ಆಲಂಕಾರಿನಲ್ಲಿ ಅಳವಡಿಸಿದ ಮತದಾನ ಬಹಿಷ್ಕಾರದ ಬ್ಯಾನರ್ ಬಳಿ ಗ್ರಾ.ಪಂ ಹಾಗು ಸಾರ್ವಜನಿಕರಿಂದ ಸಚಿವ ಅಂಗಾರ ಅವರ ಅನುದಾನದ‌ ಬ್ಯಾನರ್ ಅಳವಡಿಕೆ

0

ಆಲಂಕಾರು: ಆಲಂಕಾರು ಬುಡೇರಿಯಾ ಎಂಬಲ್ಲಿ ಹಾಕಲಾಗಿರುವ ಮತದಾನ ಬಹಿಷ್ಕಾರದ ಬ್ಯಾನರ್ ಬಳಿ ಸಚಿವ ಅಂಗಾರ ಎಸ್ ರವರು ನೀಡಿದ ಅನುದಾನದ ವಿವರವನ್ನೊಳಗೊಂಡ ಬ್ಯಾನರ್ ಅಳವಡಿಸಲಾಗಿದೆ.


ಆಲಂಕಾರು ಕಂದ್ಲಾಜೆ ಪಂಜೋಡಿ ರಸ್ತೆ ಅಭಿವೃದ್ಧಿಗೆ 99 ಲಕ್ಷ, ನಗ್ರಿ ಪರಿಶಿಷ್ಟಜಾತಿ ಕಾಲೋನಿಗೆ 18 ಲಕ್ಷ, ಉಜುರ್ಲಿ ಪರಿಶಿಷ್ಟ ಜಾತಿ ಕಾಲೋನಿಗೆ ರಸ್ತೆ ಅಭಿವೃದ್ದಿಗೆ 64 ಲಕ್ಷ,,ಕಕ್ವೆ ರಸ್ತೆ ಅಭಿವೃದ್ದಿಗೆ 50ಲಕ್ಷ,ಮಿತ್ತನಡ್ಕ ಶರವೂರು ರಸ್ತೆಗೆ 29.85 ಒಟ್ಟು 260.85 ಲಕ್ಷ ಅನುದಾನ ನೀಡಿದ ಬ್ಯಾನರ್ ಹಾಗು ,ತಾ.ಪಂ ಹಾಗು ಜಿ.ಪಂ ವತಿಯಿಂದ 10 ಲಕ್ಷ ಒಟ್ಟು ಅನುದಾನ ನೀಡಿದ ಬ್ಯಾನರ್ ನ್ನು ಆಲಂಕಾರು ಗ್ರಾ.ಪಂ ಹಾಗು ಸಾರ್ವಜನಿಕರ ಪರವಾಗಿ ಅಳವಡಿಸಲಾಗಿದೆ.

LEAVE A REPLY

Please enter your comment!
Please enter your name here