ನೆಲ್ಯಾಡಿ: ಮಾ.19 ರಿಂದ 21 ರ ತನಕ ನಡೆಯಲಿರುವ ಕಡಬ ತಾಲೂಕಿನ ಕೊಣಾಲು ಗ್ರಾಮದ ಕಡೆಂಬಲಿತ್ತಾಯ ಗುಡ್ಡೆಯಲ್ಲಿ ನೆಲೆ ನಿಂತಿರುವ ಚಕ್ರವರ್ತಿ ಕೊಡಮಣಿತ್ತಾಯಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಮತ್ತು ನೇಮೋತ್ಸವದ ಗೊನೆ ಮುಹೂರ್ತ ಮಾ.14ರಂದು ಬೆಳಿಗ್ಗೆ ಕಡೆಂಬಿಲತ್ತಾಯ ಗುಡ್ಡೆಯಲ್ಲಿ ನಡೆಯಿತು.
ಕುತ್ರಾಡಿ ಹಾರ್ಪಳ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀಧರ ನೂಜಿನ್ನಾಯರವರು ಗೊನೆ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ರೈ ಕೊಣಾಲುಗುತ್ತು, ಉಪಾಧ್ಯಕ್ಷ ಜಗದೀಶ್ ಶೆಟ್ಟಿ ಕಡೆಂಬಿಲ, ಕಾರ್ಯದರ್ಶಿ ಚಂದಪ್ಪ ಗೌಡ ಕಾಯರ್ತಡ್ಕ, ಖಜಾಂಜಿ ದಿನೇಶ್ ಗೌಡ ಕೋಲ್ಪೆ, ಜೊತೆ ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಕಲಾಯಿ, ಸದಸ್ಯರಾದ ವಿಶ್ವನಾಥ ಪೂಜಾರಿ ಪಾಂಡಿಬೆಟ್ಟು, ಪ್ರಕಾಶ್ ಸುವರ್ಣ ಕುರುಂಬೊಟ್ಟು, ಗ್ರಾಮದ ಪ್ರಮುಖರಾದ ಮುತ್ತಪ್ಪ ಗೌಡ ಎಣ್ಣೆತ್ತೋಡಿ, ಧರ್ಣಪ್ಪ ದಾಸ್ ಸುಪ್ರಿತನಿಲಯ, ಲಿಂಗಪ್ಪ ಗೌಡ ದರ್ಖಾಸು, ಭಾಸ್ಕರ ರೈ ತೋಟ, ಪದ್ಮನಾಭ ಶೆಟ್ಟಿ ಮರಂದೆ, ಎಂ.ಪಿ.ಜತ್ತಪ್ಪ ಗೌಡ ಮಣ್ಣಮಜಲು, ನಾಗೇಶ್ ಗೌಡ ಮರಂದೆ, ಹರೀಶ್ ಮೂಲ್ಯ ಕಡೆಂಬಿಲ, ಮಂಜುನಾಥ ಗೌಡ ದರ್ಖಾಸು, ಎಂ.ಎಸ್.ಜತ್ತಪ್ಪ ಗೌಡ ಮಣ್ಣಮಜಲು, ಅಣ್ಣಿ ಗೌಡ ಮಣ್ಣಮಜಲು, ಭೀಮ ಭಟ್ ನೆಕ್ಕರೆ, ವೈ.ಡೊಂಬಯ್ಯ ಗೌಡ ಎಣ್ಣೆತ್ತೋಡಿ, ಲೋಕೇಶ್ ಪೂಜಾರಿ ಆಲಂತಾಯ, ಸುಂದರ ಗೌಡ ಸುರಕ್ಷಾನಿಲಯ, ರಮೇಶ್ ಗೌಡ ಕಾಯರ್ತಡ್ಕ, ಆನಂದ ಪೂಜಾರಿ ಅಂಬರ್ಜೆ, ಸಾಂತಪ್ಪ ಗೌಡ ಎಣ್ಣೆತ್ತೋಡಿ, ತಾರನಾಥ ಗೌಡ ಎಣ್ಣೆತ್ತೋಡಿ, ಸದಾನಂದ ಗೌಡ ಮಣ್ಣಮಜಲು, ಬಾಲಕೃಷ್ಣ ರೈ ತೋಟ, ಮೋನಪ್ಪ ಗೌಡ ಎಣ್ಣೆತ್ತೋಡಿ, ದಿನೇಶ್ ಬಂಗೇರ ಕಲಾಯಿ, ಅಭಿಲಾಶ್ ಪಾಂಡಿಬೆಟ್ಟು, ರಾಜೇಶ್ ಕಲಾಯಿ ಮತ್ತಿತರರು ಉಪಸ್ಥಿತರಿದ್ದರು.