ಆಧಾರ್-ಪ್ಯಾನ್ ಜೋಡಣೆಗೆ ಮಾ.31 ಕೊನೆಯ ದಿನ

0

ಬೆಂಗಳೂರು:ಆಧಾರ್-ಪ್ಯಾನ್ ಕಾರ್ಡ್ ಜೋಡಣೆ ಮಾಡುವುದಕ್ಕೆ 1 ಸಾವಿರ ರೂ.ದಂಡ ಸಹಿತ ಮಾರ್ಚ್ 31ರಂದು ಕೊನೆಯ ದಿನವಾಗಿದೆ.
ನಿರ್ದಿಷ್ಟ ಸೇವೆಗಳನ್ನು ಪಡೆಯುವುದಕ್ಕೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಾಗಿದ್ದು, ಐಟಿಆರ್‌ಎಸ್ ಸಲ್ಲಿಸುವುದಕ್ಕೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಲ್ಲ. ಆದರೆ ಐಟಿ ಇಲಾಖೆ ಆಧಾರ್ ಪ್ಯಾನ್ ಕಾರ್ಡ್ ಜೋಡಣೆಯಾಗದೇ ಇದ್ದಲ್ಲಿ ರಿಟರ್ನ್ಸ್ ಪ್ರಕ್ರಿಯೆಯನ್ನು ಮುಂದುವರೆಸುವುದಿಲ್ಲ. ಹಲವರು ಈಗಾಗಲೇ ಜೋಡಣೆ ಮಾಡುತ್ತಿದ್ದು ಇನ್ನೂ ಕೆಲವರು ಜೋಡಣೆಯಾಗಿದೆಯೇ ಇಲ್ಲವೇ ಎಂಬುದನ್ನು ಮರೆತಿದ್ದಾರೆ. ಆಧಾರ್-ಪ್ಯಾನ್ ಜೋಡಣೆಯಾಗಿದೆಯೇ ಇಲ್ಲವೇ? ಎಂಬುದನ್ನು ತಿಳಿಯುವುದಕ್ಕೆ ಆನ್‌ಲೈನ್ ಹಾಗೂ ಆಫ್ ಲೈನ್‌ಗಳಲ್ಲಿ ಅವಕಾಶವಿದೆ.

ಆನ್ ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?: ಆದಾಯ ತೆರಿಗೆ ಇ-ಫೈಲಿಂಗ್ ವೆಬ್ ಸೈಟ್ https://onlineservices.tin.egov-nsdl.com/etaxnew/tdsnontds.jsp ಗೆ ಭೇಟಿ ನೀಡಿ, ಆಧಾರ್ ಸ್ಟೇಟಸ್ ಎಂಬ ಆಯ್ಕೆ ಪರಿಶೀಲಿಸಿ.

ಪ್ಯಾನ್- ಆಧಾರ್ ನಂಬರ್ ನಮೂದಿಸಿ. ಅಲ್ಲಿView Link Aadhaar Status ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೆ, ಮುಂದಿನ ಪರದೆಯಲ್ಲಿ ಸ್ಟೇಟಸ್ ಪ್ರಕಟವಾಗಲಿದೆ.
ಒಂದು ವೇಳೆ ಪರಿಶೀಲನೆ ವೇಳೆ ಜೋಡಣೆಯಾಗದೇ ಇರುವುದು ಕಂಡುಬಂದಲ್ಲಿ ಈ ಕ್ರಮಗಳನ್ನು ಅನುಸರಿಸಬಹುದಾಗಿದೆ.

ಗ್ರಾಹಕರು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್ ಮೂಲಕ ಆಧಾರ್-ಪ್ಯಾನ್ ಜೋಡಣೆ ಮಾಡಬಹುದಾಗಿದೆ. ಇದಕ್ಕೂ ಮುನ್ನ ದಂಡ ಪಾವತಿಸಬೇಕಿರುವುದರಿಂದ ಗ್ರಾಹಕರು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (NSDL) ಪೋರ್ಟಲ್‌ಗೆ ಭೇಟಿ ನೀಡಿಬೇಕಾಗುತ್ತದೆ.ಮತ್ತು ಚಲನ್ ಸಂಖ್ಯೆ. ITNS 280 ರ ಅಡಿಯಲ್ಲಿ ಮೇಜರ್ ಹೆಡ್ 0021 (ಕಂಪನಿಗಳನ್ನು ಹೊರತುಪಡಿಸಿ ಆದಾಯ ತೆರಿಗೆ) ಮತ್ತು ಮೈನರ್ ಹೆಡ್ 500 (ಇತರ ರಸೀದಿಗಳು)ನೊಂದಿಗೆ ದಂಡವನ್ನು ಪಾವತಿ ಮಾಡಬೇಕಾಗುತ್ತದೆ.

ಪ್ರಕ್ರಿಯೆಗಳ ವಿವರ: ಆಧಾರ್-ಪ್ಯಾನ್ ಜೋಡಣೆಗೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್ ಗೆ ಭೇಟಿ ನೀಡಿ, ಅಲ್ಲಿ ದಂಡ ಪಾವತಿಯನ್ನು ಕೇಳಲಾಗುತ್ತದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ, ಗ್ರಾಹಕರಿಗೆ ಎನ್‌ಎಸ್‌ಡಿಎಲ್ ವೆಬ್ ಸೈಟ್ ಕಾಣಿಸುತ್ತದೆ. ಪ್ಯಾನ್-ಆಧಾರ್ ಲಿಂಕ್ ವಿನಂತಿಯನ್ನು ಸಲ್ಲಿಸಲು ಅಲ್ಲಿರುವ ಆಯ್ಕೆಗಳ ಪೈಕಿ ಚಲನ್ ನಂ.ITNS 280 ಅಡಿಯಲ್ಲಿ ಮುಂದುವರೆಯಿರಿ.

ಅಲ್ಲಿ (tax applicable) ಅನ್ವಯವಾಗುವ ತೆರಿಗೆಯನ್ನು ಆಯ್ಕೆ ಮಾಡಿ.ನಂತರ ಒಂದೇ ಚಲನ್‌ನಲ್ಲಿ ಮೇಜರ್ ಹೆಡ್ 0021 (ಕಂಪನಿಗಳನ್ನು ಹೊರತುಪಡಿಸಿ ಆದಾಯ ತೆರಿಗೆ) ಮತ್ತು ಮೈನರ್ ಹೆಡ್ 500 (ಇತರ ರಶೀದಿಗಳು) ಅಡಿಯಲ್ಲಿ ದಂಡ ಪಾವತಿ ಮಾಡಿ ಪೇಮೆಂಟ್ ಮೋಡ್‌ನ್ನು ಆಯ್ಕೆ ಮಾಡಿ ವಿವರ ಸಲ್ಲಿಸಿ ಪ್ಯಾನ್, ವಿಳಾಸ, ಮೌಲ್ಯಮಾಪನ ವರ್ಷವನ್ನು ನಮೂದಿಸಿ ಕ್ಯಾಪ್ಚಾ ನಮೂದಿಸಿ ಪಾವತಿ ಮಾಡಿ. ದಂಡ ಪಾವತಿ ಮಾಡಿದ ಬಳಿಕ 4-5 ದಿನಗಳಲ್ಲಿ ಪ್ಯಾನ್-ಆಧಾರ್ ಜೋಡಣೆಗೆ ಮನವಿ ಸಲ್ಲಿಸಿ ದಂಡ ಪಾವತಿಸಿದ 4-5 ದಿನಗಳ ಬಳಿಕ ಜೋಡಣೆಗೆ ಮಾಡಬೇಕಾದ ಪ್ರಕ್ರಿಯೆ ಹೀಗಿದೆ.

ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ. ಮುಖ್ಯ ಪುಟದ (home page)ನ ಎಡ ಭಾಗದಲ್ಲಿನ ಕ್ವಿಕ್ ಲಿಂಕ್ಸ್ (Quick Links) ಅಡಿಯಲ್ಲಿ ಕಾಣುವ ಲಿಂಕ್ ಆಧಾರ್‌ನ್ನು ಆಯ್ಕೆ ಮಾಡಿ. ನಂತರ ಪ್ಯಾನ್ ಹಾಗೂ ಆಧಾರ್ ನಂಬರ್ ನಮೂದಿಸಿ ವ್ಯಾಲಿಡೇಟ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಪಾವತಿ ವಿವರಗಳನ್ನು ದೃಢೀಕರಿಸಲಾಗಿದೆ ಎಂಬ ಸಂದೇಶ ಪರದೆ ಮೇಲೆ ಕಾಣಿಸುತ್ತದೆ. ಮುಂದುವರೆಯಿರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ವೆಬ್ ಸೈಟ್‌ನಲ್ಲಿ ಕೆಳಲಾಗುವ ವಿವರಗಳನ್ನು ನೀಡಿ, ಲಿಂಕ್ ಆಧಾರ್ ಆಯ್ಕೆಯನ್ನು ಕ್ಲಿಕ್ ಮಾಡಿ.

ಮೊಬೈಲ್ ನಂಬರ್‌ಗೆ ಬಂದಿರುವ ಒಟಿಪಿಯನ್ನು ನಮೂದಿಸಿ ಪ್ಯಾನ್- ಆಧಾರ್ ಜೋಡಣೆಗೆ ಮನವಿ ಸಲ್ಲಿಕೆ ಯಶಸ್ವಿಯಾಗುತ್ತದೆ. ತೆರಿಗೆ ಪಾವತಿದಾರರು ಪ್ಯಾನ್ ಕಾರ್ಡ್ ಕೇಂದ್ರಕ್ಕೆ ಭೇಟಿ ನೀಡಿ ನಿರ್ದಿಷ್ಟ ಫಾರ್ಮ್ ತುಂಬಿ, ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‌ನ ಫೋಟೋಕಾಪಿಗಳನ್ನು ಸಲ್ಲಿಕೆ ಮಾಡುವ ಮೂಲಕವೂ ಆಧಾರ್-ಪ್ಯಾನ್ ಜೋಡಣೆ ಮಾಡಬಹುದಾಗಿದೆ.

ಆಧಾರ್‌- ಪ್ಯಾನ್‌ ಲಿಂಕ್‌ ಆಗಿದೆಯೇ ತಿಳಿಯಲು ಈ ಲಿಂಕ್‌ನ್ನು ಕ್ಲಿಕ್‌ ಮಾಡಿ

https://eportal.incometax.gov.in/iec/foservices/#/pre-login/bl-link-aadhaar

LEAVE A REPLY

Please enter your comment!
Please enter your name here