ಕೊಲ್ಯೊಟ್ಟುಬೈಲು: ವಿಶ್ವ ಮಹಿಳಾ ದಿನಾಚರಣೆ, ಸನ್ಮಾನ

0

ನೆಲ್ಯಾಡಿ: ನೆಲ್ಯಾಡಿ ಕೊಲ್ಯೊಟ್ಟುಬೈಲು ಅಂಗನವಾಡಿ ಕೇಂದ್ರ, ಜೆಸಿಐ ನೆಲ್ಯಾಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯ, ಸ್ತ್ರೀಶಕ್ತಿ ಸ್ವಸಹಾಯ ಸಂಘ ಹಾಗೂ ನೆಲ್ಯಾಡಿ ಪ್ರಮುಖಿ ಮಹಿಳಾ ಮಂಡಲದ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ಮಾ.೧೪ರಂದು ನೆಲ್ಯಾಡಿ ಕೊಲ್ಯೊಟ್ಟುಬೈಲು ಅಂಗನವಾಡಿಯಲ್ಲಿ ನಡೆಯಿತು.


ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ಭಾರತಿ ಜೆ.ಎ.ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸೌಜನ್ಯ ಸ್ತ್ರಿಶಕ್ತಿ ಸ್ವಸಹಾಯ ಸಂಘಕ್ಕೆ ಮೈಸೂರು ಕಂದಾಯ ವಿಭಾಗದ ಅತ್ಯುತ್ತಮ ಸ್ವಸಹಾಯ ಸಂಘ ಪ್ರಶಸ್ತಿ ಲಭಿಸಿದೆ. ಮಹಿಳಾ ದಿನಾಚರಣೆ ಮಾ.೮ಕ್ಕೆ ಮಾತ್ರ ಸೀಮಿತವಾಗದೇ ಪ್ರತಿದಿನವೂ ಆಚರಣೆಯಾಗಬೇಕು. ಈಗ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಎಲ್ಲರೊಂದಿಗೆ ಬೆರೆತು ಸಮಾಜಮುಖಿಯಾಗಿ ಚಿಂತನೆ ಮಾಡಿಕೊಂಡು ಮಹಿಳೆ ಸಮಾಜದಲ್ಲಿ ಮುಂದೆ ಬರಬೇಕಾದಲ್ಲಿ ಪುರುಷರ ಬೆಂಬಲವೂ ಬೇಕಾಗಿದೆ ಎಂದರು.


ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ರವರು ಮಾತನಾಡಿ, ಸೌಜನ್ಯ ಸ್ತ್ರೀಶಕ್ತಿ ಸ್ವಸಹಾಯ ಸಂಘ ರಾಜ್ಯ ಮಟ್ಟದ ಪ್ರಶಸ್ತಿ ಪಡೆಯುವ ಮೂಲಕ ಊರಿಗೆ ಹೆಸರು ತಂದಿದೆ. ಯೋಜನಾಧಿಕಾರಿಯಾಗಿರುವ ಭಾರತಿ ಜೆ.ಎ.,ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂಗನವಾಡಿಗಳಿಗೆ ಯಾವುದೇ ಸಮಸ್ಯೆಯಾದರೂ ತಕ್ಷಣ ಸ್ಪಂದನೆ ನೀಡುತ್ತಿದ್ದರು. ಭ್ರಷ್ಟಚಾರ ರಹಿತ ಅಧಿಕಾರಿ ಎಂದು ಸುದ್ದಿ ಜನಾಂದೋಲನದಲ್ಲಿ ಗುರುತಿಸಿಕೊಂಡಿದ್ದಾರೆ. ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸುತ್ತಿರುವುದು ಅತೀವ ಸಂತಸ ತಂದಿದೆ ಎಂದರು. ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷೆ ಚೇತನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಲಯ ಮೇಲ್ವಿಚಾರಕಿ ಪುಷ್ಪಾವತಿ, ಸ್ತ್ರೀಶಕ್ತಿ ಸ್ವಸಹಾಯ ಸಂಘದ ಹಿರಿಯ ಮಹಿಳೆ ದೇವಕಿಯಮ್ಮ, ಸೌಜನ್ಯ ಸ್ತ್ರಿಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ವೇದಾವತಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಪೂರ್ಣಿಮಾ, ಪ್ರಮುಖಿ ಯುವಕ ಮಂಡಲದ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೆಲ್ಯಾಡಿ ಮಹಿಳಾ ಜೇಸಿ ಅಧ್ಯಕ್ಷೆ ರಶ್ಮಾ ದಯಾಕರ ರೈ ಸ್ವಾಗತಿಸಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಪೂರ್ಣಿಮಾ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆ ಸಂಪಾವತಿ ಕಾರ್ಯಕ್ರಮ ನಿರೂಪಿಸಿದರು.


ಸನ್ಮಾನ:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ಭಾರತಿ ಜೆ.ಎ., ಮೇಲ್ವಿಚಾರಕಿ ಪುಷ್ಪಾವತಿ, ಹಿರಿಯ ಮಹಿಳೆ ದೇಜಮ್ಮ ಕರಂದಳ, ರಾಜ್ಯ ಪ್ರಶಸ್ತಿ ಪುರಸ್ಕೃತ ಸೌಜನ್ಯ ಸ್ತ್ರಿಶಕ್ತಿ ಸ್ವಸಹಾಯ ಸಂಘದ ಸದಸ್ಯೆ ಹೇಮಾವತಿ ಹಾಗೂ ರತ್ನಾಕರ ಶೆಟ್ಟಿ ಅಶ್ವಮೇಧ, ಜಯಾನಂದ ಬಂಟ್ರಿಯಾಲ್ ಹಾಗೂ ಸುಚಿತ್ರಾ ಜೆ.ಬಂಟ್ರಿಯಾಲ್, ಸೌಜನ್ಯ ಸ್ತ್ರಿಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ, ಕಾರ್ಯದರ್ಶಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜಯಾನಂದ ಬಂಟ್ರಿಯಾಲ್‌ರವರು ಸನ್ಮಾನಿತರನ್ನು ಪರಿಚಯಿಸಿದರು.

LEAVE A REPLY

Please enter your comment!
Please enter your name here