ಕುಂತೂರುಪದವು ಅಂಗನವಾಡಿ ಕಾರ್ಯಕರ್ತೆ ಕತ್ರಿನಾ ವಿ.ಎಕ್ಸ್.ನಿಧನ

0

ಪೆರಾಬೆ: ಕುಂತೂರುಪದವು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ, ಕುಂತೂರು ಗ್ರಾಮದ ಕುಂತೂರುಪದವು ವಟ್ಟಕರೊಟ್ಟ ನಿವಾಸಿ ಕತ್ರಿನಾ ವಿ.ಎಕ್ಸ್.(57ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಮಾ.18ರಂದು ಬೆಳಿಗ್ಗೆ ನಿಧನರಾದರು.


ಇವರು ಕಳೆದ 36 ವರ್ಷಗಳಿಂದ ಕುಂತೂರುಪದವು ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಎರಡು ದಿನದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಕತ್ರಿನಾ ಅವರು ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮಾ.18ರಂದು ಬೆಳಿಗ್ಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುತ್ತಿದ್ದಂತೆ ದಾರಿಮಧ್ಯೆ ಅವರು ನಿಧನರಾದರು ಎಂದು ವರದಿಯಾಗಿದೆ. ಕತ್ರಿನಾ ಅವರು ಅವಿವಾಹಿತೆಯಾಗಿದ್ದು ತಂದೆ ಕ್ಸೇವಿಯರ್, ತಾಯಿ ಮೇರಿ, ಓರ್ವ ಸಹೋದರ ಹಾಗೂ ಐವರು ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here