ಪುತ್ತೂರು: ದರ್ಬೆಯಲ್ಲಿರುವ ಲಕ್ಷ್ಮೀ ಇನ್ಸ್ಟಿಟ್ಯೂಟ್ ಆಫ್ ಟೈಪ್ರೈಟಿಂಗ್ ಆಂಡ್ ಕಂಪ್ಯೂಟರ್ಸ್ನ ಪ್ರಾಂಶುಪಾಲ ಪಿ.ವಿ.ಕೃಷ್ಣನ್ರವರಿಗೆ ಬೆಂಗಳೂರಿನ ಕರ್ನಾಟಕ ರಾಜ್ಯ ವಾಣಿಜ್ಯ ವಿದ್ಯಾಶಾಲೆಗಳ ಸಂಘವು ಗೌರವಾರ್ಥಕ ಫೆಲೋ ಪದವಿ ನೀಡಿ ಗೌರವಿಸಿದೆ.
ಕರ್ನಾಟಕ ರಾಜ್ಯ ವಾಣಿಜ್ಯ ವಿದ್ಯಾಶಾಲೆಗಳ ಸಂಘದ ಅಧ್ಯಕ್ಷ ಎಸ್.ಎಮ್.ರಮೇಶ್ ಪದವಿ ಪ್ರದಾನ ಮಾಡಿ ಸನ್ಮಾನಿಸಿದರು.
ದರ್ಬೆ ನಿವಾಸಿಯಾದ ಪಿ.ವಿ.ಕೃಷ್ಣನ್ರವರು 40 ವರ್ಷಕ್ಕೂ ಹೆಚ್ಚಿನ ಸಮಯದಿಂದ ದರ್ಬೆಯಲ್ಲಿ ಸೀನಿಯರ್ ಟೈಪ್ರೈಟಿಂಗ್ ತರಗತಿ ನಡೆಸುತ್ತಿದ್ದಾರೆ.