ಪುಣ್ಚತ್ತಾರು ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬ ದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ

0

ಕ್ಷೇತ್ರದ ತಂತ್ರಿಯವರಿಂದ ಪ್ರತಿಷ್ಠೆ, ಬ್ರಹ್ಮಕಲಶದ ದಿನ ನಿಗದಿಗಾಗಿ ನಿರ್ಧಾರ

ಕಾಣಿಯೂರು: ಪುಣ್ಚತ್ತಾರು ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬ ದೇವಿ ದೇವಸ್ಥಾನದ ಜೀರ್ಣೋದ್ಧಾರ ಬಗ್ಗೆ ಸಭೆ ನಡೆಯಿತು. ದೇವಸ್ಥಾನದ ಅಭಿವೃದ್ಧಿ ಕಾರ್ಯ ಬಗ್ಗೆ ಹಾಗೂ ಕ್ಷೇತ್ರದ ತಂತ್ರಿಯವರಲ್ಲಿ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ದಿನ ನಿಗದಿ ಪಡಿಸುವುದಾಗಿ ನಿರ್ಣಯಿಸಲಾಯಿತು.

ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವೆಂಕಟ್ರಮಣ ಆಚಾರ್ಯ ಕರಿಮಜಲು, ಅಧ್ಯಕ್ಷರಾದ ಶೇಷಪ್ಪ ಗೌಡ ಬೆದ್ರಂಗಳ, ಗೌರವ ಸಲಹೆಗಾರರಾದ ಡಾ| ದೇವಿಪ್ರಸಾದ್ ಕಾನತ್ತೂರ್, ಗಣೇಶ್ ಉದನಡ್ಕ, ಉಪಾಧ್ಯಕ್ಷ ಪ್ರದೀಪ್ ಬೊಬ್ಬೆಕೇರಿ,ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಆಂತರಿಕ ಲೆಕ್ಕ ಪರಿಶೋಧಕರಾದ ಬಾಲಕೃಷ್ಣ ರೈ ಕಾಸ್ಪಾಡಿಗುತ್ತು, ಪ್ರಶಾಂತ್ ಮುರುಳ್ಯ, ಕೋಶಾಧಿಕಾರಿ ಭವಿಷ್ ಕರಿಮಜಲು, ಜತೆ ಕಾರ್ಯದರ್ಶಿ ಮೋಹನ್ ಕರಿಮಜಲು, ವಾಸುದೇವ ಆಚಾರ್ಯ, ವಿಶ್ವನಾಥ ರೈ ಮಾಳ, ನಾಗೇಶ್ ರೈ ಮಾಳ, ಗಣೇಶ್ ಭಟ್ ಶೇರ, ಜನಾರ್ದನ ಆಚಾರ್ಯ, ಕೃಷ್ಣ ಆಚಾರ್ಯ, ರಾಜೇಶ್, ಪ್ರಮೋದ್, ರಾಕೇಶ್, ದಿನೇಶ್ ಪೈಕ ಮತ್ತೀತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here