ಪುತ್ತೂರು: ನೆಹರುನಗರದಲ್ಲಿನ ಉಪಾಧ್ಯಾಯ ಕಾಂಪ್ಲೆಕ್ಸ್‌ನ ಒಂದನೇ ಮಹಡಿಯಲ್ಲಿ(ಎಡಕ್ಕಾನ ಟ್ರೇಡರ್ಸ್/ಕಪಿಲಾ ಗ್ರಾನೈಟ್ ಬಿಲ್ಡಿಂಗ್) ನಕ್ಷ ಕನ್‌ಸ್ಟ್ರಕ್ಷನ್ ಸಂಸ್ಥೆಯು ಮಾ.23 ರಂದು ಬೆಳಿಗ್ಗೆ ಶುಭಾರಂಭಗೊಂಡಿತು.
ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್‌ರವರು ನೂತನ ಸಂಸ್ಥೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ, ಮಾತನಾಡಿ, ನಗರಸಭೆ ದಿನದಿಂದ ದಿನ ಬೆಳೆಯುತ್ತಿದೆ. ಪುತ್ತೂರು ಪುರಸಭೆಯು ಇದೀಗ ನಗರಸಭೆಯಾಗಿ ಮೇಲ್ದರ್ಜೆಗೇರಿದೆ. ನಗರಸಭೆ ವ್ಯಾಪ್ತಿಯಲ್ಲಿ ಕಳೆದ ಏಳೆಂಟು ವರ್ಷಗಳಿಂದ ವಾಣಿಜ್ಯ ಸಂಕೀರ್ಣಗಳ ನಿರ್ಮಾಣವಾಗಿದೆ. ನಗರಸಭೆಗೆ ಪೂರಕವಾಗಿ ಉತ್ತಮ ಲೇಔಟ್‌ಗಳ ನಿರ್ಮಾಣ, ಸುಸಜ್ಜಿತ ಹಾಗೂ ವಿವಿಧ ವಿನ್ಯಾಸದ ಮನೆಗಳ ನಿರ್ಮಾಣದತ್ತ ಈ ಸಂಸ್ಥೆಯು ಹೆಜ್ಜೆಯನ್ನಿಡಲಿದೆ. ಜಿಲ್ಲಾ ಕೇಂದ್ರವಾಗಿ ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ಸಂಸ್ಥೆಗಳ ಉದಯ ಪೂರಕವಾಗಿದೆ ಎಂದರು.
ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭರವರು ನೂತನ ಸಂಸ್ಥೆಯನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಯೋಚನೆ ಹಾಗೂ ಯೋಜನೆಯ ದಾರಿಯಲ್ಲಿ ಅಭಿವೃದ್ಧಿ ಪಥದತ್ತ ಹೊಸ ಹೊಸ ಯುವಕರು ಮುಂದೆ ಬರಬೇಕಾಗಿರುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಹೊಸ ಯುವಕರಿಗೆ ಪ್ರೋತ್ಸಾಹವನ್ನು ಕೊಡಬೇಕು. ಒಂದೇ ಸಲ ಕೋಟಿಯ ಬಜೆಟ್ ನಿರ್ಮಾಣ ಮಾಡಬೇಕು ಎಂಬುದಲ್ಲ. ಯುವಕರು ತಮ್ಮ ಕಾರ್ಯದಲ್ಲಿ ಹಂತ ಹಂತವಾಗಿ ಬೆಳೆದು ಕಾರ್ಯ ಕೌಶಲ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು. ಪುತ್ತೂರು ನಗರ ಮಹಾನಗರ ಆಗುವ ದಿಶೆಯಲ್ಲಿ ಬಹಳ ವೇಗವಾಗಿ ಬೆಳೆಯುತ್ತಿದೆ. ನೂತನ ಪೀಳಿಗೆಯ ಇಂಜಿನಿಯರ್‌ಗಳು ಹಿರಿಯ ಇಂಜಿನಿಯರ್‌ಗಳಿಗೆ ಸ್ಪರ್ಧಿಗಳು ಅಂತ ತಿಳಿಯಬಾರದು. ಹಿರಿಯ ಇಂಜಿನಿಯರ್‌ಗಳ ಗುಂಪಿನಲ್ಲಿ ಕಿರಿಯ ಇಂಜಿನಿಯರ್‌ಗಳನ್ನು ಸೇರಿಸಿ ಅವರನ್ನು ಬೆಳೆಸುವತ್ತ ಕಾರ್ಯ ಸಾಗಬೇಕು ಎಂದು ಹೇಳಿ ಶುಭ ಹಾರೈಸಿದರು.
ಪುತ್ತೂರು ಸೃಷ್ಠಿ ಕನ್‌ಸ್ಟ್ರಕ್ಷನ್‌ನ ಶಿವಪ್ರಸಾದ್ ಟಿ. ಮಾತನಾಡಿ, ನಾನು ಇಂಜಿನಿಯರ್ ಕ್ಷೇತ್ರದಲ್ಲಿ ಬೆಳೆಯುತ್ತಿರುವವನಾಗಿದ್ದರೂ, ಹೃಷಿಕೇಶ್ ಕೆ.ಎಸ್ ಹಾಗೂ ಪ್ರತೀಕ್ ಪಿ.ಜಿರವರ ಆ ಕಾರ್ಯಕ್ಷಮತೆ ಹಾಗೂ ಕಾರ್ಯದಕ್ಷತೆಯನ್ನು ನಿಜಕ್ಕೂ ಮೆಚ್ಚಬೇಕಾದದ್ದು. ಒಳ್ಳೆಯ ವೃತ್ತಿಪರ ಕೌಶಲ್ಯ ಹಾಗೂ ಸಂವಹನ ಕೌಶಲ್ಯವನ್ನು ಕಡಿಮೆ ಅವಧಿಯಲ್ಲಿಯೇ ಇವರೀರ್ವರು ಯುವಕರು ಮೈಗೂಡಿಸಿಕೊಂಡಿರುವುದು ಶ್ಲಾಘನೀಯವಾಗಿದೆ. ಯಾರೇ ಆಗಲಿ, ತಾನು ಸ್ವಂತ ಮಾಡುತ್ತೇನೆ ಅಂತ ಹೋದವರಿಗೆ ತಡೆಯಬಾರದು ಬದಲಾಗಿ ಪ್ರೋತ್ಸಾಹ ನೀಡಬೇಕು. ಹೃಷಿಕೇಶ್ ಹಾಗೂ ಪ್ರತೀಕ್‌ರವರ ಕಾರ್ಯವೈಖರಿಯಿಂದ ನನ್ನ ಸೃಷ್ಟಿ ಕನ್‌ಸ್ಟ್ರಕ್ಷನ್‌ನ ಹೆಸರು ಜಾಸ್ತಿಯಾಗಿದೆ. ಇವರೀರ್ವರಲ್ಲೂ ಸಾಧಿಸಿ ತೋರಿಸುತ್ತೇವೆ ಎಂಬ ತುಡಿತವಿದೆ ಮಾತ್ರವಲ್ಲ ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ದೊರಕಬಲ್ಲುದು ಎಂದು ಹೇಳಿ ಶುಭ ಹಾರೈಸಿದರು.
ಮುಳಿಯ ಕೇಶವ ನಿಲಯದ ಶ್ರೀಮತಿ ಕಾವೇರಿ ಅಮ್ಮ ಮಾತನಾಡಿ, ಸಂಸ್ಥೆಯು ಉತ್ತಮ ಹಾದಿಯತ್ತ ಮುನ್ನೆಡೆಯಲಿ. ಎಲ್ಲರಿಗೂ ಅಚ್ಚುಮೆಚ್ಚಿನ ಸಂಸ್ಥೆಯಾಗಿ ಮೂಡಿ ಬರಲಿ, ಎಲ್ಲರ ಪ್ರೋತ್ಸಾಹ ಹಾಗೂ ಆಶೀರ್ವಾದ ಈ ಸಂಸ್ಥೆಗಿರಲಿ ಎಂದು ಹಾರೈಸಿದರು.
ಪ್ರಶಾಂತಿ ಆಯುರ್ವೇದಿಕ್ ಸೆಂಟರ್‌ನ ಡಾ.ಶಶಿಧರ್ ಕಜೆ ಮಾತನಾಡಿ, ನೂತನ ಸಂಸ್ಥೆಯ ಕಾರ್ಯಾಲಯ ಈಗ ಉದ್ಘಾಟನೆ ಆಗಿದೆ. ಇವರ ನೇತೃತ್ವದಲ್ಲಿ ಉತ್ತಮ ಮನೆಗಳು, ಕಾಂಪ್ಲೆಕ್ಸ್‌ಗಳು, ಪ್ರಾಜೆಕ್ಟ್‌ಗಳು ನಿರ್ಮಾಣ ಆಗಲಿ ಎಂದು ಶುಭ ಹಾರೈಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೊಂಕೋಡಿ ಕೃಷ್ಣ ಭಟ್, ಕೋಲ್ಫೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುರೇಶ್ ಕೆ.ಎಸ್ ಮುಕ್ಕುಡ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಟಿ.ಎಸ್ ಸುಬ್ರಹ್ಮಣ್ಯ ಭಟ್, ಮಿತ್ತೂರು ಕನ್‌ಸ್ಟ್ರಕ್ಷನ್ಸ್‌ನ ರಮೇಶ್ ಭಟ್, ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಪ್ರಶಾಂತ್ ಶೆಣೈ, ನ್ಯಾಯವಾದಿ ಬೆಟ್ಟ ಈಶ್ವರ್ ಭಟ್, ಪತ್ನಿ ಶ್ರೀಮತಿ ಪದ್ಮಿನಿ ಭಟ್, ನಕ್ಷ ಕನ್‌ಸ್ಟ್ರಕ್ಷನ್‌ನ ಇಂಜಿನಿಯರ್‌ಗಳಾದ ಹೃಷಿಕೇಶ್ ಕೆ.ಎಸ್‌ರವರ ತಂದೆ ಡಾ.ಸೀತಾರಾಮ ಕೆ.ಎಸ್ ಹಾಗೂ ತಾಯಿ ರೂಪಲಕ್ಷ್ಮೀ ಮತ್ತು ಕುಟುಂಬಿಕರು, ಪ್ರತೀಕ್ ಪಿ.ಜಿರವರ ತಂದೆ ಗೋಪಾಲಕೃಷ್ಣ ಭಟ್ ಹಾಗೂ ತಾಯಿ ಸುಮಿತ್ರ ಮತ್ತು ಕುಟುಂಬಿಕರು ಸಹಿತ ಹಲವರು ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು. ನೂತನ ಸಂಸ್ಥೆಯ ಮುಖ್ಯಸ್ಥರಾದ ಹೃಷಿಕೇಶ್ ಕೆ.ಎಸ್ ಸ್ವಾಗತಿಸಿ, ಪ್ರತೀಕ್ ಪಿ.ಜಿ ವಂದಿಸಿದರು.
ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಪುತ್ತೂರಿಗೆ ಮತ್ತೊಂದು ಹಿರಿಮೆ
ನೆಹರುನಗರದಲ್ಲಿ ನಕ್ಷ ಕನ್‌ಸ್ಟ್ರಕ್ಷನ್ ಶುಭಾರಂಭ
ಪೊಟ ವಾಟ್ಸಪ್-ನಕ್ಷ(೩ ಪೊಟೊ)
ಪುತ್ತೂರು: ನೆಹರುನಗರದಲ್ಲಿನ ಉಪಾಧ್ಯಾಯ ಕಾಂಪ್ಲೆಕ್ಸ್‌ನ ಒಂದನೇ ಮಹಡಿಯಲ್ಲಿ(ಎಡಕ್ಕಾನ ಟ್ರೇಡರ್ಸ್/ಕಪಿಲಾ ಗ್ರಾನೈಟ್ ಬಿಲ್ಡಿಂಗ್) ನಕ್ಷ ಕನ್‌ಸ್ಟ್ರಕ್ಷನ್ ಸಂಸ್ಥೆಯು ಮಾ.೨೩ ರಂದು ಬೆಳಿಗ್ಗೆ ಶುಭಾರಂಭಗೊಂಡಿತು.
ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್‌ರವರು ನೂತನ ಸಂಸ್ಥೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ, ಮಾತನಾಡಿ, ನಗರಸಭೆ ದಿನದಿಂದ ದಿನ ಬೆಳೆಯುತ್ತಿದೆ. ಪುತ್ತೂರು ಪುರಸಭೆಯು ಇದೀಗ ನಗರಸಭೆಯಾಗಿ ಮೇಲ್ದರ್ಜೆಗೇರಿದೆ. ನಗರಸಭೆ ವ್ಯಾಪ್ತಿಯಲ್ಲಿ ಕಳೆದ ಏಳೆಂಟು ವರ್ಷಗಳಿಂದ ವಾಣಿಜ್ಯ ಸಂಕೀರ್ಣಗಳ ನಿರ್ಮಾಣವಾಗಿದೆ. ನಗರಸಭೆಗೆ ಪೂರಕವಾಗಿ ಉತ್ತಮ ಲೇಔಟ್‌ಗಳ ನಿರ್ಮಾಣ, ಸುಸಜ್ಜಿತ ಹಾಗೂ ವಿವಿಧ ವಿನ್ಯಾಸದ ಮನೆಗಳ ನಿರ್ಮಾಣದತ್ತ ಈ ಸಂಸ್ಥೆಯು ಹೆಜ್ಜೆಯನ್ನಿಡಲಿದೆ. ಜಿಲ್ಲಾ ಕೇಂದ್ರವಾಗಿ ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ಸಂಸ್ಥೆಗಳ ಉದಯ ಪೂರಕವಾಗಿದೆ ಎಂದರು.
ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭರವರು ನೂತನ ಸಂಸ್ಥೆಯನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಯೋಚನೆ ಹಾಗೂ ಯೋಜನೆಯ ದಾರಿಯಲ್ಲಿ ಅಭಿವೃದ್ಧಿ ಪಥದತ್ತ ಹೊಸ ಹೊಸ ಯುವಕರು ಮುಂದೆ ಬರಬೇಕಾಗಿರುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಹೊಸ ಯುವಕರಿಗೆ ಪ್ರೋತ್ಸಾಹವನ್ನು ಕೊಡಬೇಕು. ಒಂದೇ ಸಲ ಕೋಟಿಯ ಬಜೆಟ್ ನಿರ್ಮಾಣ ಮಾಡಬೇಕು ಎಂಬುದಲ್ಲ. ಯುವಕರು ತಮ್ಮ ಕಾರ್ಯದಲ್ಲಿ ಹಂತ ಹಂತವಾಗಿ ಬೆಳೆದು ಕಾರ್ಯ ಕೌಶಲ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು. ಪುತ್ತೂರು ನಗರ ಮಹಾನಗರ ಆಗುವ ದಿಶೆಯಲ್ಲಿ ಬಹಳ ವೇಗವಾಗಿ ಬೆಳೆಯುತ್ತಿದೆ. ನೂತನ ಪೀಳಿಗೆಯ ಇಂಜಿನಿಯರ್‌ಗಳು ಹಿರಿಯ ಇಂಜಿನಿಯರ್‌ಗಳಿಗೆ ಸ್ಪರ್ಧಿಗಳು ಅಂತ ತಿಳಿಯಬಾರದು. ಹಿರಿಯ ಇಂಜಿನಿಯರ್‌ಗಳ ಗುಂಪಿನಲ್ಲಿ ಕಿರಿಯ ಇಂಜಿನಿಯರ್‌ಗಳನ್ನು ಸೇರಿಸಿ ಅವರನ್ನು ಬೆಳೆಸುವತ್ತ ಕಾರ್ಯ ಸಾಗಬೇಕು ಎಂದು ಹೇಳಿ ಶುಭ ಹಾರೈಸಿದರು.
ಪುತ್ತೂರು ಸೃಷ್ಠಿ ಕನ್‌ಸ್ಟ್ರಕ್ಷನ್‌ನ ಶಿವಪ್ರಸಾದ್ ಟಿ. ಮಾತನಾಡಿ, ನಾನು ಇಂಜಿನಿಯರ್ ಕ್ಷೇತ್ರದಲ್ಲಿ ಬೆಳೆಯುತ್ತಿರುವವನಾಗಿದ್ದರೂ, ಹೃಷಿಕೇಶ್ ಕೆ.ಎಸ್ ಹಾಗೂ ಪ್ರತೀಕ್ ಪಿ.ಜಿರವರ ಆ ಕಾರ್ಯಕ್ಷಮತೆ ಹಾಗೂ ಕಾರ್ಯದಕ್ಷತೆಯನ್ನು ನಿಜಕ್ಕೂ ಮೆಚ್ಚಬೇಕಾದದ್ದು. ಒಳ್ಳೆಯ ವೃತ್ತಿಪರ ಕೌಶಲ್ಯ ಹಾಗೂ ಸಂವಹನ ಕೌಶಲ್ಯವನ್ನು ಕಡಿಮೆ ಅವಧಿಯಲ್ಲಿಯೇ ಇವರೀರ್ವರು ಯುವಕರು ಮೈಗೂಡಿಸಿಕೊಂಡಿರುವುದು ಶ್ಲಾಘನೀಯವಾಗಿದೆ. ಯಾರೇ ಆಗಲಿ, ತಾನು ಸ್ವಂತ ಮಾಡುತ್ತೇನೆ ಅಂತ ಹೋದವರಿಗೆ ತಡೆಯಬಾರದು ಬದಲಾಗಿ ಪ್ರೋತ್ಸಾಹ ನೀಡಬೇಕು. ಹೃಷಿಕೇಶ್ ಹಾಗೂ ಪ್ರತೀಕ್‌ರವರ ಕಾರ್ಯವೈಖರಿಯಿಂದ ಅವರದ್ದು ಮಾತ್ರವಲ್ಲ ನನ್ನ ಸೃಷ್ಟಿ ಕನ್‌ಸ್ಟ್ರಕ್ಷನ್‌ನ ಹೆಸರು ಜಾಸ್ತಿಯಾಗಿದೆ. ಇವರೀರ್ವರಲ್ಲೂ ಸಾಧಿಸಿ ತೋರಿಸುತ್ತೇವೆ ಎಂಬ ತುಡಿತವಿದೆ ಮಾತ್ರವಲ್ಲ ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ದೊರಕಬಲ್ಲುದು ಎಂದು ಹೇಳಿ ಶುಭ ಹಾರೈಸಿದರು.
ಮುಳಿಯ ಕೇಶವ ನಿಲಯದ ಶ್ರೀಮತಿ ಕಾವೇರಿ ಅಮ್ಮ ಮಾತನಾಡಿ, ಸಂಸ್ಥೆಯು ಉತ್ತಮ ಹಾದಿಯತ್ತ ಮುನ್ನೆಡೆಯಲಿ. ಎಲ್ಲರಿಗೂ ಅಚ್ಚುಮೆಚ್ಚಿನ ಸಂಸ್ಥೆಯಾಗಿ ಮೂಡಿ ಬರಲಿ, ಎಲ್ಲರ ಪ್ರೋತ್ಸಾಹ ಹಾಗೂ ಆಶೀರ್ವಾದ ಈ ಸಂಸ್ಥೆಗಿರಲಿ ಎಂದು ಹಾರೈಸಿದರು. ಪ್ರಶಾಂತಿ ಆಯುರ್ವೇದಿಕ್ ಸೆಂಟರ್‌ನ ಡಾ.ಶಶಿಧರ್ ಕಜೆ ಮಾತನಾಡಿ, ನೂತನ ಸಂಸ್ಥೆಯ ಕಾರ್ಯಾಲಯ ಈಗ ಉದ್ಘಾಟನೆ ಆಗಿದೆ. ಇವರ ನೇತೃತ್ವದಲ್ಲಿ ಉತ್ತಮ ಮನೆಗಳು, ಕಾಂಪ್ಲೆಕ್ಸ್‌ಗಳು, ಪ್ರಾಜೆಕ್ಟ್‌ಗಳು ನಿರ್ಮಾಣ ಆಗಲಿ ಎಂದು ಶುಭ ಹಾರೈಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೊಂಕೋಡಿ ಕೃಷ್ಣ ಭಟ್, ಕೋಲ್ಫೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುರೇಶ್ ಕೆ.ಎಸ್ ಮುಕ್ಕುಡ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಟಿ.ಎಸ್ ಸುಬ್ರಹ್ಮಣ್ಯ ಭಟ್, ಮಿತ್ತೂರು ಕನ್‌ಸ್ಟ್ರಕ್ಷನ್ಸ್‌ನ ರಮೇಶ್ ಭಟ್, ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಪ್ರಶಾಂತ್ ಶೆಣೈ, ನ್ಯಾಯವಾದಿ ಬೆಟ್ಟ ಈಶ್ವರ್ ಭಟ್ ಪತ್ನಿ ಶ್ರೀಮತಿ ಪದ್ಮಿನಿ ಭಟ್, ನಕ್ಷ ಕನ್‌ಸ್ಟ್ರಕ್ಷನ್‌ನ ಇಂಜಿನಿಯರ್‌ಗಳಾದ ಹೃಷಿಕೇಶ್ ಕೆ.ಎಸ್‌ರವರ ತಂದೆ ಡಾ.ಸೀತಾರಾಮ ಕೆ.ಎಸ್ ಹಾಗೂ ತಾಯಿ ರೂಪಲಕ್ಷ್ಮೀ ಮತ್ತು ಕುಟುಂಬಿಕರು, ಪ್ರತೀಕ್ ಪಿ.ಜಿರವರ ತಂದೆ ಗೋಪಾಲಕೃಷ್ಣ ಭಟ್ ಹಾಗೂ ತಾಯಿ ಸುಮಿತ್ರ ಮತ್ತು ಕುಟುಂಬಿಕರು ಸಹಿತ ಹಲವರು ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು. ನೂತನ ಸಂಸ್ಥೆಯ ಮುಖ್ಯಸ್ಥರಾದ ಹೃಷಿಕೇಶ್ ಕೆ.ಎಸ್ ಸ್ವಾಗತಿಸಿ, ಪ್ರತೀಕ್ ಪಿ.ಜಿ ವಂದಿಸಿದರು.
ಶಾಸಕರಿಂದ 3ಡಿ ಡಿಸೈನ್ ಉದ್ಘಾಟನೆ..
ಶಾಸಕ ಸಂಜೀವ ಮಠಂದೂರುರವರು ನೂತನ ಸಂಸ್ಥೆಯ 3ಡಿ ಡಿಸೈನ್ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಭೆ ಎನ್ನುವುದು ದೇವರು ನೀಡಿದ ವರ. ಯುವಸಮೂಹ ದೇವರು ನೀಡಿದಂತಹ ಪ್ರತಿಭೆಯನ್ನು ಪ್ರಚುರಗೊಳಿಸುವಂತಾಗಬೇಕು. ಮಾನವನ ಮನಸ್ಸಿಗೆ ಹಿಡಿಸತಕ್ಕ ವಿವಿಧ ವಿನ್ಯಾಸದ, ಸುಸಜ್ಜಿತ ಮನೆಯ ನಿರ್ಮಾಣದ ಕನಸನ್ನು ಹೊತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆನ್ನುವ ಹಂಬಲದೊಂದಿಗೆ ಕಾರ್ಯಪ್ರವೃತ್ತರಾಗಿರುವ ಯುವಕರಾದ ಹೃಷಿಕೇಶ್ ಕೆ.ಎಸ್ ಹಾಗೂ ಪ್ರತೀಕ್ ಪಿ.ಜಿ.ರವರ ದಿಟ್ಟ ಹೆಜ್ಜೆಗೆ ಶ್ಲಾಘನೆ ವ್ಯಕ್ತಪಡಿಸಬೇಕಾಗಿದೆ. ಈಗಾಗಲೇ ಕೆಲವೊಂದು ಪ್ರಾಜೆಕ್ಟ್‌ಗಳನ್ನು ಹಮ್ಮಿಕೊಂಡು ಸರ್ವತ್ರ ಶ್ಲಾಘನೆಗೆ ಪಾತ್ರರಾಗಿರುವುದು ಅವರಲ್ಲಿನ ವ್ಯವಹಾರ ಕೌಶಲ್ಯತೆ, ಚತುರತೆ ಎದ್ದು ಕಾಣಿಸುತ್ತದೆ. ಮುಂದಿನ ದಿನಗಳಲ್ಲಿ ಈ ಈರ್ವರು ಯುವಕರು ಮತ್ತಷ್ಟು ಪ್ರಾಜೆಕ್ಟ್‌ಗಳನ್ನು ಸಮಾಜಕ್ಕೆ ಪರಿಚಯಿಸಿ ಸಾಧನೆ ಮೆರೆಯಲಿ ಎಂದು ಹೇಳಿ ಶುಭ ಹಾರೈಸಿದರು.
ಸಹಕಾರ, ಆಶೀರ್ವಾದವಿರಲಿ…
ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆನ್ನುವ ಹೆಬ್ಬಯಕೆ ನಮ್ಮದಾಗಿದೆ. ನಮ್ಮಲ್ಲಿರುವ ಪ್ರತಿಭೆಯನ್ನು ಹೊರಸೂಸುವಂತಹ ಅವಕಾಶ ನಮ್ಮ ಎದುರಿಗಿದೆ. ಮಾನವನ ಇಚ್ಛೆಗೆ ತಕ್ಕಂತೆ ಸೌದರ್ಯವನ್ನು ವೃದ್ಧಿಸುವಂತಹ ಗುಣಮಟ್ಟದ ಮನೆಗಳನ್ನು, ಕಾಂಪ್ಲೆಕ್ಸ್‌ಗಳನ್ನು ನಿರ್ಮಿಸಿಕೊಡಲು ನಾವು ಸದಾ ಬದ್ಧರಾಗಿದ್ದೇವೆ. ಗ್ರಾಹಕರ ಯೋಚನೆ ಹಾಗೂ ಯೋಜನೆಗಳನ್ನು ಸದ್ವಿನಿಯೋಗಗೊಳಿಸುವಲ್ಲಿ ಹಾಗೂ ಸಂಸ್ಥೆಯು ಉತ್ತಮ ಮಟ್ಟದಲ್ಲಿ ಅಭಿವೃದ್ಧಿಯಾಗಲು ಎಲ್ಲರ ಸಹಕಾರ ಹಾಗೂ ಆಶೀರ್ವಾದ ನಮ್ಮ ಮೇಲಿರಲಿ.
-ಹೃಷಿಕೇಶ್ ಕೆ.ಎಸ್/ಪ್ರತೀಕ್ ಪಿ.ಜಿ, ನಕ್ಷ ಕನ್‌ಸ್ಟ್ರಕ್ಷನ್
ಚಾಲ್ತಿಯಲ್ಲಿರುವ ಪ್ರಾಜೆಕ್ಟ್‌ಗಳು…
-ಕೃಷ್ಣನಗರದಲ್ಲಿ 4ಬಿಎಚ್‌ಕೆ ರೆಸಿಡೆನ್ಸಿಯಲ್ ಹೌಸ್
-ಅಳಕೆಮಜಲು ಎಂಬಲ್ಲಿ 2ಬಿಎಚ್‌ಕೆ ರೆಸಿಡೆನ್ಸಿಯಲ್ ಹೌಸ್
-ಕಲಮಡ್ಕ ಎಂಬಲ್ಲಿ ಗೋಡೌನ್
ಪೂರ್ಣಗೊಂಡಿರುವ ಪ್ರಾಜೆಕ್ಟ್..
-ಕರ್ಮಲ ಎಂಬಲ್ಲಿ ಪ್ರಥಮ ಮಹಡಿಯ ರೆಸಿಡೆನ್ಸಿಯಲ್ ಹೌಸ್
ಮುಂಬರುವ ಪ್ರಾಜೆಕ್ಟ್..
-ಅಳಕೆಮಜಲು ಎಂಬಲ್ಲಿ ೨ಬಿಎಚ್‌ಕೆ ರೆಸಿಡೆನ್ಸಿಯಲ್ ಹೌಸ್