ನಾಳೆ (ಮಾ.14) ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಬೆಂಗಳೂರು Skybird Aviation ನಿಂದ ಪದವಿ, ಡಿಪ್ಲೊಮಾ ಕೋರ್ಸ್‌ಗಳ ಉಚಿತ ಮಾಹಿತಿ ಕಾರ್ಯಾಗಾರ

0

ಪುತ್ತೂರು: ಮುಖ್ಯರಸ್ತೆಯಲ್ಲಿರುವ ಧರ್ಮಸ್ಥಳ ಕಟ್ಟಡದಲ್ಲಿ ಕಳೆದ ಹದಿನೈದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿಸೆಂಟರ್‌ನಲ್ಲಿ ಮಾ.14ರಂದು ಬೆಳಗ್ಗೆ 11:೦೦ ಗಂಟೆಗೆ ಬೆಂಗಳೂರಿನ ಪ್ರತಿಷ್ಠಿತ ಪದವಿ ಕಾಲೇಜು Skybird Aviation ಇವರಿಂದ ಪಿಯುಸಿ ವಿದ್ಯಾರ್ಥಿಗಳಿಗೆ ವಿಮಾನಯಾನದಲ್ಲಿ ಡಿಪ್ಲೋಮಾ, ಮೂರು ವರ್ಷದ ಪದವಿ, ಎರಡು ವರ್ಷಗಳ ಸ್ನಾತಕೋತ್ತರ ಪದವಿಗಳ ಬಗ್ಗೆ ವಿವರವಾದ ಮಾಹಿತಿಯನ್ನುನೀಡಲಿದ್ದಾರೆ. BBA in Aviation Management with honor’s multi-disciplinary education with multi-entry multi-exit as per NEP, International Diploma in Airline and Airport operation, Cabin Crew/Air Hostess Training, MBA in Airline and Airport Management ಅಲ್ಲದೆ 1ವರ್ಷ, 6 ಮತ್ತು 8 ತಿಂಗಳ International Diploma ಮತ್ತು IATA Foundation Course ಮುಂತಾದ ಕೋರ್ಸುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಅತಿಹೆಚ್ಚು ಬೇಡಿಕೆ ಹಾಗೂ ಉದ್ಯೋಗಾವಕಾಶಗಳನ್ನು ಪ್ರಸ್ತುತ ಹೊಂದಿರುತ್ತದೆ. ಇವೆಲ್ಲ ತರಗತಿಗಳು ಕೇಂದ್ರ ಸರ್ಕಾರದ NEP ಅಧಿಸೂಚನೆಯಂತೆ ನಡೆಸಲಾಗುತ್ತಿದೆ ಎಂದು ಪ್ರಗತಿಯ ಪ್ರಕಟಣೆ ತಿಳಿಸಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ಇರತಕ್ಕಂತಹ ವಿದ್ಯಾರ್ಥಿಗಳ ಬದಲಾಗಿ ಅವರ ಪೋಷಕರು ಭಾಗವಹಿಸಬಹುದೆಂದು ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಹೇಮಲತಾ ಗೋಕುಲ್‌ನಾಥ್‌ರವರು ತಿಳಿಸಿರುತ್ತಾರೆ.

ಪಿಯುಸಿವಿದ್ಯಾರ್ಥಿಗಳು ಮತ್ತು ಪೋಷಕರು ಈ ಕಾರ್ಯಗಾರದ ಸದುಪಯೋಗವನ್ನು ಪಡೆಯಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ. ವಿಮಾನಯಾನದಲ್ಲಿ ಪದವಿ, ಸ್ನಾತಕೋತ್ತರ ಪದವಿಇದರ ಬಗ್ಗೆ 2015 ನೇ ಇಸವಿಯಲಿ ಮುಂಬೈ Aptech Aviation Academy ಯವರಿಂದ ರಾಜ್ಯದಲ್ಲಿ ಪ್ರಗತಿ ಸ್ಟಡಿಸೆಂಟರ್ ಪ್ರಥಮ ಎಂದು ತಿಳಿಸಲು ಹೆಮ್ಮೆಪಡುತ್ತೇನೆ.
ಗೋಕುಲ್‌ನಾಥ್ ಪಿ.ವಿ, ಸಂಸ್ಥೆಯ ಸ್ಥಾಪಕಾಧ್ಯಕ್ಷ

LEAVE A REPLY

Please enter your comment!
Please enter your name here