ಕಯ್ಯಾರುಪಾದೆ ತರವಾಡು ಮನೆಯಲ್ಲಿ ವಿಜೃಂಭಣೆಯ ನೇಮೋತ್ಸವ, ಅನ್ನಸಂತರ್ಪಣೆ

0

ಪುತ್ತೂರು: ಮಂಜೇಶ್ವರ ತಾಲೂಕಿನ ಕಯ್ಯಾರು ಗ್ರಾಮದ ಕಯ್ಯಾರುಪಾದೆ ತರವಾಡು ಮನೆಯ ದೈವ ದೇವರುಗಳ ಟ್ರಸ್ಟ್ ಇದರ ಆಶ್ರಯದಲ್ಲಿ ಕಯ್ಯಾರುಪಾದೆ ತರವಾಡು ಮನೆಯ ಗೃಹಪ್ರವೇಶ, ಧರ್ಮದೈವ ಶ್ರೀ ಧೂಮಾವತಿ, ಕುಪ್ಪೆಪಂಜುರ್ಲಿ ಚಾವಡಿ, ಕಲ್ಲುರ್ಟಿ, ಸ್ಥಳಗುಳಿಗ ದೈವಗಳ ಪ್ರತಿಷ್ಠಾ ಕಲಶೋತ್ಸವ, ಹರಿಸೇವೆ ಮತ್ತು ನೇಮೋತ್ಸವವು ಮಾ.22 ರಿಂದ ಆರಂಭಗೊಂಡು 24 ರ ತನಕ ಅದ್ಧೂರಿಯಿಂದ ಜರಗಿತು.

ವೇದಮೂರ್ತಿ ಬ್ರಹ್ಮಶ್ರೀ ತಂತ್ರಿ ಬಿ.ಎಸ್.ಎನ್ ಕಡಮಣ್ಣಾಯ ಬಂಬ್ರಾಣ ಕುಂಬ್ಳೆ ಇವರ ನೇತೃತ್ವದಲ್ಲಿ ಮಾ.23 ರಂದು ಗೃಹಪ್ರವೇಶ, ದೈವಗಳ ಪ್ರತಿಷ್ಠೆ ಕಲಶೋತ್ಸವ ನಡೆಯಿತು. ಸಂಜೆ ಕಯ್ಯಾರುಪಾದೆ ತರವಾಡು ಮನೆಯಿಂದ ಶ್ರೀ ಕಲ್ಲುರ್ಟಿ ದೈವ ಮತ್ತು ಧರ್ಮದೈವ ಚಾವಡಿಯಿಂದ ಧರ್ಮದೈವ ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಭಂಡಾರ ಇಳಿಸುವ ಕಾರ್ಯಕ್ರಮ ನಡೆದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಕಲ್ಲುರ್ಟಿ ದೈವದ ನೇಮೋತ್ಸವ ಬಳಿಕ ಕುಪ್ಪೆ ಪಂಜುರ್ಲಿ ದೈವದ ನೇಮೋತ್ಸವ ನಡೆದು ಮರುದಿನ ಬೆಳಿಗ್ಗೆ ಧರ್ಮದೈವ ಧೂಮಾವತಿ ನೇಮೋತ್ಸವ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಮಾ.24 ರಂದು ಸಂಜೆ ಸ್ಥಳ ಗುಳಿಗ ದೈವದ ನೇಮೋತ್ಸವ ಬಳಿಕ ಭಂಡಾರ ಆಯಾ ಮೂಲಸ್ಥಾನಕ್ಕೆ ತೆರಳಿ ಭಂಡಾರಿ ಏರಿಸುವ ಕಾರ್ಯಕ್ರಮ ನಡೆದು ರಾಹುಗುಳಿಗನಿಗೆ ತಂಬಿಲ ಸೇವೆ ಬಳಿಕ ಭಕ್ತಾಧಿಗಳಿಹಗೆ ಅನ್ನಸಂತರ್ಪಣೆ ನಡೆಯಿತು. ಕಯ್ಯಾರುಪಾದೆ ತರವಾಡು ಕುಟುಂಬಸ್ಥರು ಸೇರಿದಂತೆ ಊರಪರವೂರ ಸಾವಿರಾರು ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೈವದ ಗಂಧ ಪ್ರಸಾದದೊಂದಿಗೆ ಅನ್ನಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕಯ್ಯಾರುಪಾದೆ ತರವಾಡು ಮನೆಯ ಯಜಮಾನ ರಾಮಚಂದ್ರ ಅಡಪ ಕೈಕಾರ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಗೌರವಾಧ್ಯಕ್ಷ ಸೀತಾರಾಮ ರೈ ಕೈಕಾರ, ಅಧ್ಯಕ್ಷ ದೇರಣ್ಣ ಶೆಟ್ಟಿ ನಡುಬೈಲು, ಪ್ರಧಾನ ಕಾರ್ಯದರ್ಶಿ ತಾರಾನಾಥ ಶೆಟ್ಟಿ ಕುಯ್ಯಾರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಮ ರೈ ಕಲ್ಲಡ್ಕಗುತ್ತು ದೇಲಂಪಾಡಿ, ಕಯ್ಯಾರುಪಾದೆ ತರವಾಡು ಮನೆಯ ದೈವದೇವರುಗಳ ಟ್ರಸ್ಟ್‌ನ ಅಧ್ಯಕ್ಷ ವಿನೋದ್ ಶೆಟ್ಟಿ ಮುಡಾಲ, ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಕೋಶಾಧಿಕಾರಿ ಚಂದ್ರಶೇಖರ ಶೆಟ್ಟಿ ಕಯ್ಯಾರ್‌ಪಾದೆ, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಶಿವಪ್ರಸಾದ್ ಶೆಟ್ಟಿ ಬೊಳ್ಳಾವು, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಸತೀಶ್ ರೈ ಪೊನೊನಿ, ಜತೆ ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ ಕಯ್ಯಾರುಪಾದೆ, ಉಪಾಧ್ಯಕ್ಷರುಗಳಾದ ಮಹಾಬಲ ರೈ ನಡುಗ್ರಾಮ, ಜಯರಾಮ ರೈ ವರ್ಕಾಡಿ ತಮ್ಮನಬೆಟ್ಟು,ನಾರಾಯಣ ಶೆಟ್ಟಿ ಅಡ್ಯಾರ್, ಸುರೇಂದ್ರ ರೈ ಪೊನೋನಿ, ವನಜ ಎಸ್.ಶೆಟ್ಟಿ ಮಡಂದೂರು, ಟ್ರಸ್ಟ್‌ನ ಉಪಾಧ್ಯಕ್ಷರುಗಳಾದ ದೇರಣ್ಣ ಶೆಟ್ಟಿ ನಡುಬೈಲು, ಸುಜೀಳ ಪಿ.ಶೆಟ್ಟಿ ಕಾವೂರು, ಜತೆ ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ ಕಯ್ಯಾರುಪಾದೆ, ಶೋಭ ಪಿಲಿತ್ತಡ್ಕ, ಸದಸ್ಯರುಗಳಾದ ಬಾಲಕೃಷ್ಣ ಆಳ್ವ ಕಯ್ಯಾರುಪಾದೆ, ಚಂದ್ರಶೇಖರ ರೈ ಬದಿಯಡ್ಕ, ಪ್ರಶಾಂತ್ ಭಂಡಾರಿ ಕಯ್ಯಾರುಪಾದೆ, ಸತ್ಯವತಿ ಎ ಒಡ್ಡಂಬೆಟ್ಟು, ಸುಜಾತ ಎಲ್ ಶೆಟ್ಟಿ, ವಸಂತಿ ಪೊನೋನಿ, ಜಯರಾಮ ರೈ ವರ್ಕಾಡಿ, ತಾರಾನಾಥ ಶೆಟ್ಟಿ ಕುಯ್ಯಾರು, ವಿಠಲ ರೈ ಯೆಯ್ಯಾಡಿ, ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ಬಾಲಕೃಷ್ಣ ಶೆಟ್ಟಿ ಕಯ್ಯಾರುಪಾದೆ, ಗೋಪಾಲ ಆಳ್ವ ಪೆರಿಯಡ್ಕ, ಸೀತಾರಾಮ ರೈ ಕೈಕಾರ, ಸಂಚಾಲಕ ರಾಮಚಂದ್ರ ಅಡಪ ಕೈಕಾರ, ನಾರಾಯಣ ರೈ ಅಡ್ಯಾರ್, ಅಧ್ಯಕ್ಷ ಸೀತಾರಾಮ ರೈ ಕಲ್ಲಡ್ಕ ದೇಲಂಪಾಡಿ, ಉಪಾಧ್ಯಕ್ಷರುಗಳಾದ ದೇರಣ್ಣ ಶೆಟ್ಟಿ ನಡುಬೈಲು, ವಿಠಲ್ ರೈ ಯೆಯ್ಯಾಡಿ, ಜಯರಾಮ ರೈ ವರ್ಕಾಡಿ, ಮಹಾಬಲ ರೈ ನಾಡಿಗ್ರಾಮ, ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಜತೆ ಕಾರ್ಯದರ್ಶಿ ಸತೀಶ್ ಶೆಟ್ಟಿ ಪೊನೋನಿ, ಪ್ರಶಾಂತ್ ಭಂಡಾರಿ, ಪದ್ಮರಾಜ ರೈ, ಇಂದಿರಾ ಕೊಡಂಗೆ, ಪ್ರಮೀಳಾ ಶೆಟ್ಟಿ, ತಾರಾನಾಥ ಶೆಟ್ಟಿ ಮುಡಾಲ, ಚಂದ್ರಶೇಖರ ಶೆಟ್ಟಿ, ಕೋಶಾಧಿಕಾರಿ ಶಿವಪ್ರಸಾದ್ ಶೆಟ್ಟಿ ಬೊಳ್ಳಾವು, ಜತೆ ಕೋಶಾಧಿಕಾರಿ ಚಂದ್ರಶೇಖರ ರೈ ಬದಿಯಡ್ಕ, ದೇವಿಪ್ರಸಾದ್ ಶೆಟ್ಟಿ ಬೊಳ್ಳಾವು, ರಾಜಶೇಖರ ಶೆಟ್ಟಿ ಮುಡಾಲ ಸೇರಿದಂತೆ ಸದಸ್ಯರುಗಳು, ಕಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here