ಆಶ್ಲೇಷ ಬಲಿ ನಡೆದು 10-45ರ ವೃಷಭ ಲಗ್ನದಲ್ಲಿ ನಾಗ ಶಿಲಾ ಪ್ರತಿಷ್ಠೆ, ಶ್ರೀ ರಕೇಶ್ವರಿ ಪ್ರತಿಷ್ಠೆ ಕಲಶಾಭಿಷೇಕ, ಶ್ರೀಹರಿ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ ನಡೆದು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಶ್ರೀ ದೈವಗಳಿಗೆ ಎಣ್ಣೆ ಕೊಡುವ ಕಾರ್ಯಕ್ರಮ ನಡೆದು ರಾತ್ರಿ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಬಳಿಕ ಶ್ರೀ ಧರ್ಮದೈವ ಪಿಲಿಭೂತ, ಶ್ರೀ ವರ್ಣರ ಪಂಜುರ್ಲಿ, ಶ್ರೀ ಜ್ಯಾವತೆ ಪರಿವಾರ ದೈವಗಳ ನೇಮೋತ್ಸವ, ಶ್ರೀ ರಾಜನ್ ದೈವ ಮಲರಾಯಿ ನೇಮೋತ್ಸವ ನಡೆಯಲಿದೆ.
ಮಾ. 14 ರಂದು ಬೆಳಗ್ಗೆ ಶ್ರೀ ಜೂಮಾದಿ ಪರಿವಾರ ದೈವಗಳ ನೇಮೋತ್ಸವ ನಡೆದು ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕಲ್ಲುರ್ಟಿ ದೈವದ ನೇಮೋತ್ಸವ ನಡೆದು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಬಳಿಕ ಚಾವಡಿ ಶುದ್ಧಿ, ತಂಬಿಲ ಸೇವೆ ನಡೆಯಲಿದೆ. ಈ ಎಲ್ಲಾ ಕಾರ್ಯದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವದ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ, ಶ್ರೀ ದೈವ-ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕುಂಬ್ರ ಜನನ ಧರ್ಮದೈವಗಳ ಸೇವಾ ಸಮಿತಿಯ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಯಜಮಾನ ಕುಂಬ್ರ ನಡುಮೊಗರುಗುತ್ತು ವಿಠಲ ಶೆಟ್ಟಿ ಮತ್ತು ಕುಟುಂಬಸ್ಥರು ಹಾಗೂ ಮಠಂತಬೆಟ್ಟು ಕೇದಗೆ ಸಂಜೀವ ಶೆಟ್ಟಿ ಮತ್ತು ಬಂಧುಗಳ ಪ್ರಕಟಣೆ ತಿಳಿಸಿದೆ.
ಮಾ.13 ಪ್ರತಿಷ್ಠೆ,ಹರಿಸೇವೆ
ಮಾ.13 ರಂದು ಬೆಳಿಗ್ಗೆ 10.45ರ ವೃಷಭ ಲಗ್ನದಲ್ಲಿ ನಾಗ ಶಿಲಾ ಪ್ರತಿಷ್ಠೆ, ಶ್ರೀ ರಕ್ತೇಶ್ವರಿ ದೈವದ ಪ್ರತಿಷ್ಠೆ ಕಲಶಾಭಿಷೇಕ, ಶ್ರೀ ಹರಿ ಸೇವೆ ನಡೆದು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಅನ್ನಸಂತರ್ಪಣೆ ಬಳಿಕ ಶ್ರೀ ದೈವಗಳ ನೇಮೋತ್ಸವ ಆರಂಭಗೊಳ್ಳಲಿದೆ.