ನೇಮಕ್ಕೆ ಬಂದವರ ಬೈಕ್ ಕಳವು

0

ಪುತ್ತೂರು: ನೇಮೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದ ವ್ಯಕ್ತಿಯೊಬ್ಬರ ಬೈಕ್ ಕಳವಾದ ಘಟನೆ ಚಿಕ್ಕಪುತ್ತೂರಿನಲ್ಲಿ ನಡೆದಿದೆ.

ದರ್ಬೆ ಮರೀಲ್ ನಿವಾಸಿ ಗಣೇಶ್ ಕೆ ಎಂಬವರ ಬೈಕ್ ಕಳವಾಗಿದ್ದು, ಅವರು ಚಿಕ್ಕಪುತ್ತೂರು ಮಡಿವಾಳ ಕಟ್ಟೆಯ ಬಳಿ ನೇಮೋತ್ಸವಕ್ಕೆಂದು ತನ್ನ ಬಾಬ್ತು ಹಿರೋ ಹೋಂಡಾ ಫ್ಯಾಶನ್ ಪ್ರೋ ಬೈಕ್‌ನಲ್ಲಿ ಬಂದು ಬೈಕ್ ಅನ್ನು ನಿಲ್ಲಿಸಿ ನೇಮೋತ್ಸವಕ್ಕೆ ಹೋಗಿ ಬರುವಾಗ ನಿಲ್ಲಿಸಿದ ಸ್ಥಳದಲ್ಲಿ ಬೈಕ್ ನಾಪತ್ತೆಯಾಗಿತ್ತು.

ಘಟನೆ ಕುರಿತು ತನ್ನ ಬೈಕ್ ಕಳವಾಗಿದೆ ಎಂದು ಗಣೇಶ್ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here