ಮಾ 19-24, ಕಾಯಿಮಣ ಮರಕ್ಕಡ ಕಲ್ಲಮಾಡದಲ್ಲಿ ಶ್ರೀ ಉಳ್ಳಾಕುಲ ನೇಮೋತ್ಸವ

0

ಕಾಣಿಯೂರು: ಕಾಯಿಮಣ ಗ್ರಾಮದ ಮರಕ್ಕಡ ಕಲ್ಲಮಾಡದಲ್ಲಿ ಶ್ರೀ ಉಳ್ಳಾಕುಲ ನೇಮೋತ್ಸವವು ಮಾ 19 ರಿಂದ ಮಾ 24ರವರೆಗೆ ನಡೆಯಲಿದೆ.

ಮಾ 19ರಂದು ಬೆಳಿಗ್ಗೆ ಗಣಹೋಮ, ನಾಗತಂಬಿಲ ಮತ್ತು ಮುಂಡ್ಯೆ ಹಾಕುವುದು, ಮಾ 20ರಂದು ದೈವಗಳ ಭಂಡಾರ ತೆಗೆಯುವುದು, ಕಲ್ಲಮಾಡದಲ್ಲಿ ಧ್ವಜಾರೋಹಣ, ಮಾ 21ರಂದು ಕಲ್ಲಮಾಡದಲ್ಲಿ ಧ್ವಜಾಪೂಜೆ, ಮಾ 22ರಂದು ಬೆಳಿಗ್ಗೆ ಮಲ್ಲಾರ ದೈವದ ನೇಮೋತ್ಸವ, ದೈಯರ ದೈವದ ನೇಮೋತ್ಸವ, ಭಜನಾ ಕಾರ್ಯಕ್ರಮ, ಕಾಮಣ ಮರಕ್ಕಡ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಮಾ 23ರಂದು ಮಧ್ಯಾಹ್ನ ಎಲ್ಯಾರ ದೈವದ ನೇಮೋತ್ಸವ, ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ನಾಯರ್ ದೈವದ ನೇಮೋತ್ಸವ, ರಾತ್ರಿ ಅಂಙಣಪಂಜುರ್ಲಿ ಮತ್ತು ಗುಳಿಗ ದೈವದ ನೇಮೋತ್ಸವ ನಡೆದು, ಬಳಿಕ ಧ್ವಜಾವರೋಹಣ ನಡೆಯಲಿದೆ.

ಮಾ 24ರಂದು ರಾತ್ರಿ ಮರಕ್ಕಡದಲ್ಲಿ ಚಾಮುಂಡಿ ದೈವದ ಭಂಡಾರ ತೆಗೆಯುವುದು, ಬಳಿಕ ಅನ್ನಸಂತರ್ಪಣೆ ನಡೆದು, ಶ್ರೀ ಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here