ಯಂಗ್ಬ್ರಿಗೇಡ್ ಬನ್ನೂರು ವಿನ್ನರ್, ಒಳಮೊಗ್ರು ರನ್ನರ್
ಪುತ್ತೂರು: ಪುತ್ತೂರು ಯಂಗ್ಬ್ರಿಗೇಡ್ ಸೇವಾದಳದ ಆಶ್ರಯದಲ್ಲಿ ಪುತ್ತೂರು ಕಿಲ್ಲೆ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ ರಾಜೀವಗಾಂಧಿ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ಯಂಗ್ಬ್ರಿಗೇಡ್ ಬನ್ನೂರು ತಂಡ ಪ್ರಥಮ ಸ್ಥಾನ ಪಡೆದು ರೂ.50000 ನಗದು ಮತ್ತು ಟ್ರೋಫಿ ಹಾಗೂ ಒಳಮೊಗ್ರು ಯಂಗ್ಬ್ರಿಗೇಡ್ ತಂಡ ದ್ವಿತೀಯ ಬಹುಮಾನ ಪಡೆದು ರೂ.30000 ನಗದು ಹಾಗೂ ಟ್ರೋಫಿ ಪಡೆದುಕೊಂಡಿದೆ.
ಉತ್ತಮ ಬೌಲರ್ ಪ್ರಶಸ್ತಿಯನ್ನು ಬನ್ನೂರು ಯಂಗ್ಬ್ರಿಗೇಡ್ ತಂಡದ ರವೂಫ್, ಉತ್ತಮ ಬ್ಯಾಟ್ಸ್ಮೆನ್ ಪ್ರಶಸ್ತಿಯನ್ನು ಒಳಮೊಗ್ರು ಯಂಗ್ಬ್ರಿಗೇಡ್ ತಂಡದ ಅವಿನಾಶ್, ಮ್ಯಾನ್ ಆಫ್ ದ ಸೀರಿಸ್ ಪ್ರಶಸ್ತಿಯನ್ನು ಒಳಮೊಗ್ರು ಯಂಗ್ಬ್ರಿಗೇಡ್ ತಂಡದ ಮುಕ್ತಾರ್ ಪಡೆದುಕೊಂಡರು. ಯಂಗ್ಬ್ರಿಗೇಡ್ ಗ್ರಾಮ ಗ್ರಾಮಗಳ ಲೀಗ್ ಮಾದರಿಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು 32 ತಂಡಗಳು ಬಾಗವಹಿಸಿದ್ದವು.
ಸಮಾರೋಪ:
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಯಂಗ್ಬ್ರಿಗೇಡ್ ರಾಜ್ಯಾಧ್ಯಕ್ಷ ಜುನೈದ್ ಪಿ.ಕೆ., ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಕೆಪಿಸಿಸಿ ಸಂಯೋಜಕ ಎಂ.ಎಸ್.ಮಹಮ್ಮದ್, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಉದ್ಯಮಿ ಮಾಧವ ಗೌಡ ಕಾಮಧೇನು, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್.ಎ ಶಕೂರ್ ಹಾಜಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧಕ್ಷ ಮೌರೀಸ್ ಮಸ್ಕರೇನಸ್ ವಿಜೇತರಿಗೆ ಬಹುಮಾನ ವಿತರಿಸಿದರು.
ಸನ್ಮಾನ:
ಬೆಳ್ಳಾರೆ ಕಾಮಧೇನು ಸಂಸ್ಥೆಗಳ ಮುಖ್ಯಸ್ಥ ಮಾಧವ ಗೌಡ, ಹಿರಿಯ ಕಾಂಗ್ರೆಸಿಗ ಪಸನ್ನ ಪೌಲ್ ಸಾಮೆತ್ತಡ್ಕರವರನ್ನು ಸನ್ಮಾನಿಸಲಾಯಿತು. ಕಾಂಗ್ರೆಸ್ ನಾಯಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮತ್ತು ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮದ ಮಧ್ಯೆ ಆಗಮಿಸಿ ಶುಭಹಾರೈಸಿದರು.
ಯಂಗ್ಬ್ರಿಗೇಡ್ ಪದಾಧಿಕಾರಿ ಹಾಗೂ ನಗರಸಭಾ ಸದಸ್ಯ ರಿಯಾಝ್ ಪರ್ಲಡ್ಕ, ವಿಟ್ಲ ಉಪ್ಪಿನಂಗಡಿ ಯಂಗ್ಬ್ರಿಗೇಡ್ ಸೇವಾದಳದ ಅಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ, ಶರೀಫ್ ಬಲ್ನಾಡು, ಶರತ್ ಕೇಪುಳು, ಸನತ್ ರೈ ಒಳತ್ತಡ್ಕ, ಮೋನು ಬಪ್ಪಳಿಗೆ, ಸಿನಾನ್ ಪರ್ಲಡ್ಕ, ಪ್ರಕಾಶ್ ಪುರುಷರಕಟ್ಟೆ, ಜಮಾಲ್ ಪುರುಷರಕಟ್ಟೆ, ರಾಘವೇಂದ್ರ ಪುರುಷರಕಟ್ಟೆ, ರಾಜೇಶ್ ಸಾಲ್ಮರ, ಅರ್ಷಿನ್, ವಿಕ್ಟರ್ ಪಾಯಸ್, ಎಡ್ವರ್ಡ್ ಪುತ್ತೂರು, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಶಫೀಕ್ ಅಡ್ಕ, ಬಾತಿಷಾ ಬಲ್ನಾಡು, ಶ್ರೀಕಾಂತ್ ಗೌಡ, ವಿಶಾಂಕ್ ಭಟ್, ಜುಬೈರ್ ಪುರುಷರಕಟ್ಟೆ, ಸಿದ್ಧೀಕ್ ಸುಲ್ತಾನ್, ರಜಾಕ್ ಬಪ್ಪಳಿಗೆ, ಶಮೀರ್ ಚಮ್ಮಿ ಪುರುಷರಕಟ್ಟೆ, ಶಿಯಾಬ್ ಪಿ.ಕೆ., ಆಶಿಫ್ ಮಣಿಕ್ಕರ, ಅಪ್ಲಾನ್ ಫೆರ್ನಾಂಡೀಸ್, ಹಕೀಮ್ ಕರುವೇಲು, ಮೊದಲಾದವರು ಸಹಕರಿಸಿದರು. ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮ ಯಶಸ್ವಿ-ರಂಜಿತ್ ಬಂಗೇರ
ಪುತ್ತೂರು ಯಂಗ್ಬ್ರಿಗೇಡ್ ವತಿಯಿಂದ ಕಳೆದ ನಾಲ್ಕು ದಿನಗಳಿಂದ ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆದ ರಾಜೀವಗಾಂಧಿ ಟ್ರೋಫಿ ಕ್ರಿಕೆಟ್ ಪಂದ್ಯಾಟ ಹಾಗೂ ಇದರ ಅಂಗವಾಗಿ ನಡೆದ ಬೃಹತ್ ರಕ್ತದಾನ ಶಿಬಿರ, ರಿಕ್ಷಾ ಚಾಲಕರಿಗೆ ಸನ್ಮಾನ ಸಮಾರಂಭ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಈ ಕಾರ್ಯಕ್ರಮದ ಯಶಸ್ವಿಗೆ ಸೇವಾದಳದ ಪದಾಧಿಕಾರಿಗಳು, ದಾನಿಗಳು, ಅತಿಥಿಗಳು ಸಂಪೂರ್ಣ ಸಹಕಾರ ನೀಡಿದ್ದು ಇವರೆಲ್ಲರಿಗೂ ಕೃತಜ್ಞತೆಗಳು.
ರಂಜಿತ್ ಬಂಗೇರ, ಪುತ್ತೂರು ಯಂಗ್ಬ್ರಿಗೇಡ್ ಸೇವಾದಳದ ಅಧ್ಯಕ್ಷ