8 ಶಾಖೆ ಹೊಂದಿರುವ ಹೆಸರಾಂತ ಸಂಸ್ಥೆ H P R ನಲ್ಲಿ ನರ್ಸಿಂಗ್ ತರಗತಿಗಳು ಆರಂಭ

0

“ನಗುವಿನ ಮೊಗ ರೋಗಿಗೆ ಮೊದಲ ಔಷಧ ” ಡಾ.ರಘು

ಪುತ್ತೂರು : ಆಧುನಿಕ ನರ್ಸಿಂಗ್ ನಿರ್ಮಾತೃ ” ಲೇಡಿ ನೈಟಿಂಗೇಲ್ ” ಯುದ್ಧದ ಸಮಯ ಸೈನಿಕರಿಗೆ ನೀಡಿದಂತಹ ಸೇವೆಯೂ ಅದ್ಬುತ , ಅವಿಸ್ಮರಣೀಯ. ಗುರಿ ಹಾಗೂ ಬದ್ಧತೆ ಇದ್ದಲ್ಲಿ ಯಶಸ್ಸು ಸಾಧ್ಯ ಜೊತೆಗೆ ಶಿಸ್ತು ಕೂಡ ಬಹಳ ಮುಖ್ಯ. ಒಬ್ಬ ವೈದ್ಯರಿಗಿಂತ ,ದಾದಿಯರ ಸೇವೆ ಅತೀ ಅಮೂಲ್ಯ ಮತ್ತು ಸೇವೆ ಸಮಯ ನಿಮ್ಮ ಮೊಗದ ನಗುವೂ ರೋಗಿಗೆ ಮೊದಲ ಔಷಧವಾಗಿರಬೇಕೆಂದೂ ರಾಜೀವ್ ಗಾಂಧಿ ಆರೋಗ್ಯ ವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ , ಡಾ. ರಘು ಬೆಳ್ಳಿಪ್ಪಾಡಿ ಅಭಿಪ್ರಾಯಪಟ್ಟರು.

ಮಾ.18 ರಂದು ಸಾಲ್ಮರ ಎಪಿಎಂಸಿ ರೈತ ಸಭಾಭವನದಲ್ಲಿ ಜರುಗಿದ , ನೆಲ್ಲಿಕಟ್ಟೆ ಬರೆಕೆರೆ ಸಭಾಂಗಣ ಬಳಿ ಕಾರ್ಯಚರಿಸುತ್ತಿರುವ , ಮಣಿಪಾಲದ ಹೆಚ್‌ಪಿಆರ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಆ್ಯಂಡ್ ಪಾರಾ ಮೆಡಿಕಲ್ ಸಯನ್ಸಸ್ ಸಂಸ್ಥೆ , ಪುತ್ತೂರು ಶಾಖೆ ಇದರ ಜಿಎನ್‌ಎಂ ಮತ್ತು ಪಾರಾ ಮೆಡಿಕಲ್ ವಿದ್ಯಾರ್ಥಿಗಳ ಮೂರನೆಯ ಬ್ಯಾಚ್ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಅವರು ಗೌರವ ಅತಿಥಿಯಾಗಿ ಭಾಗವಹಿಸಿ ಮಾತನಾಡಿ , ಹೆಸರಾಂತ ಸಂಸ್ಥೆಯ ಚೆರ್ಮ್ಯಾನ್ ಹರಿಪ್ರಸಾದ್ ರೈ ಇವರು ಶ್ರಮಜೀವಿಯಾಗಿರೋ ಕಾರಣ ಈ ಜ್ಞಾನದ ದೇಗುಲವು ಎಲ್ಲೆಡೆ ಬೆಳಗುತಿದೆ.ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲೂ ವೈದ್ಯಕೀಯ ಕಾಲೇಜು ಆರಂಭವಾಗಬೇಕೆಂಬ ಕೂಗು ,ಹೋರಾಟ ಜೋರಾಗಿಯೇ ನಡೆಯುತಿದೆ , ರಾಜೀವ್ ಗಾಂಧಿ ಆರೋಗ್ಯ ವಿದ್ಯಾಲಯ ನೀಡುವ ಸರ್ಟಿಫಿಕೇಟ್ ಗೆ ಜಗತ್ತೇ ಮಾನ್ಯತೆ ನೀಡಿದೆ ಹಾಗೇನೆ ನಿಮಗೆಲ್ಲಾ ಅತ್ಯುತ್ತಮ ಭವಿಷ್ಯ ಸಿಗಲೆಂದು ಶುಭಹಾರೈಸಿದರು.


ಟ್ರಸ್ಟಿ ವಿಜೇತಾ ರೈ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.

ಮುಖ್ಯ ಅತಿಥಿ ಸರಕಾರಿ ಆಸ್ಪತ್ರೆಯ ಅರವಳಿಕೆತಜ್ಞೆ ಡಾ.ಶ್ವೇತಾ ಬಿ , ಉದ್ಯಮಿ ಅಶೋಕ್ ರೈ ಕೋಡಿಂಬಾಡಿ ,ಸಂಸ್ಥೆಯ ಚೇರ್ಮ್ಯಾನ್ ಪ್ರೊ. ಹರಿಪ್ರಸಾದ್ ರೈ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭಹಾರೈಸಿದರು.


ಸರಕಾರಿ ಆಸ್ಪತ್ರೆ ನರ್ಸಿಂಗ್ ಅಧಿಕಾರಿ ಶ್ರೀಮತಿ ಎಲ್ಸಮ್ಮ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸೋ ಮೂಲಕ ಹರಸಿದರು. ಬಳಿಕ ಆಧುನಿಕ ನರ್ಸಿಂಗ್ ನಿರ್ಮಾತೃ ಲೇಡಿ ನೈಟೀಂಗೇಲ್ ಭಾವ ಚಿತ್ರಕ್ಕೆ ದೀಪ ಬೆಳಗಿಸಿ , ಪುಪ್ಪಾರ್ಚನೆ ಮಾಡಲಾಯಿತು.ಈ ವೇಳೆ ಎಲ್ಲಾ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಮೊಂಬತ್ತಿ ಬೆಳಗಿ , ಹಿಡಿದು ಗೌರವನ್ನಿತ್ತರು. ಸಂಸ್ಥೆಯ ಟಸ್ಟ್ರಿ ಸವಿತಾ ರೈ , ನಿರಂಜನ್ ರೈ ಮಠಂತಬೆಟ್ಟು ,ಪ್ರಭಾಕರ ಸಾಮಾನಿ ,ಸದಾಶಿವ ರೈ ಹಾಗೂ ಜಯಪ್ರಕಾಶ್ ಬದಿನಾರು , ಪ್ರಗತಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಪ್ರೀತಾ , ಸಂಸ್ಥೆಯ ಆಡಳಿತಾಧಿಕಾರಿ ಶಿವಪ್ರಸಾದ್ ರೈ ಮಠಂತಬೆಟ್ಟು , ಸಂಸ್ಥೆಯ ಪ್ರಾಂಶುಪಾಲೆ ಇವ್ನೀಸ್ ಆಗ್ನೇಸ್ ಡಿ ಸೋಜಾ , ಚಂದ್ರಿಕಾ ಎಸ್ ರೈ ಹಾಗೂ ಅನ್ಸ್ ಎಸ್ ರೈ ಮಠಂತಬೆಟ್ಟು , ವಿದ್ಯಾರ್ಥಿಗಳು ,ಶಿಕ್ಷಕರು ಹಾಗೂ ಸಿಬಂದಿಗಳು ಮತ್ತು ಪೊಷಕರೂ ಹಾಜರಿದ್ದರು. ಉಪನ್ಯಾಸಕರ ತಂಡದ ರೇಣುಕಾ ಸ್ವಾಗತಿಸಿ , ಹರ್ಷಿಣಿ ತಂಡ ಪ್ರಾರ್ಥನೆ ನೆರವೇರಿಸಿ ,ಜಲಜ ಹಾಗೂ ತ್ರಿವೇಣಿ ನಿರೂಪಿಸಿ ಮಲ್ಲಿಕಾ ವಂದಿಸಿದರು. ತದನಂತರ ಮಕ್ಕಳಿಂದ ಮನೋರಂಜನೆ ಕಾರ್ಯಕ್ರಮ ನೆರವೇರಿತು.

ಹೆಚ್ಪಿಆರ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಆ್ಯಂಡ್ ಪಾರಾ ಮೆಡಿಕಲ್ ಸಯನ್ಸ್ ಸಂಸ್ಥೆಯ ಆರಂಭ ಸ್ಥಳ
ಮಣಿಪಾಲ. ಬಳಿಕ ಮಂಗಳೂರು ,ಸೊರಬ ,ಬೆಂಗಳೂರು ,ಪುತ್ತೂರು ,ಬೀದರ್ ,ಕಲಬುರ್ಗಿ ,ಬ್ರಹ್ಮಾವರ ಹಾಗೂ ಬಿಜಾಪುರದಲ್ಲಿ ಶಾಖೆಗಳಿವೆ. ಎಲ್ಲೆಡೆಯೂ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಸಫಲತೆ ಕಂಡಿದ್ದೇವೆ.ನಿಮ್ಮೆಲ್ಲರ ಪ್ರೀತಿ ,ಪ್ರೋತ್ಸಾಹ. ಹೀಗೇನೆ ಬೆಳೆಯುತ್ತಿರಲಿ.
ಪ್ರೊ.ಹರಿಪ್ರಸಾದ್ ರೈ…
ಫೌಂಡರ್ , ಹೆಚ್ .ಪಿ. ಆರ್. ಗ್ರೂಪ್ ಆಪ್ ಇನ್ಸ್ಟಿಟ್ಯೂಟ್.

LEAVE A REPLY

Please enter your comment!
Please enter your name here