ವಿಧಾನಸಭಾ ಚುನಾವಣೆಗೆ ಮತದಾರರನ್ನು ಮತಚಲಾಯಿಸುವಂತೆ ಪ್ರೇರೇಪಿಸಲು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 12 ಮಾದರಿ ಮತಗಟ್ಟೆ ನಿರ್ಮಾಣ

0

ಪುತ್ತೂರು: ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಅತಿ ಹೆಚ್ಚು ಮತದಾರರು ಮತಚಲಾಯಿಸುವಂತೆ ಪ್ರೇರೇಪಿಸಲು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮಾದರಿ ಮಗಟ್ಟೆಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 12 ಮಾದರಿ ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಚುನಾವಣಾಧಿಕಾರಿಯಗಿರುವ ಸಹಾಯಕ ಕಮೀಷನರ್ ಗಿರೀಶ್‌ನಂದನ್ ಅವರು ತಿಳಿಸಿದ್ದಾರೆ.

ಪುತ್ತೂರು ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಾ.14ರಂದು ಪತ್ರಿಕಾ ಮಾದ್ಯಮದವರಿಗೆ ವಿದ್ಯುನ್ಮಾನ ಮತಯಂತ್ರಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ, ಕಂಬಳ, ನೀಲತರಂಗ, ಪರಂಪರೆ, ಗೋ ಗ್ರೀನ್, ಯುವ, ಸಖಿ ಮತ್ತು ವಿಕಲಚೇತನ ಎಂಬ ಪರಿಕಲ್ಪನೆಗಳಡಿಯಲ್ಲಿ ಮಾದರಿ ಮತಗಟ್ಟೆಗಳನ್ನು ನಿರ್ಮಿಸಲು ಯೋಜಿಸಿದಂತೆ ಪುತ್ತೂರಿನಲ್ಲಿ ಯಕ್ಷಗಾನ 2, ಕಂಬಳ 2, ನೀಲತರಂಗ 1, ಪರಂಪರೆ 2, ಗೋಗ್ರೀನ್ 2, ಯುವ 1, ಸಖಿ 1, ವಿಕಲಚೇತನ 1 ಮತಗಟ್ಟೆ ನಿರ್ಮಾಣ ಮಾಡಲಾಗುತ್ತದೆ.

ಈಗಾಗಲೇ ಬಿ.ಎಲ್.ಓ ಮತ್ತು ಬಿಎಲ್‌ಎ ತರಬೇತಿ, ಎಲ್ಲಾ ಮತಗಟ್ಟೆಗಳಲ್ಲಿ ಇವಿಎಂ ಪ್ರಾತ್ಯಕ್ಷಿಕೆ ಕಾರ್ಯ ನಡೆಯುತ್ತಿದೆ. ಹೆಸರು ಬದಲಾದ ಮತಗಟ್ಟೆಗಳ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ನೀಡಿ ಪ್ರಕಟಗೊಳಿಸಲಾಗಿದೆ ಎಂದ ಅವರು ಈಗಾಗಲೇ ಇಲ್ಲಿನ ತನಕ ಮಾಹಿತಿಯಂತೆ 2,08,272 ಮತದಾರರಿದ್ದಾರೆ. ಇನ್ನೂ ಮತದಾರರ ಸೇರ್ಪಡೆ ಕಾರ್ಯ ನಡೆಯುತ್ತದೆ. ಪುತ್ತೂರಿನಲ್ಲಿ ಮತಗಟ್ಟೆ ಸಂಖ್ಯೆ 85, 86, 168 ಆರೆಂಜ್ ಮತಗಟ್ಟೆಯಿದೆ ಎಂದು ಅವರು ಮಾಹಿತಿ ನೀಡಿದರು. ಸಹಾಯಕ ಚುನಾವಣಾಧಿಕಾರಿ ತಾ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್, ಉಪತಹಸೀಲ್ದಾರ್ ಸುಲೋಚನಾ ಉಪಸ್ಥಿತರಿದ್ದರು. ಮಾಸ್ಟರ್ ತರಬೇತಿದಾರರಾದ ಪ್ರಶಾಂತ್ ಪೈ, ಹರೀಶಂಕರ್, ಹರಿಪ್ರಸಾದ್ ಇವಿಎಂ ಪ್ರಾತ್ಯಕ್ಷಿಕೆ ನಡೆಸಿದರು.

LEAVE A REPLY

Please enter your comment!
Please enter your name here