ಸೂರಂಬೈಲು: ಊರವರಿಂದ ಶ್ರಮದಾನದ ಮೂಲಕ ರಸ್ತೆ ನಿರ್ಮಾಣ

0

ಪಾಣಾಜೆ: ಸೂರಂಬೈಲು ಬಸ್ ತಂಗುದಾಣದಿಂದ ಸೂರಂಬೈಲು ದೈವಸ್ಥಾನ, ಸೂರಂಬೈಲು ಶಾಲೆ ಅಂಗನವಾಡಿ – ತೂಂಬಡ್ಕ ಮತ್ತು ಪಡ್ಡಾಯಿಪಾದೆ ಎಸ್ ಟಿ ಕಾಲೊನಿ ಮಿತ್ತಲಪು, ಪಾಲ್ತಮೂಲೆ, ಕೇರಳ ಸಂಪರ್ಕಿಸುವ ರಸ್ತೆಯನ್ನು ಊರವರು ಮತ್ತು ಫಲಾನುಭವಿಗಳು ಶ್ರಮದಾನದ ಮೂಲಕ ದುರಸ್ತಿ ನಡೆಸಿ ಸಂಪರ್ಕ ರಸ್ತೆ  ನಿರ್ಮಿಸಲಾಯಿತು. 

5 ಕಿ. ಮೀ. ದೂರ ಸುತ್ತುವರಿದು ಹೋಗಬೇಕಾಗಿದ್ದ ರಸ್ತೆಯು ಕೇವಲ ಅರ್ಧ ಕಿಲೋಮೀಟರ್ ಹತ್ತಿರದಲ್ಲಿ ಈ ಭಾಗದ ಜನರಿಗೆ, ಶಾಲೆ ಅಂಗನವಾಡಿ ಮಕ್ಕಳಿಗೆ ಮತ್ತು ಎಸ್ ಟಿ ಕಾಲೊನಿ ಜನರಿಗೆ ಅತ್ಯಂತ ಉಪಯುಕ್ತವಾದ ರಸ್ತೆಯಾಗಿ ನಿರ್ಮಾಣಗೊಂಡಿತು.

18 ಲಕ್ಷ ರೂ. ಮೊತ್ತದಲ್ಲಿ ಈ ರಸ್ತೆಗೆ ಶಾಸಕರ ನಿಧಿಯಲ್ಲಿ ಸೇತುವೆಯೂ ನಿರ್ಮಿಸಲಾಗಿದ್ದು ಇದನ್ನು ಮಾ. 22 ರಂದು ಆರ್ಲಪದವಿ‌ನಲ್ಲಿ ನಡೆದ ಸಮಗ್ರ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯಲ್ಲಿ ಶಾಸಕರು ಉದ್ಘಾಟಿಸಿದರು.

LEAVE A REPLY

Please enter your comment!
Please enter your name here