ಪುತ್ತೂರು ತಾ| ಬಂಟರ ಸಂಘ, ಮಹಿಳಾ ಬಂಟರ ಸಂಘದ ಆಶ್ರಯದಲ್ಲಿ ಮಹಿಳಾ ದಿನಾಚರಣೆ-ಸಾಧಕರಿಗೆ ಸನ್ಮಾನ

0

ಬಂಟರು ಸಮಾಜದಲ್ಲಿ ಪ್ರಗತಿ ಸಾಧಿಸಬೇಕು- ಚಂದ್ರಹಾಸ್ ಶೆಟ್ಟಿ
ಸಾದನಶೀಲರಾಗಬೇಕು- ಹೇಮನಾಥ ಶೆಟ್ಟಿ
ಸಮಾಜ ಭಾಂದವರಿಗೆ ಸಹಕಾರ- ಶಶಿಕುಮಾರ್ ರೈ


ಪುತ್ತೂರು: ಬಂಟರ ಸಂಘ ಪುತ್ತೂರು ಮತ್ತು ಮಹಿಳಾ ಬಂಟರ ಸಂಘದ ಜಂಟಿ ಆಶ್ರಯದಲ್ಲಿ ಮಾ. 12 ರಂದು ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಮಹಿಳಾ ಬಂಟ ಸಂಭ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್‍ಯಕ್ರಮ ಜರಗಿತು.

ಚಿತ್ರ- ನವೀನ್ ರೈ ಪಂಜಳ


ಸಾಧಕರಿಗೆ ಸನ್ಮಾನ ಕಾರ್‍ಯಕ್ರಮವನ್ನು ಉದ್ಘಾಟನೆಗೈದ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿಯವರು ಮಾತನಾಡಿ ಬಂಟರು ಚಲನಚಿತ್ರ, ಉದ್ಯಮ, ರಾಜಕೀಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಜನಪ್ರಿಯತೆಯನ್ನು ಸಾಧಿಸುವ ಮೂಲಕ, ಸಮಾಜದಲ್ಲಿ ಗೌರವವನ್ನು ಉಳಿಸಿಕೊಂಡಿದ್ದಾರೆ. ಕೇವಲ 15 ಲಕ್ಷ ಮಂದಿ ಬಂಟರು ವಾಸಿಸುವ ಉಡುಪಿ ಮತ್ತು ದ.ಕ, ಜಿಲ್ಲೆಯಲ್ಲಿ 7 ಮಂದಿ ಬಂಟರು ಶಾಸಕರಾಗಿದ್ದು, ಒಬ್ಬರು ಸಂಸದರಾಗಿರುವುದು ಸಮಾಜಕ್ಕೆ ಹೆಮ್ಮೆ ತಂದಿದೆ. ಅದರಲ್ಲೂ ಪುತ್ತೂರಿನಲ್ಲಿ ಬಂಟ ಸಮಾಜದ ಇಬ್ಬರು ಮಹಿಳೆಯರು ಶಾಸಕರಾಗಿರುವುದು ಬಂಟ ಸಮಾಜ ಹೆಮ್ಮೆ ಪಡುವ ವಿಷಯವಾಗಿದ್ದು, ಬಂಟರು ತಮ್ಮ ಸಮುದಾಯದ ಕೀರ್ತಿಯನ್ನು ಬಾನೆತ್ತರಕ್ಕೆ ಪಸರಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.


ಸನ್ಮಾನ


ಚಂದ್ರಹಾಸ್ ಶೆಟ್ಟಿಯವರನ್ನು ತಾಲೂಕು ಬಂಟರ ಸಂಘದ ವತಿಯಿಂದ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಾಧಕರಿಗೆ ಸನ್ಮಾನ

ಕರ್ನಾಟಕ ಸರಕಾರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ, ರಾಜ್ಯ ಸರಕಾರದ ಕ್ಯಾಬಿನೆಟ್ ಸ್ಥಾನಮಾನವನ್ನು ಹೊಂದಿರುವ ಚನಿಲ ತಿಮ್ಮಪ್ಪ ಶೆಟ್ಟಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ದಂಬೆಕಾನ ಸದಾಶಿವ ರೈ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿ ಶೆಟ್ಟಿ ಮೂಡಂಬೈಲು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊಸಮನೆ ಗಂಗಾಧರ ಶೆಟ್ಟಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯರಾಮ ರೈ ಮಿತ್ರಂಪಾಡಿರವರ ಅನುಪಸ್ಥಿತಿಯಲ್ಲಿ ಅವರ ಸಹೋದರಿ ಜಯಂತಿ ಎಂ.ರೈ, ಸಹೋದರರಾದ ಎಂ.ಆರ್.ಜಯಕುಮಾರ್ ರೈ, ಜಯನಂದ ರೈ ಮಿತ್ರಂಪಾಡಿರವರುಗಳು ಸನ್ಮಾನವನ್ನು ಸ್ವೀಕರಿಸಿದರು.


ಸಾದನಶೀಲರಾಗಬೇಕು- ಹೇಮನಾಥ ಶೆಟ್ಟಿ
ಸನ್ಮಾನವನ್ನು ನಡೆಸಿಕೊಟ್ಟ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ಮಾತನಾಡಿ ನಾಯಕತ್ವಕ್ಕೆ ಬಂಟ ಸಮಾಜ ಸದಾ ಮುಂದೆ ಇದ್ದು, ಬಂಟ ಸಮಾಜದ ಪ್ರತಿಯೊಬ್ಬರು ಸಾಧನಾಶೀಲರಾಗಬೇಕು, ಜೊತೆಗೆ ಸಮಾಜದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದರು

ರಾಮಕೃಷ್ಣ ಶಾಲೆಯಿಂದ ಚನಿಲ, ದಂಬೆಕಾನರವರಿಗೆ ಸನ್ಮಾನ

ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ 10 ಲಕ್ಷ ರೂ ಅನುದಾನವನ್ನು ನೀಡಿದ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಹಾಗೂ ವಿಜ್ಞಾನ ಲ್ಯಾಬ್ ಕೊಡುಗೆ ನೀಡಿದ ದಂಬೆಕಾನ ಸದಾಶಿವ ರೈಯವರನ್ನು ಸಂಸ್ಥೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರ ನೇತ್ರತ್ವದಲ್ಲಿ ಸನ್ಮಾನಿಸಲಾಯಿತು.

ದಂಬೆಕಾನರವರಿಗೆ ರೋಯಲ್ ಸಂಸ್ಥೆಯಿಂದ ಸನ್ಮಾನ

ರೋಹಲ್ ಸೌಹಾರ್ದ ಸಹಕಾರಿ ಸಂಸ್ಥೆಯ ವತಿಯಿಂದ ದಂಬೆಕಾನ ಸದಾಶಿವ ರೈಯವರನ್ನು ಸಂಸ್ಥೆಯ ಉಪಾಧ್ಯಕ್ಷ ಎ.ಕೆ.ಜಯರಾಮ ರೈರವರ ನೇತ್ರತ್ವದಲ್ಲಿ ಸನ್ಮಾನಿಸಲಾಯಿತು.


ಸಮಾಜ ಭಾಂದವರಿಗೆ ಸಹಕಾರ- ಶಶಿಕುಮಾರ್ ರೈ
ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಸ್ವಾಗತಿಸಿ, ಮಾತನಾಡಿ ತಾಲೂಕು ಬಂಟರ ಸಂಘವು ಹಿಂದುಳಿದ ಸಮಾಜ ಭಾಂದವರಿಗೆ ಹಲವು ರೀತಿಯ ಸಹಕಾರವನ್ನು ನೀಡುತ್ತಿದ್ದು, ಕರಿಮಣಿ ಸರ, ಮನೆ ನಿರ್ಮಾಣಕ್ಕೆ ಸಹಾಯಹಸ್ತವನ್ನು ನೀಡುತ್ತಿದೆ. ಬಂಟರ ಸಂಘದ ಕಾರ್‍ಯಕ್ರಮಕ್ಕೆ ಸಮಾಜ ಭಾಂದವರ ಪೂರ್ಣ ಸಹಕಾರ ಬೇಕು ಎಂದು ಹೇಳಿ, ಬಂಟರ ಏಳಿಗೆ ಕಾರಣಕರ್ತರಾದ ಸುಂದರರಾಮ್ ಶೆಟ್ಟಿಯವರು ಬಂಟರಿಗೆ ವಿಜಯ ಬ್ಯಾಂಕ್‌ನಲ್ಲಿ ಉದ್ಯೋಗವನ್ನು ನೀಡಿ, ಅಮೂಲಕ ಸಮಾಜದ ಏಳಿಗೆಗಾಗಿ ಶ್ರಮಿಸಿದ್ದಾರೆ ಎಂದರು.


ಹೆಮ್ಮೆಯ ವಿಚಾರ- ದಯಾನಂದ ರೈ
ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಂಚಾಲಕ ದಯಾನಂದ ರೈ ಮನವಳಿಕೆಗುತ್ತುರವರು ಮಾತನಾಡಿ ಬಂಟ ಸಮಾಜದ ಕೀರ್ತಿ ಹತ್ತೂರಲ್ಲಿ ಪಸರಿಸಿದೆ.ಇದು ಹೆಮ್ಮೆ ತರುವ ವಿಚಾರ ವಾಗಿದೆ ಎಂದರು.


ಸಮಾಜಕ್ಕೆ ಗೌರವ- ಬೂಡಿಯಾರ್
ತಾಲೂಕು ಬಂಟರ ಸಂಘದ ನಿಕಟಪೂರ್ವಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ ಬಂಟ ಸಮಾಜದ ಸಾಧಕರ ಸನ್ಮಾನದಿಂದ ಸಮಾಜಕ್ಕೆ ಗೌರವ ಬರುತ್ತದೆ ಎಂದರು.


ಜನರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಕೆಲಸ- ಚನಿಲ
ಕರ್ನಾಟಕ ಸರಕಾರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿರವರು ಮಾತನಾಡಿ ನನಗೆ ಸಿಕ್ಕಿರುವ ಹುದ್ದೆಯಿಂದ ಜನರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ನಾನು ಕೆಲಸವನ್ನು ಮಾಡುತ್ತೇನೆ ಎಂದರು.


ಪ್ರಶಸ್ತಿಗೆ ಅರ್ಜಿ ಹಾಕಿಲ್ಲ- ದಂಬೆಕಾನ
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ದಂಬೆಕಾನ ಸದಾಶಿವ ರೈಯವರು ಮಾತನಾಡಿ ನಾನು ಪ್ರಶಸ್ತಿಗೆ ಯಾವುದೇ ಅರ್ಜಿಯನ್ನು ಹಾಕಿಲ್ಲ, ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ. ನಾನು ಸಂತೃಪ್ತಿಯ ಜೀವನ ಹೊಂದಿದ್ದೇನೆ ಎಂದರು.


ನೂತನ ಬಂಟರ ಭವನಕ್ಕೆ ನನ್ನ ಸಹಕಾರ ಇದೆ- ರವಿ ಶೆಟ್ಟಿ
ರವಿಶೆಟ್ಟಿ ಮೂಡಂಬೈಲುರವರು ಮಾತನಾಡಿ ಶಶಿಕುಮಾರ್ ರೈ ಬಾಲ್ಯೊಟ್ಟುರವರ ಕನಸಾಗಿರುವ ಪುತ್ತೂರು ಬಂಟರ ಸಂಘದ ನೂತನ ಬಂಟರ ಭವನ ನಿರ್ಮಾಣಕ್ಕೆ ತಾನು ಸಹಕಾರವನ್ನು ನೀಡುತ್ತೇನೆ, ಜೊತೆಗೆ ಬಂಟ ಸಮಾಜ ಭಾಂದವರು ಕೈಜೋಡಿಸಬೇಕು ಎಂದರು.


ಸನ್ಮಾನ ಖುಷಿ ನೀಡಿದೆ- ಗಂಗಾಧರ್ ರೈ
ಗಂಗಾಧರ್ ಶೆಟ್ಟಿ ಹೊಸಮನೆಯವರು ಮಾತನಾಡಿ ಬಂಟರ ಸಂಘದಿಂದ ಕೊಡಲ್ಪಟ್ಟ ಸನ್ಮಾನ ಖುಷಿ ನೀಡಿದೆ ಎಂದರು.


ಜಗಜೀವನ್‌ದಾಸ್ ರೈ ಚಿಲ್ಮೆತ್ತಾರು, ಎ.ಕೆ.ಜಯರಾಮ ರೈ ಕೆಯ್ಯೂರು, ಕೃಷ್ಣಪ್ರಸಾದ್ ಆಳ್ವ, ಚಂದ್ರಹಾಸ್ ಶೆಟ್ಟಿ ಎನ್, ಶಿವರಾಮ ಆಳ್ವ ಬಳ್ಳಮಜಲುಗುತ್ತು, ರಾಧಾಕೃಷ್ಣ ಆಳ್ವ ಸಾಜ, ವಸಂತಕುಮಾರ್ ರೈ ದುಗ್ಗಳ, ಜಯಪ್ರಕಾಶ್ ರೈ ನೂಜಿಬೈಲು ಅತಿಥಿಗಳನ್ನು ಗೌರವಿಸಿದರು.
ವೇದಿಕೆಯಲ್ಲಿ ತಾಲೂಕು ಬಂಟರ ಸಂಘದ ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಉಪಸ್ಥಿತರಿದ್ದರು.
ತಾಲೂಕು ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ರಮೇಶ್ ರೈ ಡಿಂಬ್ರಿ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್‍ಯಕ್ರಮ ನಿರೂಪಿಸಿದರು.


ಮಹಿಳಾ ದಿನಾಚರಣೆ- ಮಹಿಳಾ ಬಂಟ ಸಂಭ್ರಮ- ಉದ್ಘಾಟನೆ


ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರಬೇಕು- ಲತಾ ಶೆಟ್ಟಿ
ಕಾರ್‍ಯಕ್ರಮದ ಉದ್ಘಾಟನೆಗೈದ ಪುತ್ತೂರು ಪದ್ಮ ಸೋಲಾರ್‌ನ ಲತಾ ಪಿ.ಶೆಟ್ಟಿ ಆಧುನಿಕ ಸಮಾಜದಲ್ಲಿ ಬಂಟ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದರು.


ಶಿಕ್ಷಣ ನೀಡುವಲ್ಲಿ ಮುಂದೆ ಬರಬೇಕು- ಮಲ್ಲಿಕಾ
ಉಪನ್ಯಾಸಕಿ ಮಲ್ಲಿಕಾ ಅಜಿತ್ ಶೆಟ್ಟಿ ಸಿದ್ಧಕಟ್ಟೆಯವರು ಮಾತನಾಡಿ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವಲ್ಲಿ ಪೋಷಕರು ಬಂದ ಬರಬೇಕು ಎಂದರು.ಪೋಷಕರು ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆಯನ್ನು ನಡೆಸಬೇಕು ಎಂದರು.


ಮಹಿಳಾ ಬಂಟರ ಸಂಘದಿಂದ ಸಹಕಾರ- ಸಬಿತಾ ಭಂಡಾರಿ
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿಯವರು ಮಾತನಾಡಿ ಮಹಿಳಾ ಬಂಟರ ಸಂಘದ ಮೂಲಕ ಮನೆ ನಿರ್ಮಾಣ ಮತ್ತಿತರ ಕಾರ್‍ಯಗಳಿಗೆ ಅರ್ಥಿಕ ಸಹಾಯವನ್ನು ನೀಡಲಾಗಿದೆ. ಮುಂದೆಯೂ ಉತ್ತಮವಾದ ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದರು.


ಕರ್ನಾಟಕ ರಾಜ್ಯ ಪುರಸ್ಕೃತ ಕ್ರೀಡಾಪಟು ಡಾ| ಆಶಾ ಶಂಕರ್ ಭಂಡಾರಿ, ಬಿ.ವೆಲ್ ಫಾರ್ಮ್ ಸಂಸ್ಥೆಯ ಸಿಐಓ ಅನಿಲ ದೀಪಕ್ ಶೆಟ್ಟಿ ಬನ್ನೂರು ಹಾಗೂ ಬನ್ನೂರು ಪ್ರಾ.ಕೃ.ಪತ್ತಿನ.ಸಹಕಾರ ಸಂಘದ ಸಿಇಓ ರಾಧಾ ಬಿ.ರೈಯವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಸಂದಭೋಚಿತವಾಗಿ ಮಾತನಾಡಿದರು.
ಮಾಲಿನಿ ಮುತ್ತು ಶೆಟ್ಟಿರವರಿಂದ ವಿದ್ಯಾರ್ಥಿಗಳ ಕಲಿಕೆಗೆ ಸಹಾಯಧನ ನೀಡಲಾಯಿತು.


ಮಹಿಳಾ ಬಂಟರ ಸಂಘದ ಗೌರವಾಧ್ಯಕ್ಷೆ ಮಲ್ಲಿಕಾ ಪ್ರಸಾದ್, ಮಾಜಿ ಉಪಾಧ್ಯಕ್ಷ ರಮಾಕಾಂತಿ ಎ.ಕೆ.ರೈ, ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಬಂಟರ ಸಂಘದ ಕೋಶಾಧಿಕಾರಿ ವಾಣಿ ಎಸ್.ಶೆಟ್ಟಿ ವಂದಿಸಿದರು. ಪ್ರಧಾನಕಾರ್‍ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿದರು.

ಉಪಧ್ಯಾಕ್ಷರಾದ ಗೀತಾ ಮೋಹನ್‌ ರೈ. ಜಯಂತಿ ಎಮ್‌ ರೈ ಮತ್ತು ಪದಾಧಿಕಾರಿಗಳು ಸಹಕರಿಸಿದರು. ಸಮೃದ್ಧಿ ಜೆ ಶೆಟ್ಟಿ ಸ್ವಾಗತ ನೃತ್ಯ ಗೈದು, ಪೂರ್ಣಿಮಾ ಶೆಟ್ಟಿ ಪ್ರಾರ್ಥಿಸಿ, ಮಹಿಳಾ ಬಂಟರ ಸದಸ್ಯರಿಂದ ಹಾಡು ಹಾಗೂ ಪೂಜಾ ನೃತ್ಯ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.

ಬಂಟ ಸಮಾಜದ ಅಭಿವೃದ್ಧಿಗಾಗಿ ಕಾರ್‍ಯಕ್ರಮ
ಮಹಿಳಾ ಬಂಟರ ಸಂಭ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್‍ಯಕ್ರಮ ಬಂಟಸಮಾಜದ ಎಲ್ಲರನ್ನು ಒಗ್ಗೂಡಿಸುವ ಕಾರ್‍ಯಕ್ರಮ ಇದಾಗಿದ್ದು, ಅಭೂತಪೂರ್ವವಾದ, ಕಾರ್‍ಯಕ್ರಮವಾಗಿತ್ತು ಮುಂದಿನ ದಿನಗಳಲ್ಲಿ ನಡೆಯುವ ಬಂಟರ ಸಂಘದ ನೂತನ ಕಟ್ಟಡ ನಿರ್ಮಾಣ ಕಾರ್‍ಯಕ್ಕೆ ಸಮಾಜ ಭಾಂದವರು ಪೂರ್ಣ ರೀತಿಯಲ್ಲಿ ಸಹಕಾರವನ್ನು ನೀಡಬೇಕು. ಆಗೋಸ್ಟ್ ತಿಂಗಳಲ್ಲಿ ನಡೆಯುವ ಆಟಿದ ಕೂಟದ ಕಾರ್‍ಯಕ್ರಮದಲ್ಲಿ ಮತ್ತಷ್ಟು ಬಂಟ ಸಮಾಜದ ಸಾಧಕರನ್ನು ಗೌರವಿಸುವ ಕಾರ್‍ಯಕ್ರಮ ನಡೆಯಲಿದೆ
ಶಶಿಕುಮಾರ್ ರೈ ಬಾಲ್ಯೊಟ್ಟು- ಅಧ್ಯಕ್ಷರು


ಬಂಟರ ಸಂಘ ಪುತ್ತೂರು ತಾಲೂಕು ಯಶಸ್ವಿ ಕಾರ್‍ಯಕ್ರಮ
ಬಂಟರ ಮತ್ತು ಮಹಿಳಾ ಬಂಟರ ಸಂಘದ ಸಹಕಾರದಿಂದ ನಡೆದ ಕಾರ್‍ಯಕ್ರಮ ಯಶಸ್ವಿಯಾಗಿದೆ. ಮುಂದೆಯೂ ಎಲ್ಲರ ಸಹಕಾರ ಅಗತ್ಯ
ಸಬಿತಾ ಭಂಡಾರಿ
ಅಧ್ಯಕ್ಷರು- ಮಹಿಳಾ ಬಂಟರ ಸಂಘ ಪುತ್ತೂರು ತಾಲೂಕು

LEAVE A REPLY

Please enter your comment!
Please enter your name here