ನೇರ ಪಾವತಿ / ನೇಮಕಾತಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಮುಂದುವರಿದ ನಗರಸಭೆ ಕಸ ಸಾಗಿಸುವ ವಾಹನ ಚಾಲಕರ ಮುಷ್ಕರ ಹಿನ್ನೆಲೆ

0

ಮನೆ ಮನೆ ಕಸ ಸಂಗ್ರಹ ಸಮಸ್ಯೆ ಎದುರಿಸುತ್ತಿರುವ ನಗರಸಭೆ !

ಪುತ್ತೂರು: ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹೊರಗುತ್ತಿಗೆ ಕಸ ಸಾಗಿಸುವ ವಾಹನ ಚಾಲಕರು, ವಾಟರ್ ಮನ್, ಡಾಟಾ ಆಪರೇಟರ್, ಕಸ ನಿರ್ವಹಣೆ ಸಹಾಯಕರು, ಸ್ಯಾನಿಟರಿ ಸೂಪರ್ ವೈಸರ್‌ಗಳನ್ನು ಪೌರಕಾರ್ಮಿಕರ ಮಾದರಿಯಲ್ಲಿ ನೇರ ಪಾವತಿ ಅಥವಾ ನೇರ ನೇಮಕಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಹೊರಗುತ್ತಿಗೆ ನೌಕರರು ಕಳೆದ ಮೂರು ದಿನಗಳಿಂದ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಪುತ್ತೂರಿನಲ್ಲಿ ಮನೆ ಮನೆ ಕಸ ಸಂಗ್ರಹಕ್ಕೆ ಸಮಸ್ಯೆ ಉಂಟಾಗಿದೆ.

ಪುತ್ತೂರು ನಗರಸಭೆಯಲ್ಲಿ ಮನೆ ಮನೆ ಕಸ ಸಂಗ್ರಹ ವಾಹನಗಳ 17 ಮಂದಿ ಚಾಲಕರು ಸಹಿತ ಹಲವಾರು ಮಂದಿ ಬೆಂಗಳೂರಿನಲ್ಲಿ ಮುಷ್ಕರದಲ್ಲಿ ಭಾಗವಹಿಸುತ್ತಿದ್ದರಿಂದ ನಗರಸಭೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಕ್ಕೆ ಸಮಸ್ಯೆ ಉಂಟಾಗಿದೆ. ಆದರೂ ನಗರಸಭೆ ಖಾಯಂ ಪೌರ ಕಾರ್ಮಿಕರ ಚಾಲಕರು ಹೊಂದಾಣಿಕೆ ಮೂಲಕ ಕಸ ಸಂಗ್ರಹ ಮತ್ತು ವಿಲೇವಾರಿ ಮಾಡುತ್ತಿದ್ದಾರೆ. ನಗರಸಭೆ ಎಲ್ಲಾ ವಾರ್ಡ್‌ಗಳಿಗೆ ಕಸ ಸಂಗ್ರಹ ಮಾಡುವುದು ಕಷ್ಟ ಸಾಧ್ಯವಾಗಿದ್ದು, ಹಲವು ಕಡೆ ಮನೆಗಳಲ್ಲಿ ಕಸದ ರಾಶಿ ಮನೆ ಮುಂದಿನ ಗೇಟ್‌ನ ಎದುರು ಇಟ್ಟಿದ್ದು, ಅದು ಗಾಳಿಗೆ ಹಾರಾಡುತ್ತಿದೆ.

ಕೇಶ ಮುಂಡನೆ ಮಾಡಿ ಮುಷ್ಕರ:
ಮಾ.13ರಿಂದ ಆರಂಭಗೊಂಡಿರುವ ಮುಷ್ಕರದಲ್ಲಿ 2ನೇ ದಿನ ಸರಕಾರದ ಆರ್ಥಿಕ ಇಲಾಖೆಯಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಹೊರಗುತ್ತಿಗೆ ನೌಕರರು ಕೇಶ ಮುಂಡನೆ ಮಾಡಿ ಮುಷ್ಕರ ನಡೆಸಿದ್ದಾರೆ. ಹೊರಗುತ್ತಿಗೆ ನೌಕರರ ಸಂಚಾಲಕ ಅಣ್ಣಪ್ಪ ಕಾರೆಕ್ಕಾಡು ಸಹಿತ ವಿವಿಧ ಜಿಲ್ಲೆಗಳಿಂದ ಮುಖಂಡರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ.

LEAVE A REPLY

Please enter your comment!
Please enter your name here