1960ರದ್ದು ಬೇಸಿಕ್ ಕಾಯ್ದೆ, 2020 ಹೊಸ ಕಾಯ್ದೆಯ ಅರಿವು ಇರಲಿ ; ಪ್ರಾಣಿ ಕಲ್ಯಾಣ ವಿವಿಧ ಕಾಯಿದೆ, ನಿಯಮಗಳ ಅರಿವು ಕಾರ್ಯಾಗಾರದಲ್ಲಿ ಡಾ. ಗುರುರಾಜ್

0

ಪುತ್ತೂರು: ಮನುಷ್ಯರನ್ನು ಬಿಟ್ಟು ಉಳಿದೆಲ್ಲ ಜೀವಿಗಳು ಪ್ರಾಣಿಗಳಾಗಿದ್ದು, ಅವುಗಳ ಸಂರಕ್ಷಣೆಗೆ ಕಾನೂನು ಕಾಯ್ದೆಗಳಿವೆ. 1960ರಲ್ಲಿ ಬೇಸಿಕ್ ಕಾಯ್ದೆಗಳಿತ್ತು. ಪ್ರಸ್ತುತ 2020ರಲ್ಲಿ ಹೊಸ ಕಾಯ್ದೆಗಳು ಬಂದಿವೆ ಅವುಗಳ ಅರಿವು ಸಾರ್ವಜನಿಕರಲ್ಲಿ ಮೂಡಿಸುವುದು ಅಗತ್ಯವಿದೆ ಎಂದು ಸಂಪನ್ಮೂಲ ವ್ಯಕ್ತಿ ಮೂಡಬಿದ್ರೆಯ ಪಶುವೈದ್ಯಾಧಿಕಾರಿ ಡಾ. ಗುರುರಾಜ್ ಅವರು ಹೇಳಿದರು.

ಜಿ.ಪಂ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮಂಗಳೂರು ಮತ್ತು ಪಶು ಆಸ್ಪತ್ರೆ ಪುತ್ತೂರು ಹಾಗು ಪ್ರಾಣಿ ಕಲ್ಯಾಣ ಮಂಡಳಿಯ ವತಿಯಿಂದ ಪ್ರಾಣಿ ಕಲ್ಯಾಣ ಸಂಬಂಧಿಸಿದಂತೆ ವಿವಿಧ ಕಾಯಿದೆ ಮತ್ತು ನಿಯಮಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪುತ್ತೂರು ತಾ.ಪಂ ಕಿರು ಸಭಾಂಗಣದಲ್ಲಿ ನಡೆದ ಕಾರ್ಯಗಾರ ಅವರು ಮಾಹಿತಿ ನೀಡಿದರು.

ಕಾರ್ಯಗಾರವನ್ನು ತಾ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಅವರು ಉದ್ಘಾಟಿಸಿದರು. ಡಿವೈಎಸ್ಪಿ ಡಾ| ವೀರಯ್ಯ ಹಿರೆಮಠ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮೂಡಬಿದ್ರೆಯ ಪಶುವೈದ್ಯಾಧಿಕಾರಿ ಡಾ. ಗುರುರಾಜ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ತಾಲೂಕಿನ ವಿವಿಧ ಗ್ರಾ.ಪಂ ಪಿಡಿಓಗಳು, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಆರ್‌ಟಿಓ, ನಗರಸಭೆ, ಎಪಿಎಂಸಿ, ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು. 1960ರಲ್ಲಿ ಇರುವ ಕಾಯ್ದೆ ಬೇಸಿಕ್ ಆಗಿತ್ತು. ಇವತ್ತು ಹೊಸ ಹೊಸ ಕಾಯ್ದೆ ಜಾರಿಯಲ್ಲಿದೆ. ಗೋ ಸಾಕಾಟಕ್ಕೆ ಸಂಬಂಧಿಸಿ ಸೆಕ್ಷನ್ 4 ಉಲ್ಲಂಘಿಸಿದವರಿಗೆ 3 ವರ್ಷಕ್ಕೆ ಕಡಿಮೆ ಇಲ್ಲದ 7 ವರ್ಷಗಳ ತನಕ ಶಿಕ್ಷೆ ವಿಧಿಸಬಹುದು. ಒಂದು ಜಾನುವಾರಿಗೆ ರೂ. 50 ಸಾವಿರಕ್ಕಿಂತ ಕಡಿಮೆ ಇಲ್ಲದ ರೂ. 5 ಲಕ್ಷದ ತನಕ ಜುಲ್ಮಾನ ವಿಧಿಸಬಹುದು. ಅಪರಾಧ ಮರುಕಳಿಸಿದರೆ ರೂ. 1 ಲಕ್ಷದಿಂದ ಕಡಿಮೆ ಇರದ ರೂ. 10ಲಕ್ಷದ ತನಕ ದಂಡದ ಜೊತೆಗೆ 7 ವರ್ಷಜೈಲು ಶಿಕ್ಷೆ ವಿಧಿಸಬಹುದು ಎಂದು ಅವರು ಮಾಹಿತಿ ನೀಡಿದರು.

ಶ್ವಾನಗಳ ಮರಿ ಮಾರಾಟ ಮಾಡುವವರು ನೋಂದಾವಣೆ ಅಗತ್ಯ:
ಶ್ವಾನಗಳ ಮರಿಗಳನ್ನು ಮಾರಾಟ ಮಾಡುವವರು ಕರ್ನಾಟಕ ವೆಲ್ ಫೇರ್ ಬೋರ್ಡ್‌ನಲ್ಲಿ ನೋಂದಾವಣೆ ಮಾಡುವುದು ಕಡ್ಡಾಯ. ಇದರ ಕಚೇರಿ ಹೆಬ್ಬಾಳದಲ್ಲಿದೆ. ಅಲ್ಲಿ ರೂ. 5ಸಾವಿರ ಪಾವತಿಸಬೇಕು. ಬಳಿಕ ಅಲ್ಲಿಂದ ನಿಮ್ಮ ಸ್ಥಳಕ್ಕೆ ಪರಿಶೀಲನೆ ನಡೆಸಲಾಗುತ್ತದೆ. ಬಳಿಕ ಶ್ವಾನದ ಇತಿಹಾಸ ಮತ್ತು ಅದಕ್ಕೆ ಮೈಕ್ರೋ ಚಿಪ್ ಅಳವಡಿಸುವುದು ಸಹಿತ ವಿವಿಧ ಮಾಹಿತಿ ನೀಡಿದರು. ಪೆಟ್ ಶಾಪ್ ಮಾಡುವವರು ಕೂಡ ಅಲ್ಲಿ ಅನ್ಯ ಪ್ರಾಣಿಗಳ ಮಾರಾಟಕ್ಕೆ ಪ್ರತೇಕ ನೋಂದಾವಣೆ ಅಗತ್ಯ. ಈ ಎಲ್ಲಾ ಕಾಯಿದೆಗಳ ಅರಿವು ಸಾರ್ವಜನಿಕರು ಅರಿಯಬೇಕೆಂದು ಡಾ.ಗುರುರಾಜ್ ಹೇಳಿದರು.

ಕಾರ್ಯಕ್ರಮದಲ್ಲಿ ತಾ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಅವರು ಉದ್ಘಾಟಿಸಿದರು. ಡಿವೈಎಸ್ಪಿ ಡಾ| ವೀರಯ್ಯ ಹಿರೆಮಠ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಾಜಿ ಪುರಸಭೆ ಅಧ್ಯಕ್ಷ ಶ್ವಾನ ಪ್ರಿಯ ರಾಜೇಶ್ ಬನ್ನೂರು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ವಿವಿಧ ಗ್ರಾ.ಪಂ ಪಿಡಿಓಗಳು, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಆರ್‌ಟಿಓ, ನಗರಸಭೆ, ಎಪಿಎಂಸಿ, ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರಾಣಿ ಮಿತ್ರ ಮಂಡಳಿ
ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರಾಣಿ ಮಿತ್ರಮಂಡಳಿ ರಚನೆ ಮಾಡಬೇಕು. ಇದರಲ್ಲಿ ಇಬ್ಬರು ಪ್ರಾಣಿ ಪ್ರೀಯರು ಸಮಿತಿಯಲ್ಲಿದ್ದು, ಅವರು ಕಾಯಿದೆಯ ಕುರಿತು ಸಾರ್ವಜನಿಕರಿಗೆ ಅರಿವು, ಜಾಗ್ರತಿ ಮೂಡಿಸುವ ಕೆಲಸ ಮಾಡಬೇಕು. ಈ ಜಾಗೃತಿಯ ಮೂಲಕ ಕಾಯ್ದೆಯ ಅನುಷ್ಠಾನಕ್ಕೆ ಸುಲಭವಾಗಲಿದೆ.
ಡಾ. ಪ್ರಸನ್ನ ಹೆಬ್ಬಾರ್, ಸಹಾಯಕ ನಿರ್ದೇಶಕರು ಪಶು ಇಲಾಖೆ ಪುತ್ತೂರು

LEAVE A REPLY

Please enter your comment!
Please enter your name here