ಪೆರೀಗೇರಿ ಶ್ರೀ ಮೂಕಾಂಬಿ ಗುಳಿಗ ನೇಮೋತ್ಸವ

0

ಬಡಗನ್ನೂರುಃ ಶ್ರೀ ಮೂಕಾಂಬಿ ಗುಳಿಗ ದೈವದ ದೈವಸ್ಥಾನ ನೂಚಿಲೋಡು ಪೆರೀಗೇರಿ ಬಡಗನ್ನೂರು ಇದರ ಪುನರ್ ಪ್ರತಿಷ್ಥಾ ಮಹೋತ್ಸವ  ಅಂಗವಾಗಿ ಮಾ.17 ರಂದು  ಶ್ರೀ ಸತ್ಯನಾರಾಯಣ ಪೂಜೆ, ಮಂಗಳಾರತಿ, ಶೇಷನ್  ನೇತೃತ್ವದಲ್ಲಿ ಅಲಂತಡ್ಕ ವನಶಾಸ್ರಾರ ಭಜನಾ ತಂಡದ ಸದಸ್ಯರಿಂದ ಕುಣಿತ ಭಜನೆ ,ರಾತ್ರಿ 8 ಕ್ಕೆ ಭಂಡಾರ ತೆಗೆದು ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಗಂ 8.30 ರಿಂದ ಯಕ್ಷಸಾರಥಿ ಯಕ್ಷಬಳಗ ಪುತ್ತೂರು ಇವರಿಂದ “ಧಕ್ಷಾಧ್ವರ”  ಯಕ್ಷಗಾನ ನಡೆಯಿತು

ರಾತ್ರಿ ಗಂ 11 ಕ್ಕೆ ಶ್ರೀ ಮುಕಾಂಬಿ ಗುಳಿಗ ದೈವದ ಕೋಲ, ಪಾತಃ ಕಾಲ ದೈವದ ಅರಸಿನ ಹುಡಿ ಪ್ರಸಾದ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ  ಮನೆಯ ಯಜಮಾನರಾದ ವಿಶಾಲಾಕ್ಷಿ ಅಮ್ಮ,   ನೂಚಿಲೋಡು, ವಿನಯ ಬಟ್  ದಂಪತಿಗಳು ನೂಚಿಲೋಡು  ವೆಂಕಟರಾಜು ಹರಸಿನಕೆರೆ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here