ಪುತ್ತೂರು: ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ಇದರ ಕುರಿಯ ಗ್ರಾಮ ಸಮಿತಿಯನ್ನು ಸ್ಥಾಪಕಾಧ್ಯಕ್ಷರಾದ ಬಿ ಕೆ ಸೇಸಪ್ಪ ಬೆದ್ರಕಾಡುರವರ ನೇತೃತ್ವದಲ್ಲಿ ರಚನೆ ಮಾಡಲಾಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ಯಾದವ ಎಂ ಓಟೆತ್ತಿಮಾರ್, ಗೌರವಾಧ್ಯಕ್ಷರಾಗಿ ಶಿವಪ್ಪ ನಾಯ್ಕ ಅಜಲಾಡಿ, ಉಪಾಧ್ಯಕ್ಷರಾಗಿ ಭವಿತ್‌ಮಾವಿನ ಕಟ್ಟೆ, ಕಾರ್ಯದರ್ಶಿಯಾಗಿ ಭರತ್ ಮಾವಿನಕಟ್ಟೆ, ಸಂಚಾಲಕರಾಗಿ ಬಾಳಪ್ಪ ಡಿಂಬ್ರಿ, ಜೊತೆ ಕಾರ್ಯದರ್ಶಿಯಾಗಿ ಭವನ್ ಕುರಿಯರವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ರವಿ ಮಲಾರ್, ದನರಾಜ್ ಡಿಂಬ್ರಿ, ಶ್ರವಣ್ ಕುರಿಯ, ಪ್ರಮೋದ್ ಕುರಿಯ, ಪ್ರದೀಪ್ ಕುರಿಯ, ಸುರೇಶ್ ಕುರಿಯ, ಕರುಣಾಕರ ಕೈಂತಿಲ, ಲೋಕೇಶ್ ಕೈಂತಿಲ, ದಯಾನಂದ ಅಜಲಾಡಿ, ಚನಿಯಪ್ಪ, ದೇವಕಿ ಅಜಲಾಡಿ, ರತ್ನ ಓಟೆತ್ತಿಮಾರ್, ರಾಮಕೃಷ್ಣ ಡಿಂಬ್ರಿ, ವಸಂತ ಅಜಲಾಡಿಯವರನ್ನು ನೇಮಕಮಾಡಲಾಯಿತು.
ಕಾರ್ಯಕ್ರಮವನ್ನು ಸಮಿತಿಯ ನೂತನ ಗೌರವಾಧ್ಯಕ್ಷ ಶಿವಪ್ಪ ನಾಯ್ಕ ಅಜಲಾಡಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ನ್ಯಾಯಯುತ ಬೇಡಿಕೆಗೆ ಎಲ್ಲರೂ ಒಟ್ಟಾಗಿ ಹೋರಾಟ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಾವು ನ್ಯಾಯದ ಪರವಾಗಿ ನಿಲ್ಲಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಬಂಟ್ವಾಳ ಗ್ರಾಮ ಶಾಖೆಯ ಗಣೇಶ್ ಸಿಗೆಬಲ್ಲೆ, ಪುತ್ತೂರು ತಾಲೂಕು ಮಹಿಳಾ ವೇದಿಕೆಯ ಯಾಮಿನಿ ಬೆಟ್ಟಂಪಾಡಿ, ಕುಂಬ್ರ ಶಾಖೆಯ ನಾರಾಯಣ ಕೆ, ಉಪಸ್ಥಿತರಿದ್ದರು. ದೇವದಾಸ ಕುರಿಯ ಸ್ವಾಗತಿಸಿ ವಂದಿಸಿದರು.