ಐಸಿಆರ್ ಡಿಸಿಆರ್ ಕೇಂದ್ರದಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ‌ ದಿವಸ ಆಚರಣೆ

0

ಪುತ್ತೂರು: ಪುತ್ತೂರಿನ ಮೊಟ್ಟೆತ್ತಡ್ಕದಲ್ಲಿರುವ ಐಸಿಆರ್-ಡಿಸಿಆರ್ ಕೇಂದ್ರದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿವಸವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿ ಅನ್ನಪೂರ್ಣಾ ಶರ್ಮರವರು “ಉದ್ಯಮ ವಲಯದಲ್ಲಿ ಲಿಂಗ ಸಮಾನತೆ” ಎಂಬ ವಿಷಯದ ಕುರಿತಾಗಿ ಮಾತನಾಡಿದರು. ಅನ್ನಪೂರ್ಣಾರವರು ಪುತ್ತೂರಿನ ಆರ್ಯಾಪುವಿನಲ್ಲಿ ’ಪೂರ್ಣಾ ಎಂಟರ್ ಪೈಸಸ್’ ಹೆಸರಿನ ಉದ್ಯಮವನ್ನು ನಡೆಸುತ್ತಿದ್ದಾರೆ. ಯಾವುದೇ ವೃತ್ತಿ, ಉದ್ಯಮ ಅಥವ ವ್ಯವಹಾರಗಳಲ್ಲಾಗಲೀ ಅದರ ಯಶಸ್ಸಿಗೆ ಪರಸ್ಪರ ಅರ್ಥೈಸುವಿಕೆಯ ಅಗತ್ಯತೆ ಬಹಳ ಪ್ರಮುಖವಾದದ್ದು ಎಂದರು. ಮಹಿಳೆಯರು ಸಹಜ ಸಾಮರ್ಥ್ಯ ಉಳ್ಳವರಾಗಿ ಯಾರಿಗೂ ಮತ್ತು ಯಾವುದಕ್ಕೂ ಕಡಿಮೆಯಿರದಂತೆ ಎಲ್ಲಾ ತರಹದ ಕಾರ್ಯವನ್ನು ನಿಭಾಯಿಸಬಲ್ಲವರಾಗಿದ್ದಾರೆಂದು ಅವರ ಅನುಭವ ಮತ್ತು ಸಾಂದರ್ಭಿಕ ಉದಾಹರಣೆಗಳ ಮೂಲಕ ಸಭೆಗೆ ಮನದಟ್ಟು ಮಾಡಿದರು.  

ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಕೆ. ವನಿತಾರವರು ’ವಿಮೆನ್ ವರ್ಕ್ ಫೋರ್ಸ್ ಇನ್ ಇಂಡಿಯಾ – ಚಾಲೆಂಜಸ್ & ಇನಿಷಿಯೇಟಿವ್ಸ್’ ಎಂಬುದರ ಕುರಿತಂತೆ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಡಾ. ಜೆ ದಿನಕರ ಅಡಿಗರವರು ಅಂತರ ರಾಷ್ಟ್ರೀಯ ಮಹಿಳಾ ದಿವಸದ ಪ್ರಯುಕ್ತ ಎಲ್ಲರಿಗೂ ಶುಭಾಶಯವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಿಗಾಗಿ ರಸಪ್ರಶ್ನೆ ಮತ್ತು ಹಾಡುಗಾರಿಕೆ ಕಾರ್ಯಕ್ರಮ ನಡೆಯಿತು. ಸುಮಾರು 80 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿಜ್ಞಾನಿ ಡಾ. ಬಬ್ಲಿ ಮೋಗ್ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಸಂಸ್ಥೆಯ ವಿಜ್ಞಾನಿ ಡಾ. ವೀಣಾ ಜಿ. ಎಲ್ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು. 

LEAVE A REPLY

Please enter your comment!
Please enter your name here